Top

ವಿದೇಶದಲ್ಲೂ ಕಮಾಲ್‌ಗೆ 'ನಾಗರಹಾವು' ರೆಡಿ..!!

ವಿದೇಶದಲ್ಲೂ ಕಮಾಲ್‌ಗೆ ನಾಗರಹಾವು ರೆಡಿ..!!
X

ನಾಗರಹಾವು.. ಚಿತ್ರದ ಹೆಸರು ಕೇಳುತ್ತಿದಂತೆ ಮೈಯಲ್ಲಾ ರೋಮಾಂಚನವಾಗುತ್ತೆ.. ಪುಟ್ಟಣ್ಣಕಣಗಲ್​ರ ನಿರ್ದೇಶನದಲ್ಲಿ ಮೂಡಿ ಅತ್ಯದ್ಭುತ ಚಿತ್ರ.

1972ರಲ್ಲಿ ಬಿಡುಗಡೆಯಾಗ ಪುಟ್ಟಣ್ಣ ಕಣಗಾಲ್‌ ನಿರ್ದೇಶನದ ಚಿತ್ರದ ಮೂಲಕ, ರೆಬಲ್ ಸ್ಟಾರ್‌ ಅಂಬರೀಶ್‌ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದರು. ಇಂತಹ ಚಿತ್ರ ಅಂದಿನಿಂದ ಇಂದಿನವರೆಗೂ ಅದೇ ಚಾರ್ಮನ್ನು ಸಿನಿ ನೋಡುಗರಲ್ಲಿ ಉಳಿಸಿಕೊಂಡಿದೆ.

ಕಳೆದ ವಾರ ರೀ ರಿಲೀಸ್‌ ಆಗಿರುವ ಇಂತಹ ಚಿತ್ರ, ಥೇಟ್ ಮೊದಲ ಬಾರಿಗೆ ಚಿತ್ರ ಬಿಡುಗಡೆಯಾದಂತೆ ಥಿಯೇಟರ್‌ಗಳಲ್ಲಿ ಸಿನಿ ಪ್ರೇಕ್ಷಕರನ್ನು ಸೆಳೆಯುತ್ತಿದೆ. 175 ಚಿತ್ರಮಂದಿರಗಳಲ್ಲಿ ರಿ ರಿಲೀಸ್‌ ಆದ 7.1 ಸೌಂಡ್ ಹಾಗು ಸಿನಿಮಾ ಸ್ಕೋಪ್‌ನಲ್ಲಿ ಬಂದ ಈ ಚಿತ್ರ ನೋಡೋಕೆ, ಪ್ರೇಕ್ಷಕರು ಮುಗಿ ಬೀಳುತ್ತಿದ್ದಾರೆ.

ಅಹ್ಮದಾಬಾದ್, ಹೈದ್ರಾಬಾದ್ ಸೇರಿದಂತೆ ಇತರೆ ರಾಜ್ಯಗಳಲ್ಲಿ ಬಿಡುಗಡೆಯಾಗಿದೆ. ಈ ಚಿತ್ರವನ್ನು ವಿದೇಶದಲ್ಲೂ ರಿಲೀಸ್ ಮಾಡೋಕೆ ತಯಾರಿ ನಡೆಸಿದೆ.

ಈ ಬಗ್ಗೆ ವಿತರಕ ಕಾರ್ತಿಕ್‌ ಗೌಡ ಹಾಗೂ ಬಾಲಾಜಿ ಮಾಹಿತ ಬಿಚ್ಚಿಟ್ಟಿದ್ದು, ಅಮೇರಿಕಾ, ಇಂಗ್ಲೆಡ್ ಮತ್ತು ಆಸ್ಟ್ರೇಲಿಯಾ ಕನ್ನಡಿಗರು ನೋಡುವ ಆಸೆ ವ್ಯಕ್ತ ಪಡಿಸಿದ್ದಾರೆ.

ಹೀಗಾಗಿ ಮುಂದಿನ ಎರಡು ವಾರಗಳಲ್ಲಿ ವಿದೇಶದಲ್ಲೂ ನಾಗರಹಾವು ಚಿತ್ರವನ್ನು ರೀ ರಿಲೀಸ್ ಮಾಡಲಾಗುತ್ತದೆ ಎಂಬ ಮಾಹಿತಿ ಬಿಚ್ಚಿಟ್ಟಿದ್ದಾರೆ.

Next Story

RELATED STORIES