Top

ಸಚಿನ್​, ಕೊಹ್ಲಿಗಿಂತ ಧೋನಿ ಅಂದರೆ ಹೆಚ್ಚು ಇಷ್ಟ: ಸಮೀಕ್ಷೆ

ಸಚಿನ್​, ಕೊಹ್ಲಿಗಿಂತ ಧೋನಿ ಅಂದರೆ ಹೆಚ್ಚು ಇಷ್ಟ: ಸಮೀಕ್ಷೆ
X

ಧೋನಿ ಫಾರ್ಮ್​ನಲ್ಲಿ ಇಲ್ಲದೇ ಇರಬಹುದು... ನಾಯಕನಾಗಿ ಉಳಿಯದೇ ಇರಬಹುದು. ತಂಡವನ್ನು ಗೆಲ್ಲಿಸುವ ಶಕ್ತಿ ಕಳೆದುಕೊಂಡಿರಬಹುದು. ಹಣ ಸಂಪಾದನೆಯಲ್ಲಿ ಹಿಂದೆ ಬಿದ್ದಿರಬಹುದು. ಆದರೆ ಭಾರತೀಯ ಕ್ರೀಡಾಪಟುಗಳ ಪೈಕಿ ಹೆಚ್ಚು ಜನ ಇಷ್ಟಪಡುವುದು ಇವರನ್ನೇ.

ರನ್​ ಹೊಳೆ ಹರಿಸುತ್ತಿರಬಹುದು. ದಾಖಲೆಗಳನ್ನು ನಿರ್ಮಿಸುತ್ತಿರಬಹುದು. ಭಾರತ ತಂಡದ ನಾಯಕನಾಗಿರಬಹುದು. ಹಣ ಗಳಿಕೆಯಲ್ಲಿ ಮೊದಲ ಸ್ಥಾನದಲ್ಲಿರಬಹುದು. ಆದರೂ ವಿರಾಟ್ ಕೊಹ್ಲಿ ಜನ ಮೆಚ್ಚುಗೆ ಪಡೆಯುವಲ್ಲಿ ಹಿಂದೆ ಬಿದ್ದಿದ್ದಾರೆ.

ಹೌದು, ಯುಗೌ ಸಂಸ್ಥೆ ಭಾರತದಲ್ಲಿ ಜನಪ್ರಿಯ ಕ್ರೀಡಾಪಟು ಯಾರು ಎಂದು ನಡೆಸಿದ ಸಮೀಕ್ಷೆಯಲ್ಲಿ ಸಚಿನ್ ತೆಂಡುಲ್ಕರ್ ಮತ್ತು ವಿರಾಟ್ ಕೊಹ್ಲಿಗಿಂತ ಧೋನಿಯನ್ನು ಹೆಚ್ಚು ಇಷ್ಟಪಡುವುದಾಗಿ ಹೇಳಿದ್ದಾರೆ.

ಧೋನಿ ಪರ ಶೇ.7.7ರಷ್ಟು ಅಭಿಮಾನಿಗಳು ಮತ ಚಲಾಯಿಸಿದರೆ, ಸಚಿನ್ ತೆಂಡುಲ್ಕರ್ ಪರ ಶೇ. 6.8 ರಷ್ಟು ಹಾಗೂ ವಿರಾಟ್ ಕೊಹ್ಲಿ ಪರ ಶೇ. 4.8ರಷ್ಟು ಮತಗಳು ಬಂದಿವೆ.

Next Story

RELATED STORIES