Top

ಕೈ ಕಟ್ ಆದ ಕಟ್ಟಾಭಿಮಾನಿಗೆ ಸಹಾಯಹಸ್ತ ಚಾಚಿದ ಯಶ್​

ಕೈ ಕಟ್ ಆದ ಕಟ್ಟಾಭಿಮಾನಿಗೆ ಸಹಾಯಹಸ್ತ ಚಾಚಿದ ಯಶ್​
X

ಕಷ್ಟದಲ್ಲೇ ಬೆಳೆದ ನಟ ಯಶ್​ಗೆ ಕಷ್ಟದಲ್ಲಿರೋರನ್ನ ಕಂಡರೆ ಅವರ ಮನ ಮಿಡಿಯದೇ ಇರದು. ಅವರಿಗೆ ಕೈಲಾದ ಸಹಾಯ ಮಾಡಿ, ಆಸರೆಯಾಗುವ ಜಾಯಮಾನ ಅವ​ರದ್ದು. ಸದ್ಯ ಅಂತಹ ಹತ್ತಾರು ಕಾರ್ಯಗಳನ್ನು ಯಶ್ ತೆರೆಮೇಲೆ ಮಾಡಿಕೊಂಡು ಬರುತ್ತಿದ್ದಾರೆ. ಇದೀಗ ಯಶ್ ಅಭಿಮಾನಿಯೊಬ್ಬನ ನೆರವಿಗೆ ಸಹಾಯಹಸ್ತ ಚಾಚಿದ್ದಾರೆ.

ಕಟ್ಟಾಭಿಮಾನಿಯೊಬ್ಬನಿಗೆ ಯಶ್ ಆಸರೆ ಆಗಿದ್ದಾರೆ. ಬ್ಯಾನರ್ ಕಟ್ಟುವ ವೇಳೆ ಕರೆಂಟ್ ವಯರ್ ತಾಗಿ ಎರಡೂ ಕೈ ಕಳೆದುಕೊಂಡ ಅಭಿಮಾನಿಗೆ ಯಶ್ ನೆರವಾಗಿದ್ದಾರೆ. ಕೇವಲ ಪರಿಹಾರ ಮೊತ್ತ ನೀಡಿ ಕೈ ತೊಳೆದುಕೊಳ್ಳದೇ ಆತನ ಇಡೀ ಜೀವನಕ್ಕೆ ಆಸರೆಯಾಗುವಂತಹ ನೆರವು ನೀಡಲು ಮುಂದಾಗಿದ್ದಾರೆ.

ಈತ ಹಾವೇರಿಯ ಅಗಡಿ ಗ್ರಾಮದ ಯಶ್​ರ ಕಟ್ಟಾಭಿಮಾನಿ ಹರೀಶ್. 24 ವರ್ಷದ ಈ ತರುಣ, ತಳ್ಳುವ ಗಾಡಿಯಲ್ಲಿ ಊಟ ತಿಂಡಿ ಮಾರಿಕೊಂಡು ಜೀವನ ಸಾಗಿಸುತ್ತಿದ್ದ. ತನ್ನ ಜೊತೆಗೆ ತನ್ನ ಇಡೀ ಕುಟುಂಬಕ್ಕೆ ಆಸರೆಯಾಗಿದ್ದ ಈ ಹರೀಶ್. ಮಾರ್ಚ್​ನಲ್ಲಿ ನಡೆದ ಊರ ಜಾತ್ರೆಯಲ್ಲಿ ಈತ ಮಾಡಿಕೊಂಡ ಒಂದು ಯಡವಟ್ಟು, ಲೈಫ್ ಲಾಂಗ್ ಕೊರೆಯೋ ಹಾಗಾಯ್ತು.

ಹೌದು, ಊರ ಜಾತ್ರೆಯಲ್ಲಿ ಯಶ್​ರ ಕಟೌಟ್ ಕಟ್ಟಲು ಹೋಗಿ, ಅಚಾನಕ್ಕಾಗಿ ತಗುಲಿದ ವಿದ್ಯುತ್ ಕಂಬಿಯಿಂದ ತನ್ನ ಎರಡೂ ಕೈಗಳನ್ನ ಕಳೆದುಕೊಂಡಿದ್ದಾನೆ. ಈ ವಿಷಯ ತಿಳಿದ ಯಶ್, ಆತನನ್ನ ಭೇಟಿ ಮಾಡಿ, ಬುದ್ದಿವಾದ ಹೇಳೋದ್ರ ಜೊತೆಗೆ ಮಾನಸಿಕ ಸ್ಥೈರ್ಯ ತುಂಬಿ, ಆಸರೆ ಆಗ್ತಿದ್ದಾರೆ. ಅಷ್ಟೇ ಅಲ್ಲ, ಆತನ ಜೀವನ ಪೋಷಣೆಗೆ ಮಾತುಕಥೆ ಕೂಡ ನಡೆಸ್ತಿದ್ದಾರೆ.

ಎರಡೂ ಕೈ ಕಳೆದುಕೊಂಡ ಹರೀಶ್​ಗೆ ಧನ ಸಹಾಯ ಮಾಡಿದ್ರೆ, ಅದು ತಕ್ಷಣಕ್ಕೆ ಪರಿಹಾರ ಸಿಕ್ಕಂತಾಗುತ್ತೆ ಅನ್ನೋದು ಯಶ್​ರ ಅಭಿಪ್ರಾಯ. ಹಾಗಾಗಿಯೇ ಯಶ್, ತಜ್ಞರ ಜೊತೆ ಮಾತನಾಡ್ತಿದ್ದು, ಹರೀಶ್​ಗೆ ಲೈಫ್ ಲಾಂಗ್ ಜೀವನ ಪೋಷಣೆಗೆ ಅಂತ ಕೆಲಸ ಮತ್ತು ಚಿಕಿತ್ಸೆ ನೀಡಿಸೋ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಿದ್ದಾರೆ.

ಒಟ್ಟಾರೆ ಯಶ್ ಏನೇ ಮಾಡಿದ್ರು ದುರದೃಷ್ಟಿ ಇರುತ್ತೆ.. ಅವರ ನಿರ್ಧಾರದಲ್ಲಿ ಮುಂದಿನ ಯೋಜನೆ ಇರುತ್ತೆ. ಸದ್ಯ ಹರೀಶ್ ವಿಚಾರದಲ್ಲೂ ಅದೇ ರೀತಿಯ ಸ್ಟ್ರಾಂಗ್ ನಿರ್ಧಾರ ತೆಗೆದುಕೊಳ್ತಿರೋ ಯಶ್, ಆತನ ಬಾಳಿಗೆ ಆಸರೆ ಆಗ್ತಿದ್ದಾರೆ. ಇನ್ನು ಈ ರೀತಿ ಅಭಿಮಾನ ತೋರೋಕ್ಕೆ ಹೋಗಿ ಜೀವಕ್ಕೆ ಕುತ್ತು ತಂದುಕೋಬೇಡಿ ಅಂತಲೂ ಯಶ್ ಅಭಿಮಾನಿಗಳಿಗೆ ಕಿವಿಮಾತು ಹೇಳಿದ್ದಾರೆ. ಅದೇನೇ ಇರಲಿ, ಯಶ್​ರ ಈ ಹೃದಯವಂತಿಕೆಯನ್ನ ಮೆಚ್ಚಲೇಬೇಕು. ಅಸಹಾಯಕರ ಪಾಲಿನ ಆಶಾಕಿರಣವಾಗೋ ಶ್ರೀಮಂತ ಮನಸ್ಸಿರೋ ಯಶ್​ ಯಶಸ್ವೀ ಜರ್ನಿ ಹೀಗೇ ಮುಂದುವರೆಯಲಿ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ರಾಜು ಹಾವೇರಿ, ಟಿವಿ5

Next Story

RELATED STORIES