Top

ಕಾರ್ಗಿಲ್ ಯುದ್ಧದ ಬಗ್ಗೆ ನಿಮಗಿದು ಗೊತ್ತೇ...?

ಕಾರ್ಗಿಲ್ ಯುದ್ಧದ ಬಗ್ಗೆ ನಿಮಗಿದು ಗೊತ್ತೇ...?
X

ಇಂದು ದೇಶದೆಲ್ಲೆಡೆ 19ನೇ ಕಾರ್ಗಿಲ್ ವಿಜಯೋತ್ಸವದ ಸಂಭ್ರಮ. ಕಾರ್ಗಿಲ್‌ ಯುದ್ಧದಲ್ಲಿ ದೇಶಕ್ಕಾಗಿ ತಮ್ಮ ಜೀವತೆತ್ತ ಭಾರತದ ಸೈನಿಕರಿಗೊಂದು ಸಲಾಂ ಹೇಳುವ ಸಮಯ. ಕಾರ್ಗಿಲ್ ಯುದ್ಧದ ಸಮಯದಲ್ಲಿ ನಡೆದ ಕೆಲ ಸಂಗತಿಗಳ ಬಗ್ಗೆ ಇವತ್ತು ನಾವು ನಿಮಗೆ ತಿಳಿಸುವ ಸಣ್ಣ ಪ್ರಯತ್ನ ಮಾಡಿದ್ದೇವೆ.

ಎತ್ತರದ ಬೆಟ್ಟವೇರಿ ದೇಶಕ್ಕಾಗಿ ಹೋರಾಟ

1999ರ ಮೇ ಮತ್ತು ಜುಲೈನಲ್ಲಿ, ಭಾರತ ಮತ್ತು ಪಾಕಿಸ್ತಾನ ನಡುವೆ ನಡೆದ ಕಾರ್ಗಿಲ್ ಯುದ್ಧದಲ್ಲಿ ಭಾರತೀಯ ಯೋಧರು, 5000 ಮೀಟರ್‌ಗಳಷ್ಟು ಎತ್ತರದಲ್ಲಿರುವ ಟೈಗರ್‌ ಹಿಲ್‌ನಲ್ಲಿ ಪಾಕಿಸ್ತಾನಿ ಸೈನಿಕರೊಂದಿಗೆ ಹೋರಾಟಕ್ಕಿಳಿದಿದ್ದರು. ಅಷ್ಟು ಎತ್ತರದಲ್ಲಿ ಮತ್ತು ಅಂತಹ ವಾತಾವರಣದಲ್ಲಿ ಯುದ್ಧ ಮಾಡುವುದು ನಿಜಕ್ಕೂ ಕಷ್ಟಕರ. ಅಲ್ಲದೇ ಭಾರತೀಯ ಸೈನಿಕರು ಯುದ್ಧಕ್ಕೆ ಸನ್ನದ್ಧರಾಗುವ ಹೊತ್ತಿಗಾಗಲೇ ಪಾಕಿಸ್ತಾನ ಸೈನ್ಯವು ಭಾರತದ ಗಡಿ ಭಾಗವನ್ನು ಆಕ್ರಮಿಸಿತ್ತು.ಆದರೂ ಕೂಡ ಧೃತಿಗೆಡದ ನಮ್ಮ ಸೈನಿಕರು ಪಾಕ್ ಸೈನಿಕರನ್ನ ಬಗ್ಗುಬಡಿದಿದ್ದರು.

ಪಾಕ್ ಸೈನ್ಯವನ್ನು ಬಗ್ಗುಬಡಿದ ಇಂಡಿಯನ್ ಆರ್ಮಿ

ಕಾರ್ಗಿಲ್ ಯುದ್ಧದಲ್ಲಿ ಭಾರತೀಯ ಸೇನೆ ಪಾಕಿಸ್ತಾನ ಸೇನೆಯನ್ನು ಸೋಲಿಸಿ, ಕಾರ್ಗಿಲ್ ತನ್ನದಾಗಿಸಿಕೊಂಡಿತು. ಅಮೆರಿಕದ ವರದಿಯ ಪ್ರಕಾರ ಪಾಕಿಸ್ತಾನದ ಸುಮಾರು ಒಂದು ಸಾವಿರ ಸೈನಿಕರು ಕಾರ್ಗಿಲ್ ಯುದ್ಧದಲ್ಲಿ ಸಾವನ್ನಪ್ಪಿದ್ದರು. ಆದರೆ ಭಾರತೀಯ ಸೇನೆಯ ಸೈನಿಕರ ಸಂಖ್ಯೆ 600ಕ್ಕಿಂತ ಕಡಿಮೆ ಇತ್ತು. ಆದರೂ ಕೂಡ ದೇಶಕ್ಕೊಸ್ಕರ ಭಾರತೀಯ ಸೈನಿಕರು ತಮ್ಮ ಜೀವವನ್ನು ಪಣಕ್ಕಿಟ್ಟು, ಕಾರ್ಗಿಲ್ ಪಡೆಯುವಲ್ಲಿ ಸಫಲರಾಗಿದ್ದರು.

ಸಂಚು ರೂಪಿಸಿ, ವಿಫಲವಾದ ಪಾಕ್

ಇನ್ನು ನಮ್ಮ ವಿರುದ್ಧವಾಗಿ ಚೀನಾ ದೇಶವನ್ನು ಕಣಕ್ಕಿಳಿಸಲು ಪಾಕಿಸ್ತಾನ ಸಾಕಷ್ಟು ಸಂಚು ರೂಪಿಸಿತ್ತು. ಪಾಕ್ ಸೇನಾ ಮುಖ್ಯಸ್ಥರಾಗಿದ್ದ ನವಾಜ್ ಶರೀಫ್, ಚೀನಾ ಅಧ್ಯಕ್ಷ ಕ್ಲಿಂಟನ್‌ನನ್ನು ಭೇಟಿಯಾಗಿ ಸಹಾಯಕ್ಕೆ ಕೈ ಚಾಚಿದ.ಆದರೆ ಚೀನಾ ಸಹ ಪಾಕಿಸ್ತಾನಕ್ಕೆ ಬೆಂಬಲ ನೀಡಿಲ್ಲ.ಕಾಶ್ಮೀರವನ್ನು ತಮ್ಮದಾಗಿಸಿಕೊಳ್ಳಲು ಪಾಕಿಸ್ತಾನ ಸಾಕಷ್ಟು ಕಸರತ್ತು ಮಾಡಿತ್ತಾದರೂ, ಎಲ್ಲ ಕೆಲಸದಲ್ಲಿ ವಿಫಲವಾಯಿತು.

ಬಲವಾದ ಪರಮಾಣು ಪರೀಕ್ಷೆ ನಡೆಸಿದ್ದ ಭಾರತ

ಕಾರ್ಗಿಲ್ ಯುದ್ಧದಲ್ಲಿ ಭಾರತ ತನ್ನ ಎರಡನೇ ಪರಮಾಣು ಪರೀಕ್ಷೆ ನಡೆಸಿತ್ತು. ಆದ್ರೆ ಪಾಕಿಸ್ತಾನ ಮೊದಲ ಬಾರಿ ಪರಮಾಣು ಪರೀಕ್ಷೆ ನಡೆಸಿತ್ತು. ಭಾರತದ ಎರಡನೇ ಪರಮಾಣು ಪರೀಕ್ಷೆ ತೀವ್ರ ಬಲವಾದ ಕಾರಣ ಕಾರ್ಗಿಲ್ ಯುದ್ಧ ಗೆಲ್ಲುವಲ್ಲಿ ಭಾರತಕ್ಕೆ ಸಹಾಯವಾಯಿತು.

ಕಾರ್ಗಿಲ್ ಯುದ್ಧವನ್ನು ಬಿತ್ತರಿಸಿದ್ದ ಮಾಧ್ಯಮ

ಕಾರ್ಗಿಲ್ ಯುದ್ಧದ ಬಗ್ಗೆ ದೇಶದ ಜನರಿಗೆ ಮಾಹಿತಿ ಒದಗಿಸುವುದರಲ್ಲಿ ಮಾಧ್ಯಮಗಳು ಪಾತ್ರವಹಿಸಿದೆ. ಈ ವೇಳೆ ಎಲೆಕ್ಟ್ರಾನಿಕ್ ಮೀಡಿಯಾ(ಟಿವಿ ಮಾಧ್ಯಮ)ಗಳಲ್ಲಿ ಯುದ್ಧದಲ್ಲಿ ಏನು ನಡೆಯುತ್ತಿದೆ. ಯುದ್ಧ ನಡೆಯುವಾಗ, ಸೈನಿಕರ ತಯಾರಿ ಹೇಗಿರುತ್ತದೆ ಎಂಬುದರ ಬಗ್ಗೆ ಮಾಧ್ಯಮಗಳಲ್ಲಿ ಬಿತ್ತರವಾಗಿತ್ತು.

ಗಡಿಯಲ್ಲಿ ಇಂದೂ ಕೂಡ ನಮ್ಮ ಭಾರತೀಯ ಸೈನಿಕರು ದೇಶದ ಜನರ ರಕ್ಷಣೆಗೆ ತಮ್ಮ ಜೀವವನ್ನು ಪಣಕ್ಕಿಟ್ಟು ಹೋರಾಡುತ್ತಿದ್ದಾರೆ. ಪ್ರತಿದಿನ ಗುಂಡಿನ ದಾಳಿ ನಡೆಯುತ್ತಿದ್ದು, ದೇಶಕ್ಕಾಗಿ ನಮ್ಮ ಯೋಧರು ಹುತಾತ್ಮರಾಗುತ್ತಿದ್ದಾರೆ. ಇಂತಹ ಯೋಧರಿಗೆ ನಮ್ಮದೊಂದು ಸಲಾಮ್.

Next Story

RELATED STORIES