Top

ಕುಡುಕರಿಗೆ ಗೆಲುವು : ಏನಿದು ಎಣ್ಣೆ ಮ್ಯಾಟ್ರು ಅಂತೀರಾ ಈ ಸುದ್ದಿ ಓದಿ.!!

ಕುಡುಕರಿಗೆ ಗೆಲುವು : ಏನಿದು ಎಣ್ಣೆ ಮ್ಯಾಟ್ರು ಅಂತೀರಾ ಈ ಸುದ್ದಿ ಓದಿ.!!
X

ಮೈಸೂರು : ಅವರೇಲ್ಲ ಒಂದೆಡೆ ಸೇರಿ ಪ್ರತಿಭಟನೆ ಮಾಡ್ತಿದ್ರು. ಅವರ ಪ್ರತಿಭಟನೆಗೆ ಪ್ರತಿರೋಧವೊಡ್ಡಿ ಮತ್ತೊಂದು ಪ್ರತಿಭಟನೆ ನಡೆದಿತ್ತು. ಆದ್ರೆ ಎದುರಾಳಿಗಳ ಪ್ರತಿಭಟನೆಗೆ ಸೆಡ್ಡು ಹೊಡೆದಿದ್ದ ಅವರು ಕೊನೆಗೂ ಹೋರಾಟದಲ್ಲಿ ಗೆದ್ದೆ ಬಿಟ್ಟರು. ಅಷ್ಟಕ್ಕೂ ಈ ಹೋರಾಟ ನಡೆದದ್ದು ನೀರಿಗಾಗಿ ಅಲ್ಲ ಬೀರಿಗಾಗಿ. ಇಲ್ಲಿ ಗೆದ್ದದ್ದು ಕುಡುಕರು. ಅರೆ ಏನಿದು ಎಣ್ಣೆ ಮ್ಯಾಟ್ರು ಅಂತೀರಾ ಮುಂದೆ ಓದಿ ಅದು ನಿಮಗೆ ತಿಳಿಯುತ್ತೆ..

https://www.youtube.com/watch?v=SKOlM7CmjLY

ಒಂದೆಡೆ ಪುರುಷರ ಪ್ರತಿಭಟನೆ, ಇನ್ನೊಂದೆಡೆ ಮಹಿಳೆಯರ ಪ್ರತಿಭಟನೆ. ಈ ಎರಡು ಬಣಗಳು ಹೋರಾಟ ಮಾಡಿದ್ದು ಮಾತ್ರ ವಿಷಯ ಮಾತ್ರ ಒಂದೇ ಅದು ಎಣ್ಣೆ. ಹೌದು ಮೈಸೂರಿನ ಹೆಚ್‌.ಡಿ.ಕೋಟೆ ತಾಲ್ಲೂಕಿನ ಹೀರೇಹಳ್ಳಿ ಗ್ರಾಮದಲ್ಲಿ ಬಾರ್‌ ಓಪನ್‌ ಮಾಡುವಂತೆ ಊರಿನ ಕುಡುಕರೇಲ್ಲ ಪ್ರತಿಭಟನೆ ಮಾಡಿದ್ರೆ. ಇತ್ತ ಬಾರ್ ತೆರೆಯದಂತೆ ಮಹಿಳೆಯರು ಪ್ರತಿಭಟನೆ ಮಾಡಿದ್ರು.

ಜುಲೈ 25ರಂದು ನಡೆದಿದ್ದ ಈ ಪ್ರತಿಭಟನೆಗಳಲ್ಲಿ ಕೊನೆಗು ಅಧಿಕಾರಿಗಳು ಮಣಿದಿದ್ದು ಕುಡುಕರ ಒತ್ತಡಕ್ಕೆ. ಹೀಗಾಗಿ ಇಂದು ಹೀರೆಹಳ್ಳಿಯಲ್ಲಿ ಪೊಲೀಸರ ಭದ್ರತೆಯೊಂದಿಗೆ ಬಾರ್‌ ಓಪನ್‌ ಆಗಿದೆ. ಈ ಮೂಲಕ ಮೂರು ದಿನಗಳಿಂದ ಹೋರಾಟ ಮಾಡುತ್ತಿದ್ದ ಕುಡುಕರ ಪ್ರತಿಭಟನೆಗೆ ಫಲ ದೊರೆತಿದೆ. ಬಾರ್ ಓಪನ್‌ ಆದ ಖುಷಿಯಲ್ಲಿ ಎಣ್ಣೆ ಕುಡಿದು ತೇಲಾಡಿದ್ದಾರೆ.

ಆದ್ರೆ ಬಾರ್ ಬೇಡ ಎಂದು ಒತ್ತಾಯಿಸುತ್ತಿದ್ದ ಮಹಿಳೆಯರ ಹೋರಾಟಕ್ಕೆ ಹಿನ್ನಡೆಯಾಗಿದೆ. ಆದ್ರೂ ತಮ್ಮ ಪ್ರತಿಭಟನೆಯನ್ನ ಮುಂದುವರೆಸಿರುವ ಗ್ರಾಮದ ಮಹಿಳೆಯರು ಹಾಗೂ ಕೆಲ ಪುರುಷರು, ಓಪನ್‌ ಆಗಿರುವ ಬಾರ್ ಕ್ಲೋಸ್‌ ಆಗುವವರೆಗು ನಾವು ಪ್ರತಿಭಟನೆ ನಿಲ್ಲಿಸೋದಿಲ್ಲ ಎಂದು ಗ್ರಾಮದ ಪಂಚಾಯಿತಿ ಕಚೇರಿ ಮುಂಭಾಗ ಧರಣಿ ನಡೆಸುತ್ತಿದ್ದಾರೆ.

ಒಟ್ಟಾರೆ ಎಣ್ಣೆಗಾಗಿ ನಡೆದ ಹೋರಾಟದಲ್ಲಿ ಎಣ್ಣೆ ಪ್ರೀಯರಿಗೆ ಗೆಲುವು ದಕ್ಕಿದ್ದು, ಬಾರ್‌ ಬೇಡ ಅಂದವರಿಗೆ ಬೇಸರವಾಗಿದೆ. ಸದ್ಯ ಓಪನ್‌ ಆಗಿರುವ ಬಾರ್‌ ಎಷ್ಟು ದಿನ ನಡೆಯುತ್ತೆ ಅಂತ ಕಾದು ನೋಡಬೇಕಿದೆ.

ವರದಿ : ಸುರೇಶ್, Tv5 ಮೈಸೂರು

Next Story

RELATED STORIES