Top

ಹಿಮಾಲಯ ಏರಿದ್ದ ಅತ್ಯಂತ ಕಿರಿಯ ಬಾಲಕಿಯಿಂದ ಮತ್ತೊಂದು ದಾಖಲೆ

ಹಿಮಾಲಯ ಏರಿದ್ದ ಅತ್ಯಂತ ಕಿರಿಯ ಬಾಲಕಿಯಿಂದ ಮತ್ತೊಂದು ದಾಖಲೆ
X

ಆಕೆಗಿನ್ನು 17 ವರ್ಷ. ಇನ್ನು ಕಾಲೇಜಿನ ಮೆಟ್ಟಿಲು ಕೂಡ ಹತ್ತಿಲ್ಲ. ಆಗಲೇ ಜಗತ್ತಿನ ಅತೀ ಎತ್ತರದ ಹಿಮಾಲಯ ಪರ್ವತವನ್ನು ಏರಿದ ಅತ್ಯಂತ ಕಿರಿಯಳು ಎಂಬ ದಾಖಲೆಗೆ ಪಾತ್ರರಾಗಿಳು. ಇದೀಗ ದಕ್ಷಿಣ ಆಫ್ರಿಕಾದ ಅತ್ಯಂತ ಎತ್ತರದ ಪರ್ವತವನ್ನು ಕೇವಲ ಮೂರೇ ದಿನದಲ್ಲಿ ಏರಿ ವಿಶ್ವದಾಖಲೆ ಬರೆದಿದ್ದಾಳೆ.

ಹಿಮಾಲಯ ಪರ್ವತವನ್ನು ಹತ್ತಿದ ಅತ್ಯಂತ ಕಿರಿಯ ವ್ಯಕ್ತಿ ಎಂಬ ದಾಖಲೆಗೆ ಪಾತ್ರಳಾಗಿದ್ದ 17 ವರ್ಷದ ಶಿವಾಂಗಿ ಪಾಟಕ್ ಇದೀಗ ಮೂರೇ ದಿನದಲ್ಲಿ ದಕ್ಷಿಣ ಆಫ್ರಿಕಾದ ಅತ್ಯಂತ ಎತ್ತರದ ಮೌಂಟ್ ಕಿಲಿಮಂಜೆರೊ ಮಹಾಪರ್ವತವನ್ನು ಏರಿ ಮತ್ತೊಂದು ಸಾಧನೆ ಮಾಡಿದ್ದಾಳೆ. ಈ ಸಾಧನೆ ವಿಶ್ವ ದಾಖಲೆಗೆ ಇನ್ನಷ್ಟೇ ಸೇರಬೇಕಿದ್ದು ಅಧಿಕೃತ ಪ್ರಮಾಣಪತ್ರಕ್ಕಾಗಿ ಕಾಯಲಾಗುತ್ತಿದೆ.

ಈ ಬಾಲಕಿಯ ಸಾಧನೆಗೆ ಸ್ವತಃ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.

ನಾನು ಯಾವಾಗಲೂ ಜನರಿಂದ ದೂರ ಇರಲು ಬಯಸುತ್ತೇನೆ. ಅರುನಿಮಾ ಸಿನ್ಹಾ ಪರ್ವತಗಳ ಬಗ್ಗೆ ಅಧ್ಯಯನ ಮಾಡುವ ವೀಡಿಯೋ ನೋಡಿದ್ದೆ. ಇದರಿಂದ ಪ್ರೇರೇಪಿತಳಾಗಿ ಪರ್ವತ ಏರುವ ಆಸೆ ಉಂಟಾಯಿತು ಎಂದು ಸಂದರ್ಶನದಲ್ಲಿ ಶಿವಾಂಗಿ ಪಾಟಕ್ ಹೇಳಿದ್ದಾರೆ.

ನಾವು ಸಾಧನೆ ಮಾಡಬೇಕಾದರೆ ಹೆತ್ತವರನ್ನು ಓಲೈಸುವುದು ಅಗತ್ಯ. ನಮ್ಮ ಆಸೆ ದೃಢವಾಗಿದ್ದಾಗ ಅವರು ಬೆಂಬಲ ನೀಡಿಯೇ ನೀಡುತ್ತಾರೆ. ಮಹಿಳೆಯಿಂದ ಮಾಡಲು ಅಸಾಧ್ಯವಾದ ಯಾವ ಕೆಲಸವೂ ಇಲ್ಲ ಎಂಬುದು ನನ್ನ ನಂಬಿಕೆ ಎಂದು ಶಿವಾಂಗಿ ಪ್ರತಿಕ್ರಿಯಿಸಿದ್ದಾರೆ.

Next Story

RELATED STORIES