Top

ನಿಶ್ಚಿತಾರ್ಥ ಆಗಿದೆಯಂತೆ... ಪ್ರಿಯಾಂಕಾ 'ನಿಕ್ಕಿ' ಪಕ್ಕಾ?

ನಿಶ್ಚಿತಾರ್ಥ ಆಗಿದೆಯಂತೆ... ಪ್ರಿಯಾಂಕಾ ನಿಕ್ಕಿ ಪಕ್ಕಾ?
X

ಹಾಲಿವುಡ್​ಗೆ ಹಾರಿರುವ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಏಕಾಏಕಿ ಸಲ್ಮಾನ್ ಖಾನ್ ನಟನೆಯ ಭರತ್ ಚಿತ್ರದಿಂದ ಹೊರಬಂದಿದ್ದಾರೆ. ಈ ದಿಢೀರ್ ನಿರ್ಧಾರದ ಹಿಂದೆ ಹಾಲಿವುಡ್ ನಟ ನಿಕ್ಕಿ ಜಾನ್ಸ್ ಜೊತೆಗಿನ ನಿಶ್ಚಿತಾರ್ಥ ಆಗಿರುವುದೇ ಕಾರಣ ಎಂದು ಹೇಳಲಾಗುತ್ತಿದೆ.

ಭರತ್ ಚಿತ್ರದ ನಿರ್ದೇಶಕ ಅಲಿ ಅಬ್ಬಾಸ್ ಜಾಫರ್ ಟ್ವೀಟರ್​ನಲ್ಲಿ ಪ್ರಿಯಾಂಕ ಚಿತ್ರದಿಂದ ಹೊರಹೋಗಿರುವುದನ್ನು ದೃಢಪಡಿಸಿದ್ದಾರೆ. ಇದಕ್ಕೆ ವಿಶೇಷ ಕಾರಣವಿದೆ ಎಂದು ಹೇಳುವ ಮೂಲಕ ನಿಶ್ಚಿತಾರ್ಥದ ಸುಳಿವು ನೀಡಿದ್ದಾರೆ.

ಪ್ರಿಯಾಂಕಾ ಚೋಪ್ರಾ ಕಳೆದ ಕೆಲವು ತಿಂಗಳಿನಿಂದ ನಿಕ್ಕಿ ಜಾನ್ಸ್ ಜೊತೆ ಸುತ್ತಾಡುತ್ತಿದ್ದಾರೆ. ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ್ದ ಈ ಜೋಡಿ ಪ್ರವಾಸಿ ತಾಣಗಳಿಗೆ ಭೇಟಿ ನೀಡಿತ್ತು. ಇದರ ಬೆನ್ನಲ್ಲೇ ವಿದೇಶಗಳಲ್ಲೂ ಈ ಜೋಡಿ ಸುತ್ತಾಟ ಮುಂದುವರಿದಿದ್ದು, ಈ ಗಾಳಿ ಸುದ್ದಿಗೆ ಜೀವ ಬಂದಿದೆ.

ಪ್ರಿಯಾಂಕ ಶೀಘ್ರದಲ್ಲೇ ಹಸೆಮಣೆ ಏರಲಿದ್ದು, ಈಗಾಗಲೇ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಟ್ವೀಟರ್​ನಲ್ಲಿ ಅಭಿಮಾನಿಗಳು ಆಘಾತ ವ್ಯಕ್ತಪಡಿಸಿದ್ದು, ಇದು ನಿಜ ಇರಬಹುದು ಎಂದು ಹೇಳುತ್ತಿದ್ದಾರೆ.

Next Story

RELATED STORIES