Top

ಬಿಸಿಲು ಹೆಚ್ಚಾಗಿ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಲಿದೆ! ಸಮೀಕ್ಷೆ ವರದಿ

ಬಿಸಿಲು ಹೆಚ್ಚಾಗಿ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಲಿದೆ! ಸಮೀಕ್ಷೆ ವರದಿ
X

ಭೂಮಿಯ ಮೇಲಿನ ಹವಾಮಾನ ಬದಲಾವಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇದರಿಂದ ಪ್ರತಿಯೊಬ್ಬರೂ ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಪ್ರತಿ ಬಾರಿಯೂ ಹವಾಮಾನ ವೈಪರಿತ್ಯಗಳಿಂದ ಆಗುವ ಹಾನಿಗಳ ಬಗ್ಗೆ ತಜ್ಞರು ಎಚ್ಚರಿಸುತ್ತಲೇ ಬಂದಿದ್ದಾರೆ. ಆದರೆ ಈ ಬಾರಿಯ ಸಮೀಕ್ಷೆ ಅಪಾಯದ ಕರೆಗಂಟೆ ಒತ್ತಿದೆ. ಬಿಸಿಲಿನ ಝಳ ಹೆಚ್ಚಲಿದ್ದು, ಇದರಿಂದ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಲಿದೆ ಎಂದು ಆತಂಕದ ವರದಿ ನೀಡಿದೆ.

ಭೂಮಿಯ ಶಾಖ ಹೆಚ್ಚುತ್ತಿರುವುದರಿಂದ ಮನುಷ್ಯರ ವೈಯಕ್ತಿಕ ಆಲೋಚನೆಗಳ ಮೇಲೂ ಪ್ರಭಾವ ಬೀರುತ್ತಿದೆ. ಅದರಲ್ಲೂ ದೇಹ ಮತ್ತು ಮನಸ್ಸಿನ ಮೇಲೆ ಹೆಚ್ಚು ದುಷ್ಪರಿಣಾಮ ಬೀರಲಿದೆ. ಇದು ಆತ್ಮಹತ್ಯೆ ಪ್ರಚೋದನೆಗೆ ಕಾರಣವಾಗಲಿದೆ ಎಂದು ಸಮೀಕ್ಷೆ ಎಚ್ಚರಿಸಿದೆ.

ಜಾಗತಿಕ ಮಟ್ಟದಲ್ಲಿ ಜನಸಂಖ್ಯೆ ವೇಗವಾಗಿ ಬೆಳೆಯುತ್ತಲೇ ಇದೆ. ಇದರಿಂದ ನಾನಾ ರೀತಿಯ ಬೆಳವಣಿಗೆಗಳು ಅಷ್ಟೇ ವೇಗವಾಗಿ ನಡೆಯುತ್ತಿದೆ. ಈ ಕಾರಣಕ್ಕಾಗಿ ಭೂಮಿಯನ್ನು ಸೂರ್ಯನ ಅಪಾಯಕಾರಿ ವಿಕಿರಣಗಳಿಂದ ರಕ್ಷಿಸುವ ಪದರದಲ್ಲಿನ ಬಿರುಕು ಹೆಚ್ಚಾಗುತ್ತಲೇ ಇದೆ. ಇದರಿಂದ ಭೂಮಿಯ ಶಾಖ ನಿರೀಕ್ಷೆಗೂ ಮೀರಿ ಹೆಚ್ಚಾಗುತ್ತಿದೆ.

ಸ್ಟ್ಯಾಂಡ್ ಫೋರ್ಡ್ ವಿಶ್ವವಿದ್ಯಾಲಯ ನಡೆಸಿದ ಸಮೀಕ್ಷಾ ವರದಿಯನ್ನು ನೇಚರ್ ಕ್ಲೈಮೆಟ್ ಚೇಂಜ್ (ಬದಲಾಗುತ್ತಿರುವ ಹವಾಮಾನ) ಪತ್ರಿಕೆ ಪ್ರಕಟಿಸಿದೆ. ಹವಾಮಾನ ಬದಲಾವಣೆಯಿಂದ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಲಿದ್ದು, ಅಮೆರಿಕ ಮತ್ತು ಮೆಕ್ಸಿಕೋದಲ್ಲಿ 2050ರ ಹೊತ್ತಿಗೆ ಸುಮಾರು 40 ಸಾವಿರ ಜನರು ಆತ್ಮಹತ್ಯೆ ಮಾಡಿಕೊಳ್ಳಲಿದ್ದಾರೆ ಎಂದು ಸಮೀಕ್ಷೆಯಲ್ಲಿ ಅಂದಾಜಿಸಲಾಗಿದೆ.

ಈ ರೀತಿಯ ವರದಿಗಳು ಈ ಹಿಂದೆಯೂ ಬಂದಿದ್ದರೂ ಇಷ್ಟು ಗಾಢ ಪ್ರಮಾಣದಲ್ಲಿ ಜನರ ಮನಸ್ಸಿನ ಮೇಲೆ ಹವಾಮಾನ ಪರಿಣಾಮ ಬೀರುತ್ತದೆ ಎಂದು ಹೇಳಿರಲಿಲ್ಲ. ಸಾಮಾನ್ಯವಾಗಿ ಬೇಸಿಗೆ ಕಾಲದಲ್ಲಿ ಹೆಚ್ಚು ಜನರು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ಈ ಸಮೀಕ್ಷೆ ಪತ್ತೆ ಹಚ್ಚಿದೆ.

Next Story

RELATED STORIES