Top

ಇಂಗ್ಲೆಂಡ್ ಪ್ರವಾಸದಲ್ಲಿ ವಿಶಿಷ್ಟ ಸಾಧನೆಗಳು!

ಇಂಗ್ಲೆಂಡ್ ಪ್ರವಾಸದಲ್ಲಿ ವಿಶಿಷ್ಟ ಸಾಧನೆಗಳು!
X

ಭಾರತ ತಂಡ 1932ರಿಂದ ಇಂಗ್ಲೆಂಡ್ ಪ್ರವಾಸ ಮಾಡುತ್ತಲೇ ಇದೆ. ಇಲ್ಲಿಯವರೆಗೆ 17 ಬಾರಿ ಇಂಗ್ಲೆಂಡ್​ ಪ್ರವಾಸ ಕೈಗೊಂಡಿದ್ದು, ಮೂರು ಬಾರಿ ಸರಣಿ ಗೆದ್ದುಕೊಂಡಿದೆ. 1 ಬಾರಿ ಡ್ರಾ ಹಾಗೂ 13 ಬಾರಿ ಸೋತಿದೆ. ಹಾಗಾಗಿ ಇಲ್ಲಿ ಗೆದ್ದಿದ್ದಕ್ಕಿಂತ ಸೋತಿದ್ದೇ ಹೆಚ್ಚು. ಆದರೆ ಹಲವಾರು ವಿಶಿಷ್ಟ ಸಾಧನೆಗಳು ದಾಖಲಾಗಿವೆ. ಅಂತಹ 4 ವಿಶಿಷ್ಟ ದಾಖಲೆಗಳ ವಿವರ ಇಲ್ಲಿದೆ.

ಕುಂಬ್ಳೆ ಶತಕದ ಸಾಧನೆ

ಭಾರತ ತಂಡ ಮೊದಲ ಬಾರಿ ಇಂಗ್ಲೆಂಡ್​ನಲ್ಲಿ ಸರಣಿ ಗೆದ್ದಿದ್ದು 2007ರಲ್ಲಿ. ಅಂದರೆ 21 ವರ್ಷಗಳ ನಂತರ ಮೊದಲ ಬಾರಿ ಸರಣಿ ಗೆದ್ದು ಐತಿಹಾಸಿಕ ಸಾಧನೆ ಮಾಡಿತ್ತು. ಭಾರತ ಈ ಸರಣಿಯಲ್ಲಿ ಮೊದಲ ಹಾಗೂ ಮೂರನೇ ಟೆಸ್ಟ್ ಡ್ರಾ ಮಾಡಿಕೊಂಡರೂ 2ನೇ ಟೆಸ್ಟ್ ಪಂದ್ಯ ಗೆದ್ದಿದ್ದರಿಂದ ಸರಣಿಯನ್ನೂ ಗೆದ್ದು ಇತಿಹಾಸ ಬರೆದಿತ್ತು.

ಓವಲ್​ನಲ್ಲಿ ನಡೆದ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತದ ಅಗ್ರ ಕ್ರಮಾಂಕದ ಬ್ಯಾಟ್ಸ್​ಮನ್ ಗಳು ಮುಗ್ಗರಿಸಿದ್ದರು. ಇನ್ನೇನು ಸೋತೇ ಬಿಡುತ್ತೇವೆ ಎಂದು ಭಾವಿಸಿದ್ದಾಗ ಅನಿಲ್ ಕುಂಬ್ಳೆ ಚೊಚ್ಚಲ ಶತಕ ಸಿಡಿಸಿ ತಂಡವನ್ನು ಆಧರಿಸಿದರು. 193 ಎಸೆತಗಳನ್ನು ಎದುರಿಸಿದ ಕುಂಬ್ಳೆ 16 ಬೌಂಡರಿ ಹಾಗೂ 1 ಸಿಕ್ಸರ್ ಒಳಗೊಂಡ ಅಜೇಯ 110 ರನ್ ಸಿಡಿಸಿದರು.

ಅನಿಲ್ ಕುಂಬ್ಳೆ ಶತಕದ ದಾಖಲೆ ಬರೆದಿದ್ದರಿಂದ ಭಾರತ ತಂಡದ ಮತ್ತೊಂದು ದಾಖಲೆ ಕೈ ಜಾರಿತು. ಒಬ್ಬ ಆಟಗಾರನೂ ಶತಕ ಬಾರಿಸದೇ ಪ್ರವಾಸಿ ತಂಡವೊಂದು 600ಕ್ಕಿಂತ ಹೆಚ್ಚು ಮೊತ್ತ ಗಳಿಸಿದ ಮೊದಲ ತಂಡ ಎಂಬ ಹೆಗ್ಗಳಿಕೆಯಿಂದ ವಂಚಿತವಾಯಿತು. ವಿಶೇಷ ಅಂದರೆ ಇಡೀ ಸರಣಿಯಲ್ಲಿ ಶತಕ ಬಾರಿಸಿದ ಏಕೈಕ ಭಾರತೀಯ ಆಟಗಾರ ಎಂಬ ದಾಖಲೆಯೂ ಕುಂಬ್ಳೆಗೆ ಒಲಿಯಿತು.

ಅಗರಕರ್ ಸಾಧನೆ

ಭಾರತೀಯ ಬ್ಯಾಟಿಂಗ್ ದಿಗ್ಗಜರಾದ ಸಚಿನ್ ತೆಂಡುಲ್ಕರ್ ಮತ್ತು ಸುನೀಲ್ ಗವಾಸ್ಕರ್ ಅವರಿಂದಲೂ ಸಾಧ್ಯವಾಗದ ಸಾಧನೆಯನ್ನು ಅಜಿತ್ ಅಗರ್​ಕರ್ ಮಾಡಿದರು. ಅಗರ್​ಕರ್ ಶತಕ ಬಾರಿಸುವ ಮೂಲಕ ವಿಶ್ವ ಕ್ರಿಕೆಟ್​ನ ಜನ್ಮಸ್ಥಳ ಎಂದೇ ಕರೆಯಲಾಗುವ ಲಾರ್ಡ್ಸ್​ ನಲ್ಲಿ ಈ ಸಾಧನೆ ಮಾಡಿದ ಅಪರೂಪದ ಆಟಗಾರ ಎನಿಸಿಕೊಂಡರು. ಇದಕ್ಕಾಗಿ ಕ್ರೀಡಾಂಗಣದಲ್ಲಿ ಅಗರ್​ಕರ್ ಹೆಸರು ಬರೆಯಲಾಯಿತು.

2002ರಲ್ಲಿ ನಡೆದ ಪಂದ್ಯದಲ್ಲಿ ಭಾರತ ಅಸಾಧ್ಯವಾದ 568 ರನ್ ಗುರಿ ಬೆಂಬತ್ತಿತ್ತು. ಅಂತಿಮ ದಿನ ವಿವಿಎಸ್ ಲಕ್ಷ್ಮಣ್ ಮತ್ತು ಅಗರ್​ ಕರ್​ ಅಂತಿಮ ದಿನ ತಂಡವನ್ನು ಕಾಪಾಡುವ ಜವಾಬ್ದಾರಿ ಹೊತ್ತಿದ್ದರು.

74 ರನ್ ಬಾರಿಸಿ ಬ್ಯಾಟಿಂಗ್ ಕಾಯ್ದಿರಿಸಿಕೊಂಡ ಅಗರ್​ಕರ್ ಮಾರನೇ ದಿನ ಆಶಿಶ್ ನೆಹ್ರಾ ಜೊತೆ 63 ರನ್ ಜೊತೆಯಾಟ ನಿಭಾಯಿಸಿದರು. ಆದರೆ ನೆಹ್ರಾ (19) ಔಟಾಗಿದ್ದರಿಂದ ಭಾರತ 170 ರನ್ ಗಳಿಂದ ಈ ಪಂದ್ಯ ಸೋತಿತು.

Fred Trueman

ಭಾರತ 0 ರನ್​ಗೆ 4 ವಿಕೆಟ್​

ಭಾರತ ವಿರುದ್ಧದ 1952ರ ಸರಣಿಯಲ್ಲಿ ಟೆಸ್ಟ್ ಕ್ರಿಕೆಟ್​ಗೆ ಪಾದರ್ಪಣೆ ಮಾಡಿದ ಫ್ರೆಡ್ ಟ್ರುಮೆನ್ ಮಾರಕದಾಳಿಗೆ ವಿಜಯ್ ಮರ್ಚೆಂಟ್ ನೇತೃತ್ವದ ಭಾರತ ತತ್ತರಿಸಿತು. ಅವರ ದಾಳಿ ಎಷ್ಟು ಮೊನಚಾಗಿತ್ತೆಂದರೆ ಭಾರತ ರನ್ ಖಾತೆ ತೆರೆಯುವ ಮುನ್ನವೇ 4 ವಿಕೆಟ್ ಕಳೆದುಕೊಂಡು ಬಿಟ್ಟಿತು.

ಮೊದಲ ಪಂದ್ಯದಲ್ಲೇ ಫ್ರೆಡ್ 7 ವಿಕೆಟ್ ಪಡೆದ ಸಾಧನೆ ಮಾಡಿದರೆ ಇಡೀ ಸರಣಿಯಲ್ಲಿ 29 ವಿಕೆಟ್ ಪಡೆದರು. ಈ ಸರಣಿಯನ್ನು ಭಾರತ 0-3ರಿಂದ ಕಳೆದುಕೊಂಡಿತು.

Next Story

RELATED STORIES