Top

ಚಂದ್ರಗ್ರಹಣದಂದು ಕಾಣುವ ಚಂದ್ರನ ವಿಶೇಷತೆ ಏನು ಗೊತ್ತಾ?

ಚಂದ್ರಗ್ರಹಣದಂದು ಕಾಣುವ ಚಂದ್ರನ ವಿಶೇಷತೆ ಏನು ಗೊತ್ತಾ?
X

ಈ ಶುಕ್ರವಾರದಂದು ನಡೆಯಲಿರುವ ಚಂದ್ರಗ್ರಹಣದ ಬಗ್ಗೆ ಹಲವು ಕುತೂಹಲಕಾರಿ ಸಂಗತಿಗಳು ಹೊರಬೀಳುತ್ತಿದೆ. ಈ ಬಾರಿ ಚಂದ್ರಗ್ರಹಣ ರಾಜ್ಯ ರಾಜಕೀಯದ ಮೇಲೆ ಅಂದರೆ, ಮೈತ್ರಿ ಸರ್ಕಾರದ ಮೇಲೆ ದೊಡ್ಡ ಪರಿಣಾಮ ಬೀಳಲಿದೆ ಎಂದು ಹೇಳಲಾಗುತ್ತಿದೆ. ಅಲ್ಲದೇ ಸರ್ಕಾರ ಬಿದ್ದರೂ ಬೀಳಬಹುದು ಎನ್ನಲಾಗುತ್ತಿದೆ. ಈ ಕಾರಣಕ್ಕಾಗಿ ರಾಜಕಾರಣಿಗಳು ಪೂಜೆ ಪುನಸ್ಕಾರಗಳಲ್ಲಿ ತೊಡಗಿದ್ದಾರೆ.ಇನ್ನೊಂದೆಡೆ ಈಬಾರಿಯ ಗ್ರಹಣದಲ್ಲಿ ಕಾಣಸಿಗುವ ರಕ್ತಚಂದ್ರ ವಿಶೇಷವಾಗಿರುತ್ತಾನೆಂದು ವಿಜ್ಞಾನಿಗಳು ಮಾಹಿತಿ ಹೊರಹಾಕಿದ್ದಾರೆ.

ಈ ಬಾರಿಯ ಗ್ರಹಣದಲ್ಲಿ ಕಾಣಸಿಗುವ ಚಂದ್ರನ ನೆರಳು ವಿಶಾಲ ಮತ್ತು ಉದ್ದವಾಗಿದೆಯಂತೆ. ಅಲ್ಲದೇ ಈ ಗ್ರಹಣದಲ್ಲಿ ಭೂಮಿಯೂ ಸೂರ್ಯನಿಂದ ತುಂಬಹೊತ್ತು ದೂರವಾಗಿರಲಿದೆಯಂತೆ.

ಇನ್ನು ಈ ರಕ್ತ ಚಂದ್ರಗ್ರಹಣ ಯುರೊಪ್, ಏಷ್ಯಾ, ನ್ಯೂಜಿಲ್ಯಾಂಡ್, ಆಸ್ಟ್ರೇಲಿಯಾ ಮತ್ತು ಆಫ್ರಿಕಾ ಭಾಗಗಳಲ್ಲಿ ಮತ್ತು ದಕ್ಷಿಣ ಅಮೆರಿಕಾದ ಭಾಗಗಳಲ್ಲಿ ಗೋಚರಿಸುತ್ತದೆ.

Next Story

RELATED STORIES