ಟಿ-20ಯಲ್ಲಿ ವೇಗದ ಅರ್ಧಶತಕದ ದಾಖಲೆ ಬರೆದ ಮಂದಣ್ಣ

X
TV5 Kannada29 July 2018 3:28 PM GMT
ನವದೆಹಲಿ: ಭಾರತದ ಯುವ ಬ್ಯಾಟ್ಸ್ಮನ್ ಸ್ಮೃತಿ ಮಂದಣ್ಣ ವನಿತೆಯರ ಟಿ-20 ಕ್ರಿಕೆಟ್ ಇತಿಹಾಸದಲ್ಲಿ ಅತೀ ವೇಗದ ಅರ್ಧಶತಕದ ದಾಖಲೆಯನ್ನು ಸರಿಗಟ್ಟಿದ ದಾಖಲೆ ಬರೆದಿದ್ದಾರೆ.
ಕೆಐಎ ಸೂಪರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಭಾನುವಾರ ನಡೆದ ಭಾನುವಾರದ ಪಂದ್ಯ ಮಳೆಯಿಂದ 6 ಓವರ್ ಗಳಿಗೆ ಕಡಿತಗೊಳಿಸಲಾಗಿತ್ತು. ಈ ಪಂದ್ಯದಲ್ಲಿ ಮಂದಣ್ಣ ಕೇವಲ 18 ಎಸೆತಗಳಲ್ಲಿ ಅರ್ಧಶತಕ ಪೂರೈಸುವ ಮೂಲಕ ನ್ಯೂಜಿಲೆಂಡ್ನ ಸೋಫಿನ್ ಡಿವೈನ್ 2005ರಲ್ಲಿ ನಿರ್ಮಿಸಿದ್ದ ದಾಖಲೆಯನ್ನು ಸರಿಗಟ್ಟಿದರು. ಸೋಫಿನ್ ಬೆಂಗಳೂರಿನಲ್ಲಿ ಭಾರತ ವಿರುದ್ಧ ಈ ಸಾಧನೆ ಮಾಡಿದ್ದರು.
ಇಂಗ್ಲೀಷ್ ಪ್ರೀಮಿಯರ್ ದೇಶೀಯ ಕ್ರಿಕೆಟ್ ಟೂರ್ನಿಯಲ್ಲಿ ಆಡಿದ ಮೊದಲ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಸ್ಮೃತಿ ಮಂದಣ್ಣ ಭಾನುವಾರ ನಡೆದ ಲಾಂಗ್ಬೊರಗ್ ವಿರುದ್ಧ ಈ ಸಾಧನೆ ಮಾಡಿದರು. ಮಂದಣ್ಣ ಅವರ ಸಾಹಸದಿಂದ ವೆಸ್ಟರ್ನ್ಸ್ಟ್ರೋಮ್ ತಂಡ 2 ವಿಕೆಟ್ಗೆ 82 ರನ್ ಕಲೆ ಹಾಕಿತು.
Next Story