Top

ತೆರೆಗೆ ಬರ್ತಿದ್ದಾನೆ ಭೀಮಸೇನ ನಳಮಹರಾಜ

ತೆರೆಗೆ ಬರ್ತಿದ್ದಾನೆ ಭೀಮಸೇನ ನಳಮಹರಾಜ
X

ಭೀಮಸೇನ ನಳಮಹರಾಜ, ಈ ಚಿತ್ರದ ಹೆಸರು ಕೇಳಿದ್ರೆ ಸಾಕು ಎಲ್ಲರಿಗೂ ಅರ್ಥವಾಗುತ್ತೆ, ಇದು ಪಕ್ಕಾ ಅಡುಗೆಗೆ ಸಂಭಂದ ಪಟ್ಟ ಸಿನಿಮಾ ಅಂತ. ರಕ್ಷಿತ್​ ಶೆಟ್ಟಿ, ಪುಷ್ಕರ್​ ಮಲ್ಲಿಕಾರ್ಜುನಯ್ಯ, ಎಂ.ರಾವ್​ ಜಂಟಿಯಾಗಿ ನಿರ್ಮಾಣ ಮಾಡ್ತಿರುವ ಚಿತ್ರದ ಶೂಟಿಂಗ್​ ಇತ್ತೀಚೆಗಷ್ಟೆ ಕಂಪ್ಲೀಟ್​ ಆಗಿದೆ. ಸುಮಾರು ಎರಡು ವಾರಗಳ ಕಾಲ ಕೊಡಚಾದ್ರಿಯಲ್ಲಿ ಚಿತ್ರದ ಕೊನೆ ಹಂತದ ಚಿತ್ರೀಕರಣ ಮಾಡಲಾಗಿದೆ.

priyanka timmesh

ಉಪ್ಪು, ಹುಳಿ, ಖಾರ, ಸಿಹಿ, ಕಹಿ, ಒಗರು ಹೀಗೆ ಆರು ರಸಗಳನ್ನು ಹೊಂದಿರುವ ಪಾತ್ರಗಳನ್ನು ಪ್ರತಿನಿಧಿಸುವ ಆರು ಪಾತ್ರಗಳ ಸುತ್ತ ಚಿತ್ರದ ಕಥೆ ನಡೆಯುತ್ತದೆ. ಚಿತ್ರದಲ್ಲಿ ಭಟ್ಟನಾಗಿ ಕಿರಿಕ್​ ಪಾರ್ಟಿ ಖ್ಯಾತಿಯ ಅರವಿಂದ್​ ಅಯ್ಯರ್​ ಚಿತ್ರದಲ್ಲಿ ನಾಯಕ ನಟನಾಗಿ ಕಾಣಿಸಿಕೊಂಡಿದ್ದಾರೆ. ಇವರ ಜೊತೆ ಸರಳ ಕ್ರಿಶ್ಚಿಯನ್​ ಹುಡುಯಾಗಿ ಪ್ರಿಯಾಂಕಾ ತಿಮ್ಮೇಶ್​ ಹಾಗೂ ಅಯ್ಯಂಗಾರಿ ಹುಡುಗಿಯಾಗಿ ಆರೋಹಿ ನಾರಾಯಣ್​ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಇತರೇ ಪಾತ್ರಧಾರಿಗಳಾಗಿ ಅಚ್ಯುತ್​ ಕುಮಾರ್​, ಬಾಲ ಕಲಾವಿದರಾದ ಆದ್ಯ, ಚಿತ್ರಾಲಿ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಚಿತ್ರಕ್ಕೆ ಯುವ ನಿರ್ದೇಶಕ ಕಾರ್ತಿಕ್ ಸರಗೂರು ಆ್ಯಕ್ಷನ್ ಕಟ್ ಹೇಳಿದ್ದು, ಚಿತ್ರದ ಹಾಡುಗಳಿಗೆ ಚರಣ್ ರಾಜ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಸದ್ಯಕ್ಕೆ ಶೂಟಿಂಗ್ ಮುಗಿಸಿ, ಪೋಸ್ಟ್ ಪ್ರೊಡಕ್ಷನ್ ಕಾರ್ಯದಲ್ಲಿರುವ ಭೀಮಸೇನ ನಳಮಹಾರಾಜ ಚಿತ್ರದ ಟೀಸರ್ ಮತ್ತು ಆಡಿಯೋ ಆಗಸ್ಟ್ ವೇಳೆಗೆ ಬಿಡುಗಡೆಯಾಗುವ ಸಾಧ್ಯತೆ ಇದೆ.

ಪ್ರಿಯಾಂಕ ತಳವಾರ, ಎಂಟ್ರಟೈನ್ಮೆಂಟ್​ ಬ್ಯರೋ.

ಅರವಿಂದ್ ಅಯ್ಯರ್

Next Story

RELATED STORIES