Top

ಮದುವೆ ಸುದ್ದಿ ಬಗ್ಗೆ ತಮನ್ನಾ ಹೇಳಿದ್ದೇನು ಗೊತ್ತಾ?

ಮದುವೆ ಸುದ್ದಿ ಬಗ್ಗೆ ತಮನ್ನಾ ಹೇಳಿದ್ದೇನು ಗೊತ್ತಾ?
X

ತನ್ನ ವಿವಾಹದ ಬಗ್ಗೆ ಇಲ್ಲಸಲ್ಲದ ಸುದ್ದಿಗಳು ಹರಿದಾಡುತ್ತಿದ್ದುದನ್ನ ನೋಡಿದ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಗರಂ ಆಗಿ ಟ್ವೀಟ್ ಮಾಡಿದ್ದಾರೆ.

ತಮನ್ನಾ ಭಾಟಿಯಾ ಮದುವೆ ಆಗ್ತಿದ್ದಾರಂತೆ. ಹುಡುಗ ಅಮೆರಿಕಾದಲ್ಲಿ ಡಾಕ್ಟರ್ ಅಂತೆ. ಮದುವೆ ಕಾರಣಕ್ಕೆ ತಮನ್ನಾ ಹೊಸ ಸಿನಿಮಾ ಒಪ್ಪಿಕೊಳ್ಳಲಿಲ್ವಂತೆ. ಹೀಗೆ ಒಂದಷ್ಟು ಅಂತೆ ಕಂತೆಗಳ ಸುದ್ದಿ ಕಳೆದೊಂದು ವಾರದಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಈ ಬಗ್ಗೆ ಕ್ಲ್ಯಾರಿಟಿ ಕೊಟ್ಟಿರುವ ತಮನ್ನಾ , ಕೊಂಚ ಸಿಟ್ಟಿನಿಂದಲೇ ಟ್ವೀಟ್ ಮಾಡಿದ್ದಾರೆ.

ಒಂದು ದಿನ ಆ್ಯಕ್ಟರ್, ಒಂದು ದಿನ ಕ್ರಿಕೆಟರ್, ಮತ್ತೊಂದು ದಿನ ಡಾಕ್ಟರ್. ಈ ರೂಮರ್ಸ್ ಕೇಳಿದ್ರೆ, ನಾನು ಗಂಡನ ಶಾಪಿಂಗ್ ಮಾಡುತ್ತಿದ್ದೇನಾ ಎಂಬ ಅನ್ನಿಸ್ತಿದೆ ಎಂದು ತಮನ್ನಾ ಗರಂ ಆಗಿದ್ದಾರೆ.ಅಲ್ಲದೇ ನಾನು ಯಾರನ್ನೂ ಮದುವೆಯಾಗುತ್ತಿಲ್ಲ. ನನ್ನ ಪೋಷಕರು ಕೂಡ ವರನನ್ನು ಹುಡುಕುತ್ತಿಲ್ಲ. ಸದ್ಯ ನಾನು ಸಿನಿಮಾವನ್ನು ಪ್ರೀತಿಸುತ್ತಿದ್ದೇನೆ.ಇಲ್ಲಸಲ್ಲದ ಸುದ್ದಿಗಳನ್ನ ಹಬ್ಬಿಸಬೇಡಿ. ಮದುವೆಯಾಗೋದಾದ್ರೆ ನಾನೇ ಎಲ್ಲರಿಗೂ ವಿಷಯ ತಿಳಿಸುತ್ತೇನೆ ಎಂದು ಹೇಳಿದ್ದಾರೆ.

ಸದ್ಯ ತಮನ್ನಾ ಬಾಲಿವುಡ್ ಕ್ವೀನ್ ರಿಮೇಕ್, ದಟ್ ಈಸ್ ಮಹಾಲಕ್ಷ್ಮೀ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ದಟ್ ಈಸ್ ಮಹಾಲಕ್ಷ್ಮೀ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಚಿರಂಜೀವಿ ಅಭಿನಯದ ಐತಿಹಾಸಿಕ ಸಿನಿಮಾ ಸೈರಾ ನರಸಿಂಹ ರೆಡ್ಡಿ, ಎಫ್​-2, ಬಾಲಿವುಡ್​ನ ಕಾಮೋಷಿ ಸಿನಿಮಾಗಳಲ್ಲಿ ಮಿಲ್ಕಿ ಬ್ಯೂಟಿ ಬ್ಯುಸಿಯಾಗಿದ್ದಾರೆ.

Next Story

RELATED STORIES