Top

ಕೆಜಿಎಫ್‌ ರಿಲೀಸ್‌ಗೂ ಮುನ್ನ ವೈಜಿಎಫ್‌ ಹವಾ ಜೋರು

ಕೆಜಿಎಫ್‌ ರಿಲೀಸ್‌ಗೂ ಮುನ್ನ ವೈಜಿಎಫ್‌ ಹವಾ ಜೋರು
X

ಯಶ್ ಅಭಿನಯದ ಕೆಜಿಎಫ್ ಸಿನಿಮಾ ಬರುವುದಕ್ಕೂ ಮುಂಚೆ ವೈಜಿಎಫ್‌ ಬರಲಿದೆ.ಏನಿದು ವೈಜಿಎಫ್‌ ಅಂದ್ರಾ, ಯಶ್ ಈಸ್ ಗೋಯಿಂಗ್ ಟು ಬಿ ಎ ಫಾದರ್. ಸ್ಯಾಂಡಲ್‌ವುಡ್ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ದಂಪತಿ ಗುಡ್ ನ್ಯೂಸ್ ನೀಡಿದ್ದಾರೆ. ಯಶ್ ತಂದೆಯಾಗುತ್ತಿದ್ದು, ರಾಧಿಕಾ ತಾಯಿಯಾಗುತ್ತಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ತಮ್ಮ ಖುಷಿ ಹಂಚಿಕೊಂಡಿರುವ ರಾಧಿಕಾ ಪಂಡಿತ್, ತಾವು ಯಶ್ ಜೊತೆ ಇರುವ ಫೋಟೋ ಹಾಕಿ, ನಾವು ಇನ್ಮುಂದೆ ಮೂವರು ಎಂದು ಟ್ಯಾಗ್‌ ಲೈನ್ ಹಾಕಿದ್ದಾರೆ.

ಇನ್ನು ಡಿಸೆಂಬರ್ ಯಶ್ ಪಾಲಿಗೆ ಲಕ್ಕಿ ತಿಂಗಳಾಗಿದ್ದು, ಡಿಸೆಂಬರ್ ತಿಂಗಳಲ್ಲೇ ಮದುವೆಯಾಗಿ, ಡಿಸೆಂಬರ್ ತಿಂಗಳಲ್ಲೇ ಯಶ್ ಅಪ್ಪ ಆಗ್ತಿದ್ದಾರೆ. ಅಲ್ಲದೇ ಯಶ್‌ರ ರಾಮಚಾರಿ ಸಿನಿಮಾ ಕೂಡ ಡಿಸೆಂಬರ್‌ನಲ್ಲೇ ರಿಲೀಸ್ ಆಗಿತ್ತು.ಬಾಕ್ಸ್ ಆಫೀಸ್‌ನಲ್ಲಿ 50ಕ್ಕೂ ಅಧಿಕ ಕೋಟಿ ಕೊಳ್ಳೆ ಹೊಡೆದಿತ್ತು. ಕೆಜಿಎಫ್‌ ಸಿನಿಮಾ ಕೂಡ ಡಿಸೆಂಬರ್‌ನಲ್ಲೇ ತೆರೆಗೆ ಬರಲಿದೆ ಎನ್ನಲಾಗಿದೆ.

ಒಟ್ಟಿನಲ್ಲಿ ಮಾಸ್ಟರ್‌ಪೀಸ್ ಲೈಫ್‌ನಲ್ಲಿ ಛೋಟಾ ಮಾಸ್ಟರ್‌ಪೀಸ್‌ ಬರುತ್ತಿರುವುದು, ರಾಕಿಂಗ್ ದಂಪತಿ ಫ್ಯಾನ್ಸ್‌ಗೆ ಗುಡ್‌ನ್ಯೂಸ್ ನೀಡಿದ್ದಾರೆ.

https://youtu.be/ueMafdRvfko

Next Story

RELATED STORIES