Top

ಸಾರ್ವಜನಿಕರೇ ಗಮನಿಸಿ : ನಾಳೆ ವೈದ್ಯಕೀಯ ಸೇವೆ ಬಂದ್‌.!!

ಸಾರ್ವಜನಿಕರೇ ಗಮನಿಸಿ : ನಾಳೆ ವೈದ್ಯಕೀಯ ಸೇವೆ ಬಂದ್‌.!!
X

ಬೆಂಗಳೂರು : ನ್ಯಾಷನಲ್ ಮೆಡಿಕಲ್ ಕಮಿಷನ್‌ ಮಸೂದೆ ತಿದ್ದುಪಡಿ ಮಾಡದಂತೆ ಒತ್ತಾಯಿಸಿ, ನಾಳೆ ದೇಶಾಧ್ಯಂತ ಭಾರತೀಯ ವೈದ್ಯರ ಸಂಘ ಬಂದ್‌ಗೆ ಕರೆ ನೀಡಿದೆ.

12 ಗಂಟೆಗಳ ಕಾಲ ವೈದ್ಯಕೀಯ ಸೇವೆಗಳು ಬಂದ್ ಆಗಲಿದ್ದು, ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ತುರ್ತುಸೇವೆ ಹೊರತು ಪಡಿಸಿ ಓಪಿಡಿ ಸೇವೆ ಲಭ್ಯವಿರುವುದಿಲ್ಲ.

[story-lines]

"Dhikkar Diwas" ಎಂಬ ಹೆಸರಿನಲ್ಲಿ ನಡೆಯುತ್ತಿರು ನಾಳಿನ ಪ್ರತಿಭಟನೆಯಲ್ಲಿ, ಸರ್ಕಾರಿ, ಖಾಸಗೀ ಆಸ್ಪತ್ರೆಗಳ ವೈದ್ಯರು ಭಾಗವಹಿಸಲಿದ್ದಾರೆ.

ಈ ಮೂಲಕ ನ್ಯಾಷನಲ್ ಮೆಡಿಕಲ್ ಕಮಿಷನ್‌ 2017ರ ಮಸೂದೆಗೆ ತಿದ್ದುಪಡಿ ತರದಂತೆ ಕೇಂದ್ರ ಸರ್ಕಾರಕ್ಕೆ ಒತ್ತಡ ಏರಲಿವೆ.

ಹೀಗಾಗಿ ರೋಗಿಗಳಿಗೆ ನಾಳೆ ತುರ್ತುಚಿಕಿತ್ಸೆ ಹೊರತಾಗಿ, ಹೊರರೋಗಿಗಳ ವಿಭಾಗದ ಸೇವೆ ಲಭ್ಯವಾಗುವುದಿಲ್ಲ. ಹೊರರೋಗಿಗಳ ಸೇವೆ ಬಂದ್‌ ಮಾಡಿ, ವೈದ್ಯರು ದೇಶದಾಧ್ಯಂತ ಪ್ರತಿಭಟನೆ ನಡೆಸಲಿದ್ದಾರೆ.

Next Story

RELATED STORIES