Top

ವಿಶ್ವ ಸುಂದರಿಯನ್ನೇ ಮೀರಿಸಿದ ಪ್ರಿಯಾ ವಾರಿಯರ್

ವಿಶ್ವ ಸುಂದರಿಯನ್ನೇ ಮೀರಿಸಿದ ಪ್ರಿಯಾ ವಾರಿಯರ್
X

ಹರಿಯಾಣದಾದ ಬೆಡಗೆ, ವಿಶ್ವ ಸುಂದರಿ ಮಾನುಷಿ ಚಿಲ್ಲರ್ 2017ರಲ್ಲಿ ಮಿಸ್​ ವರ್ಲ್ಡ್​ ಕಿರಿಟವನ್ನು ಮುಡಿಗೇರಿಸಿಕೊಂಡರು. ಭಾರತಕ್ಕೆ ಮಾನುಷಿ ಪರಿಚಯವಾಗುತ್ತಿದ್ದಂತ್ತೆ ಅವರ ಇನ್​ಸ್ಟಾಗ್ರಾಂ ಅಕೌಂಟ್​ನಲ್ಲಿ ಫಾಲೋವರ್ಸ್​ಗಳು ಸುರಿಮಳೆಯೇ ​ಹರಿದ ಬಂದಿತ್ತು. ಅದೇಷ್ಟೋ ಜನ ಅವರನ್ನ ಫಾಲೋ ಮಾಡಲು ಆರಂಭಿಸಿದ್ರು. ಆದ್ರೆ ಇತ್ತೀಚೆಗೆ ಅವರ ಫಾಲೋವರ್ಸ್​ ಸಂಖ್ಯೆ ಕಡಿಮೆಯಾಗಿತ್ತಿದೆ.. ಯಾಕಪ್ಪ ಈ ವಿಶ್ವ ಸುಂದರಿ ಕಡಿಮೆಯಾದ್ರು ಅಂತ ನೋಡಿದ್ರೆ, ಮಾನುಷಿಗೆ ಕಾಂಪಿಟೆಷನ್​ ಕೊಡೊದಕ್ಕೆ ಕಣ್ಸನ್ನೆ ಸುಂದರಿ ಅಖಾಡಕ್ಕೆ ಇಳಿದಿದ್ದಾರೆ.

ಒರು ಆಡರ್​ ಲವ್​ ಚಿತ್ರದ ಖ್ಯಾತಿಯ ಪ್ರಿಯಾ ಪಕ್ರಕಾಶ್​ ವಾರಿಯರ್​, ಅವರ ಕಣ್ಸನ್ನೆಯಿಂದೆ ಅದೆಷ್ಟು ಹೃದಯಗಳನ್ನು ಕದ್ದಿದ್ದಾರೆ ಅಂದ್ರೆ ಅಲ್ಪಾವಧಿಯಲ್ಲಿ ವಿಶ್ವ ಸುಂದರಿ ಮಾನುಷಿ ಚಿಲ್ಲರ್​ಗಿಂತ ಈಕೆಗೇ ಫಾಲೋವರ್ಸ್​ ಹೆಚ್ಚಾಗಿದ್ದಾರೆ. ಮಾನುಷಿನ 40ಲಕ್ಷ ಮಂದಿ ಫಾಲೋ ಮಾಡಿದ್ರೆ, ಪ್ರಿಯಾಳನ್ನ 61ಲಕ್ಷ ಮಂದಿ ಫಾಲೋ ಮಾಡ್ತಿದ್ದಾರೆ. ಅನೇಕರು ಮಾನುಷಿ ಹಾಕಿರುವ ಫೋಟೋಗಳಲ್ಲಿ ಹೆಚ್ಚಾಗಿ ಆಕೆ ಧರಿಸಿರುವ ಡ್ರೆಸ್ ಇಷ್ಟಪಟ್ಟಿದ್ದಾರೆ.

ಈ ಮೊದಲು ಮಿಸ್​ ವರ್ಲ್ಡ್​, ಮಿಸ್​ ಯುನಿವರ್ಸ್​ ಪಟ್ಟಗಳನ್ನು ಮುಡಿಗೇರಿಸಿಕೊಂಡ ಚೆಲುವೆಯರು ಬಾಲಿವುಡ್​​ಗೆ ಕಾಲಿಟ್ಟು ಕಮಾಲ್​ ಮಾಡ್ತಿದ್ದಾರೆ. ಇದೀಗ ಮಾನುಷಿ ಚಿಲ್ಲರ್​ ಸರದಿ. ಈಕೆಯು ಕೂಡ ಬಾಲಿವುಡ್​ಗೆ ಎಂಟ್ರಿ ಕೊಡಲು ಸಿದ್ಧವಾಗಿದ್ದು, ಅವಕಾಶ ಸಿಕ್ಕರೆ ನಟಿಸಲು ರೆಡಿಯೆಂದು ಹೇಳಿದ್ದಾರೆ.

ಪ್ರಿಯಾಂಕ ತಳವಾರ, ಎಂಟ್ರಟೈನ್ಮೆಂಟ್​ ಬ್ಯುರೋ.

Next Story

RELATED STORIES