Top

ಹೆತ್ತ ತಾಯಿಯನ್ನೇ ಕೊಂದ ಪಾಪಿ ಮಗ.!

ಹೆತ್ತ ತಾಯಿಯನ್ನೇ ಕೊಂದ ಪಾಪಿ ಮಗ.!
X

ರಾಮನಗರ : ತುಂಡಗಲ ಜಮೀನಿಗಾಗಿ ಹೆತ್ತನ ಮಗನೇ ತನ್ನ ತಾಯಿಯನ್ನೇ ಕೊಂದ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ನಾಗವಾರ ಗ್ರಾಮದಲ್ಲಿ ನಡೆದಿದೆ. ಮೂರು ದಿನಗಳ ಹಿಂದೆ ನಾಗಮ್ಮ(70) ಎಂಬಾಕೆಯನ್ನು ಆಕೆಯ ಮಗ ಸುರೇಶ್ ಕೊಲೆಗೈದಿದ್ದಾನೆ.

ನಾಗಮ್ಮ ಎಂಬುವವರಿಗೆ ಮೂರು ಮಕ್ಕಳಿದ್ದು, ಕೇವಲ 1 ಎಕರೆ 10 ಗುಂಡೆ ಜಮೀನು ಇದೆ. ಇರುವ ಮೂರು ಮಕ್ಕಳಿಗೆ ಜಮೀನು ಹಂಚಿದ್ರೆ ಒಬ್ಬೊಬ್ಬರಿಗೆ 12 ಗುಂಡೆ ಜಮೀನು ಬರುತ್ತೆ. ಕೇವಲ 12 ಗುಂಡೆ ಜಮೀನಿಗಾಗಿ ತಾಯಿ ಜೊತೆ ಜಗಳವಾಡುತ್ತಿದ್ದ ಸುರೇಶ್ ಜಮೀನಿಗಾಗಿ ಹೆತ್ತ ತಾಯಿಯನ್ನ ಕೊಲೆ ಮಾಡಿದ್ದಾನೆ. ಕೊಲೆ ಮಾಡಿ ಯಾರಿಗೂ ಗೊತ್ತಾಗ ಬಾರದೆಂದು ಶವವನ್ನ ತಮ್ಮ ಮನೆಯ ಹಿಂಭಾಗದಲ್ಲಿರುವ ಶೌಚಾಲಯದ ಫಿಟ್ ಒಳಗೆ ಹಾಕಿ ಮುಚ್ಚಿಟ್ಟಿದ್ದಾನೆ.

ಮೂರು ದಿನ ಹಿಂದೆ ಸಾವನ್ನಪ್ಪಿರುವ ಹಿನ್ನಲೆಯಲ್ಲಿ ವಾಸನೆ ಹೆಚ್ಚಾದ್ದರಿಂದ ಗ್ರಾಮದ ಜನರಿಗೆ ಅನುಮಾನ ಬಂದಿದೆ. ಶೌಚಾಲದ ಫಿಟ್ ಮೇಲಕ್ಕೆ ಎತ್ತಿ ನೋಡಿದ್ರೆ ನಾಗಮ್ಮ ಶವ ಬಾತ್ ರೂಂ ಫಿಟ್‌ನಲ್ಲಿರುವುದು ಕಂಡುಬಂದಿದೆ. ಕೂಡಲೆ ಪೋಲೀಸರಿಗೆ ಗ್ರಾಮಸ್ಥರು ವಿಷಯ ಮುಟ್ಟಿಸಿದರು.

ವಿಷಯ ತಿಳಿದು ಸ್ಥಳಕ್ಕೆ ರಾಮನಗರ ಎಸಿ ಹಾಗೂ ಚನ್ನಪಟ್ಟಣ ತಹಸೀಲ್ದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೊಲೆ ಮಾಡಿ ಮೂರು ದಿನ ಆಗಿರುವುದರಿಂದ ಸ್ಥಳದಲ್ಲಿಯೇ ಪೋಸ್ಟ್ ಮಾಡಂ ಮಾಡಲಾಯಿತು. ಎಂ.ಕೆ.ದೊಡ್ಡಿ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡು ಆರೋಪಿ ನಾಗಮ್ಮ ಮಗ ಸುರೇಶ್ ನನ್ನ ಬಂದಿಸಿ, ವಿಚಾರಣೆ ನಡೆಸಿದ್ದಾರೆ.

ವರದಿ : ನಟರಾಜ್ ಬೆಳಕವಾಡಿ, ಟಿವಿ5 ರಾಮನಗರ.

Next Story

RELATED STORIES