Top

ದರ್ಶನ್ ಅಭಿನಯದ ಒಡೆಯರ್ ಚಿತ್ರಕ್ಕೆ ಸಂಕಷ್ಟ

ದರ್ಶನ್ ಅಭಿನಯದ ಒಡೆಯರ್ ಚಿತ್ರಕ್ಕೆ ಸಂಕಷ್ಟ
X

ಮೈಸೂರು: ಚಾಲೆಂಜಿಂಗ್ ಸ್ಟಾರ್ ದರ್ಶನ ಅಭಿನಯದ ಒಡೆಯರ್ ಚಿತ್ರಕ್ಕೆ ಸಂಕಷ್ಟ ಎದುರಾಗಿದೆ. ಚಿತ್ರಕ್ಕೆ ಒಡೆಯರ್ ಎಂಬ ಟೈಟಲ್ ಇಟ್ಟಿದ್ದಕ್ಕೆ, ಮೈಸೂರಿನ ಕೆ.ಆರ್.ಪೊಲೀಸ್ ಠಾಣೆಯಲ್ಲಿ ಚಿತ್ರದ ವಿರುದ್ಧ ಪ್ರಕರಣ ದಾಖಲಾಗಿದೆ.

ದರ್ಶನ್ 51ನೇ ಚಿತ್ರದ ಟೈಟಲ್ ಒಡೆಯರ್ ಎಂದು ಘೋಷಣೆಯಾದಾಗಲೇ ಈ ಬಗ್ಗೆ ಸಂಕಷ್ಟ ಎದುರಾಗುವ ಸೂಚನೆ ಸಿಕ್ಕಿತ್ತು.ಇದೀಗ ಕನ್ನಡ ಕ್ರಾಂತಿದಳ ವೇದಿಕೆಯವರು ಈ ಬಗ್ಗೆ ದೂರು ದಾಖಲು ಮಾಡಿದ್ದು, ಒಡೆಯರ್ ಹೆಸರಲ್ಲಿ ಚಿತ್ರ ಮಾಡದಂತೆ ಆಗ್ರಹಿಸಿದ್ದಾರೆ. ಆದರೆ ಒಡೆಯರ್ ಹೆಸರು ಬಳಕೆಯಾದರೆ ಚರಿತ್ರೆಯ ಚಿತ್ರ ಮಾಡಲಿ, ಅದು ಬಿಟ್ಟು ಐಟಂ ಸಾಂಗ್, ಲವ್ ಚಿತ್ರವಾದರೆ ಬೇಡ ಎಂದಿದ್ದಾರೆ. ಇದನ್ನೂ ಮೀರಿ ಚಿತ್ರದ ಟೈಟಲ್ ಬದಲಿಸದೇ ಹೋದರೆ, ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಮುಂದಿನ ತಿಂಗಳು ಅದ್ಧೂರಿಯಾಗಿ ಸೆಟ್ಟೇರಲು ತಯಾರಾಗಿರುವ ಒಡೆಯರ್ ಚಿತ್ರದ ಶೂಟಿಂಗ್ ಸ್ಪಾಟ್‌ಗೆ ನುಗ್ಗಿದ ಕ್ರಾಂತಿದಳ, ಚಿತ್ರ ನಿಲ್ಲಿಸುವಂತೆ ಆಗ್ರಹಿಸಿದೆ. ಚಿತ್ರದ ಶೂಟಿಂಗ್ ಮುಂದುವರೆದರೆ, ಮೈಸೂರು ಮಾತ್ರವಲ್ಲ ರಾಜ್ಯವ್ಯಾಪಿ ಹೋರಾಟ ಮಾಡುವ ಎಚ್ಚರಿಕೆ ನೀಡಿದೆ. ಇನ್ನು ಕ್ರಾಂತಿದಳಕ್ಕೆ ಅರಸು ಯುವಜನ ವೇದಿಕೆ ಸಾಥ್ ನೀಡಿದೆ.

ಇನ್ನೊಂದೆಡೆ ಅದೇ ಪೊಲೀಸ್ ಠಾಣೆಯಲ್ಲಿ(ಮೈಸೂರಿನ‌ ಕೆ.ಆರ್.ಪೊಲೀಸ್ ಠಾಣೆಯಲ್ಲಿ ) ಚಿತ್ರದ ಟೈಟಲ್ ಬದಲಿಸುವಂತೆ ಅರಸು ಯವಜನ ವೇದಿಕೆಯಿಂದ ದೂರು ದಾಖಲಾಗಿದೆ. ಇದು ಒಡೆಯರ್ ಚಿತ್ರದ ವಿರುದ್ಧ ಎರಡನೇ ದೂರಾಗಿದೆ. ಈ ಮೂಲಕ ಚಿತ್ರದ ಶೀರ್ಷಿಕೆಗೆ ವಿರೋಧ ವ್ಯಕ್ತವಾಗಿದೆ.

Next Story

RELATED STORIES