Top

ಇವು ಚಂದ್ರಗ್ರಹಣದ ವೇಳೆ ನೀವು ಗಮನಿಸಿಬೇಕಾದ 10 ಸಂಗತಿಗಳು

ಇವು ಚಂದ್ರಗ್ರಹಣದ ವೇಳೆ ನೀವು ಗಮನಿಸಿಬೇಕಾದ 10 ಸಂಗತಿಗಳು
X

ಬೆಂಗಳೂರು : ಇಂದು ಆಗಸದಲ್ಲಿ ಕೌತುಕದ ಕ್ಷಣಕ್ಕೆ ಸಾಕ್ಷಿಯಾಗಲಿದೆ. ಈ ಶತಮಾನದ ದೀರ್ಘಾವಧಿಯ ಚಂದ್ರಗ್ರಹಣ ಸಂಭವಿಸುವ ಮೂಲಕ, ಪ್ರಕೃತಿಯ ವೈಚಿತ್ರಕ್ಕೆ ಮೆರೆಯಲಿದೆ. ಇಂತಹ ಸಂದರ್ಭದಲ್ಲಿ ನೀವು ಗಮನಿಸಲೇ ಬೇಕಾದ ಬಹುಮುಖ್ಯ 10 ಸಂಗತಿಗಳು ಈ ಕೆಳಗಿನಂತಿವೆ. ತಪ್ಪದೇ ಓದಿ...

  1. ಇಂದು ರಾತ್ರಿ 11.54ಕ್ಕೆ ಚಂದ್ರಗ್ರಹಣ ಆರಂಭವಾಗಲಿದೆ. ಹೀಗೆ ಆರಂಭವಾಗದ ಚಂದ್ರಗ್ರಹಣ, ಮಧ್ಯರಾತ್ರಿ 1 ಗಂಟೆಯಿಂದ 2.43ರ ವರೆಗೆ ಸಂಪೂರ್ಣ ಗ್ರಹಣ ಗೋಚರಿಸಲಿದೆ. ಕೊನೆಗೆ ಮುಂಜಾನೆ 3.49ಕ್ಕೆ ಗ್ರಹಣ ಬಿಡಲಿದೆ.
  2. ಓದುಗರೇ ನೀವು ಕುತೂಹಲದಿಂದ ನೋಡಲೇ ಬೇಕಾದ ವಿಚಿತ್ರ ಅಂದ್ರೆ, ಅದು ರಾತ್ರಿ 1 ಗಂಟೆಗೆ. ರಾತ್ರಿ ಒಂದು ಗಂಟೆಗೆ ಬ್ಲಡ್‌ ಮೂನ್‌ ಆರಂಭವಾಗಲಿದೆ. ಹೀಗೆ ಆರಂಭವಾಗಿ, 2 ಗಂಟೆ 43 ನಿಮಿಷದ ವರೆಗೆ ನಡೆದು ಮುಕ್ತಾಯವಾಗಲಿದೆ.
  3. ಬ್ಲಡ್‌ ಮೂನ್‌ ಚಂದ್ರಗ್ರಹಣದ ಚಮತ್ಕಾರವನ್ನು ನೀವು ಬರಿಗಣ್ಣಿನಿಂದ ನೋಡ ಬಹುದು. ಭೂಮಿಯ ವಾತಾ ವರಣದಲ್ಲಿ ಹಾದು ಹೋಗುವ ಸೂರ್ಯನ ಕಿರಣಗಳ ಚದುರುವಿಕೆಯಿಂದ ಚಂದ್ರ ರಕ್ತವರ್ಣದಲ್ಲಿ ಕಂಡು ಬರುತ್ತಾನೆ.
  4. ಇನ್ನೂ ಧಾರ್ಮಿಕ ಪಂಚಾಗದ ಪ್ರಕಾರ ಚಂದ್ರನಿಗೆ ಖಗ್ರಾಸ ಕೇತು ಗ್ರಹಣ ಸಂಭವಿಸುವ ಕಾರಣ ಉತ್ತರಾಷಾಢ ನಕ್ಷತ್ರ ಮಕರ ರಾಶಿಯಲ್ಲಿ ಸ್ಪರ್ಶ, ಶ್ರವಣ ನಕ್ಷತ್ರ ಮಕರ ರಾಶಿಯಲ್ಲಿ ಮೋಕ್ಷ ನಡೆಯಲಿದೆಯಂತೆ.
  5. ಧನಸ್ಸು ಮತ್ತು ಮಕರ ರಾಶಿಯವರು ಗ್ರಹಣ ನಿಮಿತ್ತ ಶಾಂತಿ ಮಾಡಿಕೊಳ್ಳಬೇಕು. ಗ್ರಹಣವಾದ ಮಾರನೇ ದಿನ ಅಂದರೆ ಶನಿವಾರ 28.07.2018 ರಂದು ಬೆಳಗ್ಗೆ ತಲೆಗೆ ಸ್ನಾನ ಮಾಡಿ ಮನೆ ದೇವರಿಗೆ ತುಪ್ಪದ ದೀಪ ಹಚ್ಚಿ ಈ ಕೆಳಗಿನ ಶ್ಲೋಕ ಪಠಿಸಿರಿ.
  6. ತಪ್ಪದೆ ಈ ಶ್ಲೋಕ ಪಠಿಸಿ :

    ಯೋ ಸೌ ವಜ್ರಧರೋ ದೇವಃ ಆದಿತ್ಯಾನಾಂ ಪ್ರಭುರ್ಮತಃ|

    ಚಂದ್ರಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು ||1||

    ಯೋ ಸೌ ದಂಡಧರೋ ದೇವಃ ಯಮೋ ಮಹಿಷವಾಹನಃ|

    ಚಂದ್ರಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು||2||

    ಯೋ ಸೌ ಶೂಲಧರೋ ದೇವಃ ಪಿನಾಕೀ ವೃಷವಾಹನಃ |

    ಚಂದ್ರಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು ||3||

  7. ಖಗ್ರಾಸ ಚಂದ್ರಗ್ರಹಣ ಕಾರಣ ರಾಜ್ಯದ ಕೆಲವು ದೇವಾಲಯಗಳಲ್ಲಿ ವಿಶೇಷ ಪೂಜೆ, ಹವನ, ಹೋಮ ಆಯೋಜಿಸಲಾಗಿದೆ. ಬಹುತೇಕ ದೇವಾಲಯಗಳಲ್ಲಿ ಸಂಜೆಯ ನಂತರ ದರ್ಶನ, ಪೂಜೆ ಇರುವುದಿಲ್ಲ. ಗ್ರಹಣ ಮುಗಿದ ನಂತರ ಶನಿವಾರ ಮುಂಜಾನೆ ವಿಶೇಷ ಪೂಜಾ ಕಾರ್ಯಗಳು ನಡೆಯಲಿವೆ.
  8. ಗ್ರಹಣ ಪ್ರಯುಕ್ತ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ದೇವರ ದರ್ಶನ ಹಾಗೂ ಪೂಜೆ ಸಮಯದಲ್ಲಿ ಯಾವುದೇ ಬದಲಾವಣೆ ಇಲ್ಲ. ಎಂದಿನಂತೆ ಪೂಜೆಗಳು ನಡೆಯಲಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.
  9. ಚಂದ್ರಗ್ರಹಣ ಅನ್ನೋದು ಖಗೋಳ ವಿಸ್ಮಯ. ಅದನ್ನು ನೋಡಿ ಆನಂದ ಪಡಬೇಕು. ಯಾವುದೇ ಗ್ರಹಣದಿಂದ ಮನುಷ್ಯನಾಗಲಿ, ಪ್ರಾಣಿ-ಪಕ್ಷಿಗಳ ಆರೋಗ್ಯದ ಮೇಲೆ ಪರಿಣಾಮ ಉಂಟಾಗಿರುವುದು ಇದುವರೆಗೂ ವೈಜ್ಞಾನಿಕವಾಗಿ ಸಾಬೀತಾಗಿಲ್ಲ.
  10. ಗ್ರಹಣದಂದು ಮನೆಯಲ್ಲಿರುವ ನೀರು ವಿಷವಾಗುತ್ತದೆ ಎಂಬ ನಂಬಿಕೆ ಇದೆ. ಆದ್ರೇ ಇದು ಸುಳ್ಳು ಸುದ್ದಿಯಾಗಿದೆ. ಖಗೋಳ ವಿಸ್ಮಯ ಚಂದ್ರಗ್ರಹಣದ ಸೌಂದರ್ಯವನ್ನು ನಿರಾತಂಕವಾಗಿ ಕಣ್ತುಂಬಿಸಿಕೊಳ್ಳಬಹುದು.

ಈ ಎಲ್ಲಾ ಸಂಗತಿಗಳನ್ನು ಗಮನಿಸಿ. ಇಂದು ನೀವು ಏನಾದರೂ ಬ್ಲಡ್‌ ಮೂನ್‌ ಚಂದ್ರಗ್ರಹಣ ನೋಡೋದು ಮಿಸ್‌ ಮಾಡಿಕೊಂಡರೇ, ಮತ್ತೆ ನಿಮಗೆ ಗೊಚರಿಸೋದು 104 ವರ್ಷಗಳ ನಂತರ. ಅಂದರೇ 2123ರಲ್ಲಿ ಮಾತ್ರ ಮತ್ತೆ ಇಂತಹ ಚಂದ್ರಗ್ರಹಣ ನೋಡಬಹುದು. ಸೋ ಕಾದು ನೋಡಿ. ನೋಡಿ ಖುಷಿ ಪಟ್ಟು ಆನಂದಿಸಿರಿ.

Next Story

RELATED STORIES