Top

ಗೀತಾ ಗೋವಿಂದಂ ಹಾಡಿಗೆ ಧ್ವನಿಯಾದ ಅರ್ಜುನ್ ರೆಡ್ಡಿ

ಗೀತಾ ಗೋವಿಂದಂ ಹಾಡಿಗೆ ಧ್ವನಿಯಾದ ಅರ್ಜುನ್ ರೆಡ್ಡಿ
X

ಗೀತಾ ಗೋವಿಂದಂ. ಕೊಡಗಿನ ಕುವರಿ, ಕಿರಿಕ್​ ಹುಡುಗಿ ರಶ್ಮಿಕಾ ಮಂದಣ್ಣ ಅಭಿನಯದ ಟಾಲಿವುಡ್​ನ ಎರಡನೇ ಸಿನಿಮಾ. ವಿಜಯ್​ ದೇವರಕೊಂಡ ಹಾಗೂ ರಶ್ಮಿಕಾಳ ಟ್ವಿಟರ್​ ಸಂಭಾಷಣೆ ನೋಡಿ ಜನರಿಗೆ ಇವರಿಬ್ಬರ ನಡುವೇ ಸಮ್‌ಥಿಂಗ್​ ಸಮ್‌ಥಿಂಗ್​ ಇದೆ ಅಂತ ಕುತೂಹಲ ಮೂಡಿಸಿದ್ದು ಗೊತ್ತೇ ಇದೆ. ಇದಾದ ಬಳಿಕ ಚಿತ್ರದ ಒಂದೊಂದೆ ಎಳೆಯನ್ನ ಬಿಟ್ಟುಕೊಟ್ಟ ಚಿತ್ರತಂಡ ಮೊದಲ ಹಾಡನ್ನ ರಿಲೀಸ್​ ಮಾಡಿದ್ದೇ ತಡ. ಆ ಒಂದು ಹಾಡಿಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬಂತು. ರಿಲೀಸ್​ ಆದ ಒಂದೇ ದಿನಕ್ಕೆ ಲಕ್ಷಗಟ್ಟಲೇ ಮಂದಿ ವ್ಯೂವ್​ ಮಾಡಿದ್ರು.ಆ ಮೆಲೊಡಿ ಟ್ರ್ಯಾಕ್ ಅಭಿಮಾನಿಗಳಿಗೆ​ ಅಷ್ಟು ಇಷ್ಟ ಆಗಿತ್ತು.

ಆನಂತರ ರಿಲೀಸ್​ ಆದ ಟೀಸರ್​​ನ ನೋಡಿ ಅಭಿಮಾನಿಗಳು ಭಾರಿ ಮೆಚ್ಚುಗೆ ವ್ಯಕ್ತ ಪಡಿಸಿದ್ರು. ಟೀಸರ್​ನಲ್ಲಿ ಇವರಿಬ್ಬರ ಕೆಮಿಸ್ಟ್ರಿ ನೋಡಿ ಪ್ರೇಕ್ಷಕರು ಫಿದಾ ಆಗಿದ್ರು. ಟೀಸರ್​ನಲ್ಲೆ ಇಷ್ಟು ನಗಿಸುತ್ತೆ ಅಂದ್ರೆ ಇನ್ನು ಸಿನಿಮಾ ಪೂರ್ತಿ ಇನ್ನೆಷ್ಟು ಕಾಮಿಡಿ ಹಾಗೂ ಲವ್​ ಇರ್ಬೇಡ ಅಂತ ಸಿನಿ ಪ್ರಿಯರು ಊಹಿಸಿಕೊಂಡಿದ್ದಾರೆ.

ಇತ್ತಕಡೆ ಚಿತ್ರತಂಡ ಇದರ ಬೆನ್ನಲ್ಲೆ ಮತ್ತೊಂದು ಲಿರಿಕಲ್​ ಸಾಂಗ್​ನ ಇಂದು ಬಿಡುಗಡೆ ಮಾಡಿದೆ. ಅದು ವಾಟ್​ ದ ಎಫ್​ ಸಾಂಗ್​.ಇದೊಂದು ಪೆಪ್ಪಿ ಸಾಂಗ್ ಆಗಿದ್ದು, ಈ ಹಾಡನ್ನ ಸ್ವತಃ ವಿಜಯ್​ ದೇವರಕೊಂಡ ಹಾಡಿದರೊದು ವಿಶೇಷ. ಹಾಡಿನ ಲಿರಿಕ್ಸ್​ ಸಖತ್​ ಕ್ಯಾಚಿಯಾಗಿದ್ದು ಈ ಎರಡನೇ ಹಾಡು ಕೂಡ ಟಾಪ್​ ಟ್ರೆಂಡಿಂಗ್​ ಲಿಸ್ಟ್​ ಸೇರೋದ್ರಲ್ಲಿ ಅನುಮಾನವೇ ಇಲ್ಲ.

ಪ್ರಿಯಾಂಕ ತಳವಾರ, ಎಂಟ್ರಟೈನ್ಮೆಂಟ್​ ಬ್ಯುರೋ.

Next Story

RELATED STORIES