Top

ಗ್ರಹಣ ದಿನವೇ ಮದುವೆ: ಪ್ರೇಮಿಗಳ ಸಾಹಸಕ್ಕೆ ಸ್ವಾಮೀಜಿಗಳ ಆಶೀರ್ವಾದ

ಗ್ರಹಣ ದಿನವೇ ಮದುವೆ: ಪ್ರೇಮಿಗಳ ಸಾಹಸಕ್ಕೆ ಸ್ವಾಮೀಜಿಗಳ ಆಶೀರ್ವಾದ
X

ಚಿತ್ರದುರ್ಗ: ಶುಕ್ರವಾರ ಸಂಭವಿಸಿದ ಶತಮಾನದ ಚಂದ್ರಗ್ರಹಣದಿಂದ ತೊಂದರೆ, ಸಮಸ್ಯೆ, ಕೆಟ್ಟ ಗ್ರಹಚಾರ ಅಂತೆಲ್ಲಾ ಜ್ಯೋತಿಷಿಗಳು ಬೊಂಬಡಾ ಹೊಡೆದುಕೊಳ್ಳುತ್ತಿದ್ದರೆ, ಚಿತ್ರದುರ್ಗದಲ್ಲಿ ಪ್ರೇಮಿಗಳು ಗ್ರಹಣದ ದಿನವೇ ದಾಂಪತ್ಯಕ್ಕೆ ಕಾಲಿರಿಸುವ ಮೂಲಕ ಮೂಢ ನಂಬಿಕೆಗಳಿಗೆ ತಿರುಗೇಟು ನೀಡಿದ್ದಾರೆ. ವಿಶೇಷ ಅಂದರೆ ಚಿತ್ರದುರ್ಗ ಬಸವ ಕೇಂದ್ರ ಮುರುಘಾಮಠದ ಶಿವಮೂರ್ತಿ ಮುರುಘಾಶರಣರು ಸಮ್ಮುಖದಲ್ಲೇ ಈ ಅಪರೂಪದ ವಿವಾಹ ಕಾರ್ಯಕ್ರಮ ಜರುಗಿತು.

ಬಸವಕೇಂದ್ರ ಮುರುಘಾಮಠದಲ್ಲಿ ಶುಕ್ರವಾರ ರಾತ್ರಿ ಹಿರಿಯೂರು ತಾಲೂಕಿನ ಹೂವಿನಹೊಳೆ ಗ್ರಾಮದ ವಧುವರರು ದಾಂಪತ್ಯ ಜೀವನಕ್ಕೆ ಅಡಿ ಇಟ್ಟರು. ಮೌಢ್ಯಾಚರಣೆ ವಿರುದ್ಧ ಸಮರ ಸಾರಿರುವ ಚಿತ್ರದುರ್ಗ ಬಸವ ಕೇಂದ್ರ ಮುರುಘಾಮಠದ ಶಿವಮೂರ್ತಿ ಮುರುಘಾಶರಣರು ಖಗ್ರಾಸ ಚಂದ್ರಗ್ರಹಣದ ವೇಳೆ ಅನುಭವ ಮಂಟಪದಲ್ಲಿ ವಿವಾಹ ನೆರವೇರಿಸುವುದರ ಮೂಲಕ ಬಸವ ಪರಂಪರೆಯ ನಿಜದನಿಯ ಆಚರಣೆ ಮುನ್ನಡಿ ಬರೆದರು.

ಮರಡಿ ರಂಗಪ್ಪ ನಾಯಕ ಮತ್ತು ವಸಂತಕುಮಾರಿ ನವ ಜೋಡಿಗಳು ತಮ್ಮ ದಾಂಪತ್ಯ ಬದುಕಿನ ಪಥಕ್ಕೆ ಖಗ್ರಾಸ ಚಂದ್ರಗ್ರಹಣವನ್ನೇ ಅಯ್ಕೆ ಮಾಡಿಕೊಂಡು ನಿಟ್ಟಿನಲ್ಲಿ ಹೆಜ್ಜೆ ಇಟ್ಟರು.

ಖಗ್ರಾಸ ಚಂದ್ರಗ್ರಹಣದ ಬೆಳಕನ್ನೇ ಬದುಕಿನ ದೀವಿಗೆಯಾಗಿ ಸ್ವೀಕರಿಸಿದ ದಂಪತಿಗಳಿಗೆ ಅಭಿಮಾನದ ಚಪ್ಪಾಳೆಗಳು ಪ್ರೇರಣೆಯಾದವು. ನೂತನ ವಧೂವರರ ಆಶೀರ್ವದಿಸಿ ಮಾತನಾಡಿದ ಶರಣರು, ಬಸವಕೇಂದ್ರದ ಆಶಯಗಳಿಗೆ ಸ್ಪಂದಿಸಿದ ವಧೂವರರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.

ಖಗ್ರಾಸ ಚಂದ್ರಗ್ರಹಣ ವೀಕ್ಷಿಸುವುದೇ ಅಪಾಯಕಾರಿ ಎಂಬ ಸನ್ನಿವೇಶ ಸೃಷ್ಟಿಯಾಗಿರುವಾಗ

ದಾಂಪತ್ಯದ ಬದುಕು ಅಪ್ಪಿಕೊಂಡ ವಧೂವರರು ಮೌಢ್ಯದ ವಿರುದ್ಧ ಸೆಡ್ಡು ಹೊಡೆದಿರುವುದು ಬಸವತತ್ವದ ನಿಜದನಿಯ ಆಚರಣೆಗಳು ಇನ್ನೂ ಮಸುಕಾಗಿಲ್ಲವೆಂಬುದ ಪ್ರಚುರಪಡಿಸಿವೆ.

ಚಂದ್ರಗ್ರಹಣ ವೈಜ್ಞಾನಿಕತೆ ಧ್ಯೋತಕ, ವಿಜ್ಞಾನವೇ ಅಂತಿಮ ಸತ್ಯವಾಗಿದ್ದು ಇದಕ್ಕೆ ಮೌಢ್ಯದ ಲೇಪನ ಸರಿಯಲ್ಲ. ಅಪರೂಪಕ್ಕೆ ಘಟಿಸುವ ವೈಜ್ಞಾನಿಕ ಕೌತುಕಗಳನ್ನು ಬದುಕಿನ ಪಥಕ್ಕೆ ದೀವಿಗೆಯಾಗಿ ಮಾಡಿಕೊಂಡ ನೂತನ ವಧೂವರರು ಜಗತ್ತಿಗೆ ಆದರ್ಶವೆಂದು ಸಾರಿದರು.

Next Story

RELATED STORIES