Top

ರಾತ್ರೋ ರಾತ್ರಿ ಗ್ರಾಮ ತೊರೆದ 60 ಕುಟಂಬಗಳು : ಯಾಕೆ ಗೊತ್ತಾ.?

ರಾತ್ರೋ ರಾತ್ರಿ ಗ್ರಾಮ ತೊರೆದ 60 ಕುಟಂಬಗಳು : ಯಾಕೆ ಗೊತ್ತಾ.?
X

ಚಿಕ್ಕಮಗಳೂರು : ಮೂಡ ನಂಬಿಕೆಗೆ ಕಟ್ಟುಬಿದ್ದು ಸುಮಾರು 60 ಕುಟುಂಬಗಳು, ಊರನ್ನೇ ಬಿಟ್ಟು ಹೋಗಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

ಜಿಲ್ಲೆಯ ಎನ್​.ಆರ್​ ಪುರ ತಾಲೂಕಿನ ಬಾಳೆಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಯಲ್ಲಿ ಸುಮಾರು 15 ವರ್ಷಗಳಿಂದ ನೆಲೆ ನಿಂತಿದ್ದ ಕುಟುಂಬಗಳು ಜ್ಯೋತಿಷಿ ಮಾತನ್ನು ನಂಬಿ ಬದುಕಿ ಬಾಳಿದ್ದ ಗ್ರಾಮವನ್ನೇ ತೊರೆದಿದ್ದಾರೆ.

ಚಂದ್ರಗ್ರಹಣದ ವೇಳೆಗೆ ನೀವು ಊರನ್ನ ತೊರೆಯದಿದ್ದರೆ ಮತ್ತೆ ಮೂರು ಸಾವು ಸಂಭವಿಸಲಿದೆ. ನೀವು ಇಲ್ಲಿ ದೇವಾಲಯವನ್ನು ಕಟ್ಟಿದ್ದು ತಪ್ಪಾಗಿದೆ. ಕೂಡಲೇ ಗ್ರಹಣ ಸಂಭವಿಸೋಕು ಮೊದಲು ಊರನ್ನು ತೊರೆದುಬಿಡಿ ಎಂಬ ಜ್ಯೋತಿಷಿ ಭವಿಷ್ಯ ಹೇಳಿದ್ದರಂತೆ.

https://www.youtube.com/watch?v=l9tH--B0qB4&feature=youtu.be

ಇದಕ್ಕೆ ಹೆದರಿದ ಕುಟುಂಬಗಳು ಇದೀಗ ರಾತ್ರೋ ರಾತ್ರಿ ಊರನ್ನು ಬದುಕು ಕಟ್ಟಿಕೊಂಡಿದ್ದ ಗ್ರಾಮವನ್ನೇ ಬಿಟ್ಟು, ಬೇರೆಡೆ ತೆರಳಿವೆ.

ಕಳೆದ 20 ವರ್ಷಗಳಲ್ಲಿ ಗ್ರಾಮದಲ್ಲಿ 25ಕ್ಕೂ ಸಾವುಗಳು ಸಂಭವಿಸಿದ್ದವಂತೆ. ಇದೀಗ ಮತ್ತೆ ಸಾವು ಸಂಭವಿಸೋ ಮುನ್ನಾ ಊರನ್ನು ಬಿಟ್ಟು ಬಿಡಲು ನಿರ್ಧರಿದ ಕುಟುಂಬಗಳು ಅಕ್ಕ-ಪಕ್ಕದ ಗ್ರಾಮಸ್ಥರಿಗೋ ಹೇಳದೆ ಊರನ್ನು ಬಿಟ್ಟು ಹೋಗಿದ್ದಾರೆ. ಈ ಕುಟುಂಬಗಳ ನಡೆಗೆ ಸ್ಥಳೀಯರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಮಲಯಾಳಿ ಮಾತ್ರಿಕರ ಸಲಹೆಯಂತೆ ಇವರು ಊರನ್ನು ಬಿಟ್ಟಿದ್ದಾರೆ ಅಂತಾ ಕೆಲ ಸ್ಥಳೀಯರು ಸಂಶಯಗೊಂಡಿದ್ದಾರೆ.

Next Story

RELATED STORIES