ಟೀಂ ಇಂಡಿಯಾ, ಪಾಕಿಸ್ತಾನ ಏಷ್ಯಾಕಪ್ ಫೈಟ್

ದುಬೈ: ಹಾಲಿ ಚಾಂಪಿಯನ್ ಟೀಂ ಇಂಡಿಯಾ ಮುಂಬರುವ ಏಷ್ಯಾಕಪ್ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡ A ವನ್ನ ಸೆ.19ರಂದು ಎದುರಿಸಲಿದೆ. ಐಸಿಸಿ ಮುಂಬರುವ ಏಷ್ಯಾಕಪ್ಗೆ ವೇಳಾ ಪಟ್ಟಿಯನ್ನ ಪ್ರಕಟಿಸಿದೆ.
ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಏಷ್ಯಾಕಪ್ ಸರಣಿಯಲ್ಲಿ ಎ ಗುಂಪಿನಲ್ಲಿ ಸ್ಥಾನ ಪಡೆದಿದ್ದು ದುಬೈನಲ್ಲಿ ಸೆ.18 ರಂದು ಪಾಕಿಸ್ತಾನ ವಿರುದ್ಧ ಅರ್ಹತಾ ಪಂದ್ಯ ಆಡಲಿದೆ. ಬಿ ಗುಂಪಿನಲ್ಲಿ ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ತಂಡಗಳು ಸ್ಥಾನ ಪಡೆದಿವೆ. ಅಹ್ತಾ ಸುತ್ತಿನಲ್ಲಿ ಟಾಪ್ ಎರಡು ತಂಡಗಳು ಸೂಪರ್ 4ಗೆ ಅರ್ಹತೆ ಪಡೆಯಲಿವೆ. ಸೆಪ್ಟೆಂಬರ್ 28ರಂದು ದುಬೈನಲ್ಲಿ ಫೈನಲ್ ಪಂದ್ಯ ನಡೆಯಲಿದೆ.
ಸೆಪ್ಟೆಂಬರ್ 15ರಂದು ದುಬೈನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಶ್ರೀಲಂಕಾ ಮತ್ತು ದುಬೈನಲ್ಲಿ ನಡೆಯಲಿದೆ. ಏಷ್ಯಾಕಪ್ನಲ್ಲಿ ಟೀಂ ಇಂಡಿಯಾ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ತಂಡಗಳು ಟೂರ್ನಿಯಲ್ಲಿ ಪಾಲ್ಗೊಳೋದು ಖಚಿತವಾಗಿದೆ. ಆತಿಥೇಯ ಯುಎಇ, ಸಿಂಗಾಪುರ, ಒಮನ್, ನೇಪಾಳ, ಮಲೇಷ್ಯಾ ಮತ್ತು ಹಾಂಗ್ ಕಾಂಗ್ ತಂಡಗಳು ಬಾಗವಹಿಸುವ ಸಾಧ್ಯತೆ ಇದೆ.
ಏಷ್ಯಾಕಪ್ ವೇಳಾ ಪಟ್ಟಿ
ಸೆ.15 ಬಾಂಗ್ಲಾದೇಶ - ಶ್ರೀಲಂಕಾ (ದುಬೈ)
ಸೆ.16 ಪಾಕಿಸ್ತಾನ- ಅರ್ಹತಾ ತಂಡ (ದುಬೈ)
ಸೆ.17 ಶ್ರೀಲಂಕಾ- ಅಫ್ಘಾನಿಸ್ತಾನ (ಅಬುಧಾಬಿ)
ಸೆ.18 ಭಾರತ- ಅರ್ಹತಾ ತಂಡ (ದುಬೈ)
ಸೆ.19 ಭಾರತ- ಪಾಕಿಸ್ತಾನ (ದುಬೈ)
ಸೆ.20 ಬಾಂಗ್ಲಾದೇಶ – ಅಫ್ಘಾನಿಸ್ತಾನ (ಅಬುಧಾಬಿ)
ಸೂಪರ್ ಫೂರ್
ಸೆ.21 – ಎ ಗುಂಪಿನ ವಿಜೇತ ತಂಡ ಮತ್ತು ಬಿ ಗುಂಪಿನ ರನ್ನರ್ ಅಪ್ ತಂಡ (ದುಬೈ)
ಸೆ.21- ಬಿ ಗುಂಪಿನ ವಿಜೇತ ತಂಡ ಮತ್ತು ಎ ಗುಂಪಿನ ರನ್ನರ್ ಅಪ್ ತಂಡ (ಅಬುಧಾಬಿ)
ಸೆ.23 – ಎ ಗುಂಪಿನ ವಿಜೇತ ತಂಡ ಮತ್ತು ಎ ಗುಂಪಿನ ರನ್ನರ್ ಅಪ್ ತಂಡ(ದುಬೈ)
ಸೆ.23- ಬಿ ಗುಂಪಿನ ವಿಜೇತ ತಂಡ ಮತ್ತು ಬಿ ಗುಂಪಿನ ರನ್ನರ್ ಅಪ್ ತಂಡ(ಅಬುಧಾಬಿ)
ಸೆ.25 ಎ ಗುಂಪಿನ ವಿಜೇತ ತಂಡ ಮತ್ತು ಬಿ ಗುಂಪಿನ ವಿಜೇತ ತಂಡ(ದುಬೈ)
ಸೆ.26 ಎ ಗುಂಪಿನ ರನ್ನರ್ ಅಪ್ ತಂಡ ಮತ್ತು ಬಿ ಗುಂಪಿನ ರನ್ನರ್ ಅಪ್ (ಅಬುಧಾಬಿ)
ಸೆ.28 ಏಷ್ಯಾಕಪ್ ಫೈನಲ್ (ದುಬೈ)