Top

ಈ ಮಿಷಿನ್‌ ಜೇಬಿಗಿಡಿದರೇ ಹಣವೇ ಮಾಯ.!!

ಈ ಮಿಷಿನ್‌ ಜೇಬಿಗಿಡಿದರೇ ಹಣವೇ ಮಾಯ.!!
X

ದೇಶದೆಲ್ಲೆಡೇ ದಿನೇ ದಿನೇ ಆನ್‌ಲೈನ್‌ ಕಳ್ಳರ ಕೃತ್ಯ ಹೆಚ್ಚಾಗುತ್ತಿದೆ. ಸೈಬರ್‌ ಕ್ರೈಂ ತಡೆಗೇ ಎಷ್ಟೇ ಮುಂಜಾಗ್ರ ಕ್ರಮವಹಿಸಿದರು, ಕಳ್ಳರ ಕರಾಮತ್ತು ಮಾತ್ರ ನಿಂತಿಲ್ಲ. ಅದರಲ್ಲೂ ಪೋನ್‌ ಬ್ಯಾಂಕಿಂಗ್‌ ಅಧಿಕಾರಿಗಳು ಎಂದು ಹೇಳಿಕೊಂಡು ಪೋನ್‌ ಮಾಡುವ ಕದೀಮರ ದೊಡ್ಡ ಜಾಲವೇ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿದೆ. ಒಮ್ಮೆ ಹೀಗೆ ಪೋನ್‌ ಮಾಡಿದಾಗ ಎಟಿಎಂ ನಂಬರ್, ಓಟಿಪಿ ಹೇಳಿದ್ರೇ ಮುಗೀತು. ನಿಮ್ಮ ಖಾತೆಯಿಂದ ಹಣ ಕಟ್‌.

ಆದ್ರೇ ಇತ್ತೀಚಿಗೆ ಇದಕ್ಕೆ ಬ್ಯಾಂಕ್‌ ಅಧಿಕಾರಿಗಳು, ಸೈಬರ್‌ ಕ್ರೈಂ ಪೊಲೀಸರು ಬ್ರೇಕ್‌ ಹಾಕ್ತಾ ಇದ್ದಾರೆ. ಅಲ್ಲದೇ ಸಾರ್ವಜನಿಕರಲ್ಲಿ ಎಟಿಎಂ ನಂಬರ್, ಓಟಿಪಿ ಅನಾಮಿಕರು ಕೇಳಿದಾಗ ಹೇಳಬೇಡಿ. ಯಾವುದೇ ಬ್ಯಾಂಕ್‌ ಅಧಿಕಾರಿಗಳು ನಿಮ್ಮ ಎಟಿಎಂ ನಂಬರ್ ಆಗಲೀ, ನಿಮ್ಮ ಒಟಿಪಿಯಾಗಲೀ ಕೇಳುವುದಿಲ್ಲ. ಈ ಬಗ್ಗೆ ಜಾಗೃತರಾಗಿರಿ ಎಂದು ಎಚ್ಚರಿಸುತ್ತಿದ್ದಾರೆ.

ಈ ಎಲ್ಲಾ ಎಚ್ಚರಿಕೆಯ ನಡುವೆ ಈಗ ಆನ್‌ಲೈನ್‌ ಕಳ್ಳರು ಮತ್ತೊಂದು ಮಿಷಿನ್‌ ಕಂಡು ಹಿಡಿದಿದ್ದಾರಂತೆ. ಈ ಮೂಲಕ ನಿಮ್ಮ ಜೇಬಿಗೆ ಕತ್ತರಿ ಹಾಕಲು ಶುರು ಮಾಡಿದ್ದಾರಂತೆ. ಈ ಮಿಷಿನ್‌ ನಿಮ್ಮ ಜೇಬಿನ ಬಳಿ ಹಿಡಿದಾಗ, ಜೇಬಲ್ಲಿ ಎಟಿಎಂ ಕಾರ್ಡ್‌ ಇದ್ದರೇ ಸಾಕು, ಹಣ ಕ್ಷಣ ಮಾತ್ರದಲ್ಲಿ ಕಟ್. ಇದಕ್ಕೆ ಯಾವುದೇ ನಿಮ್ಮ ಪಾಸ್‌ವರ್ಡ್ ಬೇಕಿಲ್ವಂತೆ.

[video width="400" height="720" mp4="http://tv5kannada.com/wp-content/uploads/2018/07/WhatsApp-Video-2018-07-28-at-8.07.15-PM.mp4"][/video]

ಈ ಮಿಷಿನ್‌ ಜೇಬಿನ ಬಳಿ ಹಿಡಿದರೇ ಸಾಕು, ತಾನು ತಾನಾಗೇ ನಿಮ್ಮ ಡೆಬಿಟ್‌ ಕಾರ್ಡ್, ಕ್ರೆಡಿಟ್‌ ಕಾರ್ಡ್‌ ಸ್ಕ್ಯಾನ್‌ ಆಗುತ್ತದೆ. ಕಾರ್ಡ್‌ ಸ್ಕ್ಯಾನ್‌ ಆಗಿದ್ದೇ ತಡ ಮುಂದಿನ ಕಾರ್ಯವನ್ನು ಕದೀಮರು ತಮಗೆ ಇಷ್ಟ ಬಂದ ಹಾಗೆ ಬಳಕೆ ಮಾಡಿಕೊಳ್ಳಬಹುದು. ಈ ಮೂಲಕ ಕದೀಮರು ಎಷ್ಟು ಹಣ ಬೇಕೋ ಅಷ್ಟು ಹಣಕ್ಕೆ ಏನನ್ನಾದರೂ ಖರೀದಿ ಮಾಡ್ತಾರೆ. ಹೀಗೆ ಖರೀದಿ ಮಾಡುವ ಮೂಲಕ ಕಳ್ಳರು ಕ್ಷಣ ಮಾತ್ರದಲ್ಲಿ ನಿಮ್ಮ ಖಾತೆಗೆ ಕನ್ನ ಹಾಕಬಹುದಂತೆ.

ಇಂತಹ ಮಿಷಿನ್‌ ಈಗ ಎಲ್ಲೆಡೆ ಬರ್ತಾ ಇದೆ ಎಂಬ ವೀಡಿಯೋ ಕೂಡ ಅಷ್ಟೇ ವೈರಲ್ ಆಗಿ ಹರಿದಾಡುತ್ತಿದೆ. ಹೀಗಾಗಿ ಜೇಬಲ್ಲಿ ಡೆಬಿಟ್‌ ಕಾರ್ಡ್‌, ಕ್ರೆಡಿಟ್‌ ಕಾರ್ಡ್‌ ಹೇಗಪ್ಪಾ ಇಟ್ಟುಕೊಂಡು ಓಡಾಡೋದು ಎಂಬ ಭಯವನ್ನು ಹುಟ್ಟಿಸುತ್ತಿದೆ.

ಸೋ ಬ್ಯಾಂಕ್‌ ಗ್ರಾಹಕರೇ ಎಚ್ಚರವಾಗಿರಿ. ನೀವು ನಿಮ್ಮ ಜೊತೆಗೆ ಡೆಬಿಟ್‌ ಕಾರ್ಡ್‌, ಕ್ರೆಡಿಟ್‌ ಕಾರ್ಡ್‌ ಕೊಂಡೊಯ್ಯುವ ಮೊದಲು ಜಾಗೃತರಾಗಿರಿ. ಇಲ್ಲ ಅಂದ್ರೇ ನಿಮ್ಮ ಜೇಬಲ್ಲಿರುವ ಕಾರ್ಡ್‌ಗಳ ಮೂಲಕ ನಿಮ್ಮ ಹಣ ಕದೀಮರ ಪಾಲಾಗುತ್ತದೆ. ಈ ಮೂಲಕ ಹಣ ಕಳೆದುಕೊಂಡು ಕಷ್ಟಕ್ಕೆ ಸಿಲುಕಬೇಕಾಗುತ್ತದೆ.

Next Story

RELATED STORIES