ಹೋಗಿ ಗಡಿಯಲ್ಲಿ ಹೋಮ ಹವನ ಮಾಡಿ- ಭಗವಾನ್

ಮೈಸೂರು: ಮೈಸೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಪ್ರೋ.ಕೆ.ಎಸ್ ಭಗವಾನ್, ಹೋಮ ಹವನದ ಬಗ್ಗೆ ಕುಟುಕಿದ್ದಾರೆ. ಹೋಮ ಹವನದಿಂದ ಶತ್ರುಗಳು ಓಡಿ ಹೋದರೆ ನಾನೇ ಯಾಗ ಮಾಡುತ್ತೇನೆ. ಮಿಲಿಟರಿಗೆ ಕೊಡುವ ಹಣವೆಲ್ಲ ಯಾಗಕ್ಕೆ ಖರ್ಚು ಮಾಡಲಿ. ಯೋಧರೆಲ್ಲ ವಾಪಾಸ್ ಬರಲಿ. ಯಜ್ಞದ ಮೂಲಕವೇ ಶತ್ರುಗಳನ್ನ ಸದೆ ಬಡೆಯೋಣ ಎಂದು ವ್ಯಂಗ್ಯವಾಡಿದ್ದಾರೆ.
ಇನ್ನು ಆಷಾಢದಲ್ಲಿ ನನಗೆ ಒಳ್ಳೆಯ ದಿನ ಎಂಬ ಸಚಿವ ಜಿ.ಟಿ.ದೇವೇಗೌಡರ ಹೇಳಿಕೆ ಬಗ್ಗೆ ಮಾತನಾಡಿದ ಭಗವಾನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆಷಾಢ ಮಾಸ ಕೆಟ್ಟದ್ದು ಎಂಬುದು ಸುಳ್ಳು. ಆಷಾಢ ಮಾಸದಲ್ಲೇ ಉತ್ತಮ ಮಳೆಯಾಗಿದೆ. ರಾಜ್ಯದ ಎಲ್ಲಾ ಜಲಾಶಯಗಳು ಭರ್ತಿಯಾಗಿವೆ. ಹಾಗಾಗಿ ಆಷಾಢ ಮಾಸ ಎಂದೂ ಕೂಡ ಕೆಟ್ಟದ್ದಲ್ಲ. ಸಚಿವ ಜಿ.ಟಿ ದೇವೇಗೌಡರ ನಿಲುವು ಸರಿಯಾಗಿದೆ ಎಂದು ಹೇಳಿದ್ದಾರೆ. ಅಲ್ಲದೇ ಯಡ್ಯೂರಪ್ಪ ಮೊನ್ನೆ ಮಾಡಿಸಿದ ಯಾಗ ವ್ಯರ್ಥ. ಸಿಎಂ ಸಹ ನಾಳೆ ತಿರುಪತಿಗೆ ಹೋಗ್ತಿದ್ದಾರೆ. ಈ ಮೂಢನಂಬಿಕೆ ಬಿಟ್ಟರೆ ಕುಮಾರಸ್ವಾಮಿ ಒಳ್ಳೆಯ ಕೆಲಸ ಮಾಡುತ್ತಾರೆ ಎಂದು ಯಜ್ಞ ಯಾಗಗಳ ವಿರುದ್ದ ಭಗವಾನ್ ಕಿಡಿಕಾರಿದ್ದಾರೆ.