ಭೂಮಿಯೇ ಇವರಿಗೆ ಬೆಂಚು... ಆಕಾಶವೇ ಇವರಿಗೆ ಚಪ್ಪರ

ತುಮಕೂರು : ಭೂಮಿಯೇ ಇವರಿಗೆ ಬೇಂಚು...ಆಕಾಶವೇ ಇವರಿಗೆ ಚಪ್ಪರ... ಬಿಸಿಲು ಮಳೆ, ಬಿರುಗಾಳಿಗೆ ಚಳಿಗೆ ಮೈ ಯೊಡ್ಡದೆ ವಿಧಿಇಲ್ಲ. ಈ ಸಮಸ್ಯೆಗಳ ಸುಳಿಯಲ್ಲೆ ಸಾಗಿದೆ ನಿತ್ಯ ಅಕ್ಷರಾಭ್ಯಾಸ. ಇದು ನಾಡಿನ ಉಪದೊರೆ ಜಿ.ಪರಮೇಶ್ವರ ಅವರ ಸ್ವಕ್ಷೇತ್ರ ಕೊರಟಗೆರೆಯ ಶಾಲೆಯೊಂದ ದುಸ್ಥಿತಿಯ ಕಹಾನಿ..
ಡಿಸಿಎಂ ಜಿ.ಪರಮೇಶ್ವರ್ ಅವರ ಸ್ವಕ್ಷೇತ್ರ ಕೊರಟಗೆರೆಯಲ್ಲಿ ಶಾಲೆಯೊಂದಕ್ಕೆ ಸೂರಿಲ್ಲದೆ ವಿದ್ಯಾರ್ಥಿಗಳು ನಿತ್ಯ ನರಕ ಯಾತನೆ ಅನುಭವಿಸುತಿದ್ದಾರೆ. ಬಜ್ಜನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ಸ್ಥಿತಿ ನಿಜಕ್ಕೂ ಶೋಚನೀಯವಾಗಿದೆ.
ಮೇಲ್ಚಾವಣಿಯೇ ಇಲ್ಲದ ಕೊಠಡಿಯಲ್ಲಿ ವಿದ್ಯಾರ್ಥಿಗಳು ಪಾಠ ಕೇಳುವ ಪರಿಸ್ಥಿತಿ ಇದೆ. ಬಿಸಿಲು, ಮಳೆ, ಗಾಳಿ ಎನ್ನದೇ ಸದಾ ಆತಂಕದಲ್ಲಿ ತೆರೆದ ಕೊಠಡಿಯಲ್ಲಿ ಪಾಠ ಕೇಳುತಿದ್ದಾರೆ. ಮೇಲ್ಚಾವಣಿ ಇಲ್ಲ ಈ ಕಟ್ಟಡವೂ ಸಂಪೂರ್ಣವಾಗಿ ಶಿಥೀಲಾವಸ್ಥೆಗೆ ತಲುಪಿದ್ದು ಇಂದೋ ನಾಳೆಗೋ ಕುಸಿದು ಬೀಳುವ ಸ್ಥಿತಿಯಲ್ಲಿದೆ. ಅದರಲ್ಲೆ ಸುಮಾರು 26 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಠ ಕಲಿಯುತಿದ್ದಾರೆ.
ಕೆಲವೊಮ್ಮೆ ಜೋರಾಗಿ ಮಳೆ ಬಂದಾಗ ಅಡುಗೆ ಕೋಣೆಗೆ ಶಿಪ್ಟ್ ಆಗ್ತಾರೆ ವಿದ್ಯಾರ್ಥಿಗಳು. ಇನ್ನು ಕೆಲವೊಮ್ಮೆ ಅಡುಗೆ ಕೋಣೆ ಬ್ಯೂಸಿಯಾಗಿದ್ದಾಗ ಅಕ್ಕಪಕ್ಕದ ಮನೆಗೆ ಓಡಬೇಕಾಗುತ್ತದೆ ಮಕ್ಕಳು. ಇನ್ನು ಶಿಕ್ಷಕರು ಕುಳಿತುಕೊಳ್ಳಲು ಒಂದು ಕುರ್ಚಿಕುಡಾ ಇಲ್ಲದಂತಾಗಿದೆ. ಸುತ್ತಮುತ್ತಲಿನ ಐದಾರು ಹಳ್ಳಿಗಳ ಮಕ್ಕಳಿಗೆ ಈ ಶಾಲೆ ಆಸರೆಯಾಗಿದ್ದು ಶಾಲೆಯ ಅವ್ಯವಸ್ಥೆ ನೋಡಿ ಪೋಷಕರು ಖಾಸಗಿ ಶಾಲೆಯತ್ತ ಮುಖ ಮಾಡುತ್ತಿದ್ದಾರೆ. ಕಳೆದ ಮೂರು ವರ್ಷಗಳಿಂದ ವಿದ್ಯಾರ್ಥಿಗಳು ಜೀವ ಬಿಗಿ ಹಿಡಿದುಕೊಂಡು ಇಲ್ಲಿ ಕಲಿಯುತಿದ್ದಾರೆ.
ತನ್ನ ಕ್ಷೆತ್ರವನ್ನ ಮಾದರಿ ಕ್ಷೇತ್ರವನ್ನಾಗಿ ಮಾಡುತ್ತೇನೆ ಎಂದಿದ್ದ ಡಿಸಿಎಂ ಜಿ.ಪರಮೇಶ್ವರ್ ಅವರಲ್ಲಿ ಸ್ಥಳೀಯರು ಮನವಿ ಮಾಡಿಕೊಂಡಿದ್ದಾರೆ. ಆದ್ರೂ ಶಾಲೆಗೆ ಕಾಯಕಲ್ಪ ಸಿಕ್ಕಿಲ್ಲ. ವಿದ್ಯಾರ್ಥಿಗಳ ಭಯ ದೂರವಾಗಿಲ್ಲ. ಈಗಲಾದರೂ ನಾಡಿನ ಉಪ ದೊರೆ ಪರಮೇಶ್ವರ್ ಅವರ ಕಣ್ಣುತೆರೆಯಲಿ.
ವರದಿ : ಟಿ.ಯೋಗೀಶ್, ಟಿವಿ5 ತುಮಕೂರು