Top

EXCLUSIVE: ಶ್ರೀಮನ್ನಾರಾಯಣ ಸೆಟ್‌ಗೆ ಶಿವಣ್ಣ, ರವಿಮಾಮ ಭೇಟಿ

EXCLUSIVE: ಶ್ರೀಮನ್ನಾರಾಯಣ ಸೆಟ್‌ಗೆ ಶಿವಣ್ಣ, ರವಿಮಾಮ ಭೇಟಿ
X

ಕಿರಿಕ್​ ಪಾರ್ಟಿ ಸಕ್ಸಸ್​ ಆದ ಬೆನ್ನಲ್ಲೇ ಕಿರಿಕ್​ ಹುಡುಗ ರಕ್ಷಿತ್​ ಶೆಟ್ಟಿ ಶ್ರೀಮನ್ನಾರಾಯಣನ ಅವತಾರವೆತ್ತಿ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಡ್ತಿದ್ದಾರೆ. ಹುಟ್ಟುಹಬ್ಬದ ದಿನ ಚಿತ್ರದ ಟೀಸರ್​ ರಿಲೀಸ್​ ಮಾಡಿ ಪ್ರೇಕ್ಷಕರ​ ಮನ ಗೆದ್ದಿದ್ದರು. ಟೀಸರ್​ ನೋಡಿದ ಸಿನಿಪ್ರಿಯರಿಗೆ ಸಿನಿಮಾದ ಬಗ್ಗೆ ಸಾಕಷ್ಟು ನೀರೀಕ್ಷೆಗಳು ಹುಟ್ಟಿಸಿವೆ. ಇನ್ನು ಶೂಟಿಂಗ್​ ಹಂತದಲ್ಲಿರುವ ಈ ಚಿತ್ರ, ನಗರದ ಕಂಠೀರವ ಸ್ಟುಡಿಯೋದಲ್ಲಿ ಅದ್ದೂರಿ ಸೆಟ್​ನಲ್ಲಿ ಚಿತ್ರೀಕರಣ ಮಾಡಲಾಗ್ತಿದೆ.

ಇದೇ ವೇಳೆ ಚಿತ್ರರಂಗದ ಹಲವು ಗಣ್ಯರು ಕೂಡ ಚಿತ್ರದ ಸೆಟ್​ಗೆ ಭೇಟಿ ನೀಡಿ ಚಿತ್ರತಂಡಕ್ಕೆ ಶುಭಕೋರಿದ್ದಾರೆ. ಕೆಲವು ದಿನಗಳ ಹಿಂದೆ ಸ್ಯಾಂಡಲ್​ವುಡ್​ನ ಚಕ್ರವರ್ತಿ ಡಾ.ಶಿವರಾಜ್​ಕುಮಾರ್​ ಶೂಟಿಂಗ್​ ಸೆಟ್​ಗೆ ತೆರಳಿದ್ರು. ಚಿತ್ರದ ಹಾಡಿನ ಶೂಟಿಂಗ್​ ನಡೆಯುತ್ತಿರುವಾಗ ಶಿವಣ್ಣ ಭೇಟಿ ನೀಡಿದ್ದಾರೆ. ಜೊತೆಗೆ ಚಿತ್ರದ ಮೇಕಿಂಗ್​ ಅನ್ನು ಕೂಡ ವೀಕ್ಷಿಸಿದ್ದಾರೆ.

ಇದರ ಬೆನ್ನಲ್ಲೇ ಕ್ರೇಜಿಸ್ಟಾರ್ ರವಿಚಂದ್ರನ್​ ಕೂಡ ಚಿತ್ರದ ಸೆಟ್​ಗೆ​ ಭೇಟಿ ನೀಡದ್ರು. ಇದೇ ವೇಳೆ ನಟ ರಕ್ಷಿತ್​ ಶೆಟ್ಟಿ ಅವರೊಂದಿಗೆ ಒಂದಿಷ್ಟು ಹರಟಿದ್ದಾರೆ. ಜೊತೆಗೆ ಚಿತ್ರ ಸಕ್ಸಸ್​ಫುಲ್​ ಆಗ್ಲಿ ಅಂತ ಕೂಡ ಹಾರೈಸಿದ್ರು. ರವಿ ಮಾಮಾ ಹಾರೈಸಿದ್ದು, ಚಿತ್ರತಂಡಕ್ಕೆ ಪಾಸಿಟಿವ್​ ವೈಬ್ರೇಷನ್​ ಸಿಕ್ಕಾತಾಗಿದೆ ಅಂತ ಚಿತ್ರದ ನಿರ್ಮಾಪಕ ಪುಷ್ಕರ್​ ಮಲ್ಲಿಕಾರ್ಜುನಯ್ಯ ತಮ್ಮ ಫೇಸ್​ಬುಕ್​ ಅಕೌಂಟ್​ನಲ್ಲಿ ಬರೆದುಕೊಂಡಿದ್ದಾರೆ. ಅಂದಹಾಗೆ, ಚಿತ್ರಕ್ಕೆ ಸಚಿನ್​ ಆ್ಯಕ್ಷನ್​ ಕಟ್​ ಹೇಳಿದ್ದು, ಮೊದಲ ಬಾರಿಗೆ ರಕ್ಷಿತ್​ಗೆ ಜೋಡಿಯಾಗಿ ಶಾನ್ವಿ ಶ್ರೀವಾತ್ಸವ್​​ ನಟಿಸಿದ್ದಾರೆ.

ಪ್ರಿಯಾಂಕ ತಳವಾರ, ಎಂಟ್ರಟೈನ್ಮೆಂಟ್​ ಬ್ಯುರೋ.

Next Story

RELATED STORIES