Top

ಚಕ್ರವ್ಯೂಹ ಭೇದಿಸಿ ಕಲ್ಯಾಣಕ್ಕೆ ರೆಡಿಯಾದ ನಿಖಿಲ್

ಚಕ್ರವ್ಯೂಹ ಭೇದಿಸಿ ಕಲ್ಯಾಣಕ್ಕೆ ರೆಡಿಯಾದ ನಿಖಿಲ್
X

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಎಂಟ್ರಟೈನ್ಮೆಂಟ್ ಬ್ಯೂರೋ ಹೆಡ್, ಟಿವಿ5

ಚಕ್ರವ್ಯೂಹ ಭೇದಿಸೋದ್ರಲ್ಲಿ ಬ್ಯುಸಿ ಆಗಿದ್ದ ಜಾಗ್ವಾರ್ ಸ್ಟಾರ್ ನಿಖಿಲ್, ಇದೀಗ ಕಲ್ಯಾಣಕ್ಕೆ ಸಜ್ಜಾಗ್ತಿದ್ದಾರೆ. ಅರೇ ಈಗೀಗ ಇಂಡಸ್ಟ್ರಿಯಲ್ಲಿ ಯುವರಾಜನಾಗಿ ಶೈನ್ ಆಗ್ತಿರೋ ನಿಖಿಲ್​ಗೇಕೆ ಇಷ್ಟು ಬೇಗ ಮದ್ವೆ ಅಂತ ಹುಬ್ಬೇರಿಸ್ಬೇಡಿ. ನಾವು ಹೇಳ್ತಿರೋದು ರೀಲ್ ಮದ್ವೆ ಅಷ್ಟೇ. ಯೆಸ್.. ಈಗಾಗ್ಲೇ ನಿಮಗೆಲ್ಲಾ ಗೊತ್ತಾಗಿರಬೇಕು, ಅದು ಸೀತಾರಾಮ ಕಲ್ಯಾಣ.

ಭಜರಂಗಿ, ವಜ್ರಕಾಯ ಸಿನಿಮಾಗಳ ಖ್ಯಾತಿಯ ಎ ಹರ್ಷ ನಿರ್ದೇಶನ, ಸ್ವಾಮಿ ಸಿನಿಮಾಟೋಗ್ರಫಿ, ಅನೂಪ್ ರೂಬೆನ್ಸ್ ಸಂಗೀತವಿರೋ ಸೀತಾರಾಮ ಕಲ್ಯಾಣದ ಬಹುತೇಕ ಟಾಕಿ ಪೋರ್ಷನ್ ಮುಗಿದಿದೆ. ಇನ್ನು ಡಿಂಪಲ್ ಕ್ವೀನ್ ರಚಿತಾರಾಮ್ ಜಾಗ್ವಾರ್ ಸ್ಟಾರ್ ನಿಖಿಲ್ ಕುಮಾರ್​ಗೆ ಜೋಡಿಯಾಗಿ ತೆರೆಹಂಚಿಕೊಂಡಿರೋದು ಚಿತ್ರದ ಮತ್ತೊಂದು ಹೈಲೆಟ್.

ಮೇಕಿಂಗ್​ನಿಂದ ಧೂಳೆಬ್ಬಿಸಿದ ಸೀತಾರಾಮ ಕಲ್ಯಾಣ

ಕ್ಲಾಸಿಕ್ ಮತ್ತು ಮಾಡ್ರನ್ ಲುಕ್ಸ್​ನಿಂದ ಸಿನಿಮಾದ ಒಂದೊಂದು ಮೇಕಿಂಗ್ ಸ್ಟಿಲ್ ಕೂಡ ಸಖತ್ ಕ್ಯೂರಿಯಾಸಿಟಿ ಹುಟ್ಟಿಸ್ತಿವೆ. ಅದ್ರಲ್ಲೂ ಸಿನಿಮಾದಿಂದ ಸಿನಿಮಾಗೆ ನಿಖಿಲ್ ಚೇಂಜ್ ಓವರ್ ಮತ್ತು ಮೇಕೋವರ್ ಇಂಟರೆಸ್ಟಿಂಗ್ ಅನಿಸುತ್ತಿದೆ.

ಅದ್ರಲ್ಲೂ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳ ಲಕ್ಕಿ ಚಾರ್ಮ್ ರಚಿತಾ ರಾಮ್, ನಿಖಿಲ್​ಗೆ ಜೊತೆಯಾಗಿರೋದು ಈ ಚಿತ್ರದ ಮತ್ತೊಂದು ಹೈಲೆಟ್. ಫ್ರೆಂಚ್ ಕಾಲೋನಿಯಲ್ಲಿ ಸೀತಾರಾಮ ಪ್ಯಾರ್ ಕಹಾನಿಯ ಮೇಕಿಂಗ್ ಝಲಕ್ ನೋಡ್ತಿದ್ರೆ ಗೊತ್ತಾಗುತ್ತೆ ಅದ್ರ ಮೇಕಿಂಗ್ ಶೈಲಿ ಎಷ್ಟು ಕಲರ್​ಫುಲ್ ಆಗಿದೆ ಅನ್ನೋದು.

ರಾಮನಗರದಲ್ಲಿ ಸೀತಾರಾಮ ಕಲ್ಯಾಣ ಟೀಸರ್ ಲಾಂಚ್

ಜಾಗ್ವಾರ್ ನಂತ್ರ ಚನ್ನಾಂಬಿಕ ಫಿಲಂಸ್ ಬ್ಯಾನರ್​ನಡಿ ಅನಿತಾ ಕುಮಾರಸ್ವಾಮಿ ಮತ್ತು ಹೆಚ್​ ಡಿ ಕುಮಾರಸ್ವಾಮಿ ನಿರ್ಮಿಸ್ತಿರೋ ಫ್ಯಾಮಿಲಿ ಎಂಟ್ರಟೈನರ್ ಇದು. ಕುಮಾರಸ್ವಾಮಿ ಕನಸಿನ ಸೂರ್ಯವಂಶ ಸಿನಿಮಾದ ಫೀಲ್ ಕೊಡೋ ಔಟ್ ಅಂಡ್ ಕಮರ್ಷಿಯಲ್ ಎಂಟ್ರಟೈನರ್.

ಇದೀಗ ಈ ಸಿನಿಮಾದ ಟೀಸರ್ ಲಾಂಚ್ ಮಾಡೋಕೆ ಚಿತ್ರತಂಡ ಪ್ಲಾನ್ ಮಾಡ್ತಿದೆ. ವಿಶೇಷ ಅಂದ್ರೆ ಟೀಸರ್ ಲಾಂಚ್​ ರೇಷ್ಮೆ ನಾಡು ರಾಮನಗರದಲ್ಲಿ ನಡೀತಿದೆ. ಬೃಹತ್ ವೇದಿಕೆಯಲ್ಲಿ ಕಲರ್​ಫುಲ್ ಕಾರ್ಯಕ್ರಮದೊಂದಿಗೆ ಜಾಗ್ವಾರ್ ಫಸ್ಟ್ ಲುಕ್ ಲಾಂಚ್​ನ ಮೀರಿಸೋ ರೇಂಜ್​ಗೆ ಇದರ ಟೀಸರ್ ಇದೇ ಜುಲೈ 31ರಂದು ಲಾಂಚ್‌ ಆಗಲಿದೆಯಂತೆ.

ಚಾಮುಂಡೇಶ್ವರಿ ಹಬ್ಬದಲ್ಲಿ ಸೀತಾರಾಮ ಕಲ್ಯಾಣ..!

ಹೇಳಿ ಕೇಳಿ ಸಿಎಂ ಕುಮಾರಸ್ವಾಮಿ ಮೂಲತಹ ನಿರ್ಮಾಪಕರು. ಅಪಾರ ಸಿನಿಮೋತ್ಸಾಹಿ ಆಗಿರೋ ಕುಮಾರಸ್ವಾಮಿ, ಮಗನ ಸಿನಿಮಾ ಅಂದ್ರೆ ಅಲ್ಲಿ ವಿಶೇಷ ಒತ್ತು ಕೊಡ್ತಾರೆ. ರಾಜಕೀಯ ಜಂಜಾಟದ ಮಧ್ಯೆಯೂ ಸಹ ಶೂಟಿಂಗ್ ಸೆಟ್​ಗೆ ವಿಸಿಟ್ ಮಾಡಿದ್ದು ಇದಕ್ಕೆ ಬೆಸ್ಟ್ ಎಕ್ಸಾಂಪಲ್.

ಹಾಗಾಗಿ ಸೀತಾರಾಮ ಕಲ್ಯಾಣ ಇನ್ನೂ ಮೇಕಿಂಗ್ ಹಂತದಲ್ಲೇ ದೊಡ್ಡ ಹೈಪ್ ಕ್ರಿಯೇಟ್ ಮಾಡ್ತಿದ್ದು, ಟೀಸರ್ ಲಾಂಚ್ ಕಾರ್ಯಕ್ರಮವನ್ನ ರಾಮನಗರದಲ್ಲಿ ಅದ್ಧೂರಿಯಾಗಿ ಮಾಡಲಾಗ್ತಿದೆ. ಅದ್ರಲ್ಲೂ ಚಾಮುಂಡೇಶ್ವರಿ ಹಬ್ಬದಲ್ಲಿ, ರಾಮನಗರದ ಜೂನಿಯರ್ ಕಾಲೇಜ್ ಮೈದಾನದಲ್ಲಿ ಗಣ್ಯಾತಿಗಣ್ಯರ ಮಧ್ಯೆ ಮಾಡೋ ಯೋಜನೆಯಲ್ಲಿದೆ ಚಿತ್ರತಂಡ.

ಚಿತ್ರದ ಕ್ರಿಯೇಟೀವ್ ಹೆಡ್ ಸುನೀಲ್, ಈ ಕಾರ್ಯಕ್ರಮವನ್ನ ತುಂಬಾ ಕಲರ್​ಫುಲ್ ಆಗಿ ಮಾಡೋ ಉದ್ದೇಶದಿಂದ ಅರ್ಜುನ್ ಜನ್ಯ ಲೈವ್ ಮ್ಯೂಸಿಕ್ ಬ್ಯಾಂಡ್ ಮೂಲಕ ಆರ್ಗನೈಜ್ ಮಾಡ್ತಿದ್ದಾರೆ. ಇನ್ನು ನಟೀಮಣಿಯರ ಡ್ಯಾನ್ಸ್ ಝಲಕ್ ಸೇರಿದಂತೆ, ಚಿತ್ರರಂಗದ ಬಹುತೇಕ ಸ್ಟಾರ್ಸ್​ ಈ ರಂಗೀನ್ ಕಾರ್ಯಕ್ರಮಕ್ಕೆ ಸಾಕ್ಷಿ ಆಗಲಿದ್ದಾರೆ.

Next Story

RELATED STORIES