Top

ಸ್ವಾಮೀಜಿ ಅಸಹಜ ಸಾವು ಪ್ರಕರಣಕ್ಕೆ ಟ್ವಿಸ್ಟ್ : ಡಿವಿಆರ್ ಪತ್ತೆ..!!

ಸ್ವಾಮೀಜಿ ಅಸಹಜ ಸಾವು ಪ್ರಕರಣಕ್ಕೆ ಟ್ವಿಸ್ಟ್ : ಡಿವಿಆರ್ ಪತ್ತೆ..!!
X

ಉಡುಪಿ : ಶಿರೂರು ಶ್ರೀ ಗಳು ಅಸಹಜ ಸಾವು ಸಂಭವಿಸಿ ಏಳು ದಿನ ಕಳೆದಿದೆ. ಆದ್ರೆ ಸಾವಿನ ರಹಸ್ಯ ಮಾತ್ರ ಇನ್ನೂ ನಿಗೂಡವಾಗಿ ಉಳಿದಿದೆ. ದಿನಕ್ಕೊಂದು ಕ್ಷಣಕ್ಕೊಂದು ಅಚ್ಚರಿಗಳು ಪ್ರಕರಣ ಸುತ್ತ ಸುತ್ತಿಕೊಂಡಿದೆ. ಇದೀಗ ಪೊಲೀಸ್ ತನಿಖೆ ಮತ್ತಷ್ಟು ಚುರುಕುಗೊಂಡಿದೆ. ಇದಕ್ಕೆ ಪುಷ್ಠಿ ನೀಡುವಂತೆ, ಮಠದಲ್ಲಿನ ಸಿಸಿಟಿವಿ ಡಿವಿಆರ್ ಪೊಲೀಸರಿಗೆ ಸಿಕ್ಕಿದೆ.

ಹೌದು ಅಷ್ಟ ಮಠದಲ್ಲಿ ಒಂದಾದ ಶಿರೂರು ಮಠದ ಶ್ರೀ ಗಳು ಅಸಹಜ ಸಾವು ಸಂಭವಿಸಿ ವಾರ ಕಳೆದಿದೆ.ಪ್ರಕರಣ ಗಳಿಗೆಗೊಂದು ತಿರುವು ಪಡೆಯುತ್ತಿದೆ. ಮೂಲ ಮಠದಿಂದ ಕಾಣೆಯಾದ ಡಿವಿಆರ್ ಉಡುಪಿಯ ಸ್ವರ್ಣ ನದಿಯಲ್ಲಿ ಪತ್ತೆಯಾಗಿದೆ. ನಿನ್ನೆ ಹುಡುಕಾಟ ನಡೆಸಿದ ಪೊಲೀಸರ ಕೈಗೆ ಸೇರಿದೆ. ಡಿವಿಆರ್ ವಿಚಾರವಾಗಿ ಹಲವು ದಿನಗಳಿಂದ ಎದ್ದಿದ್ದ ಊಹಾಪೋಹಕ್ಕೆ ಸದ್ಯದ ತೆರೆಬಿದ್ದಿದೆ. ಆದ್ರೆ ಸಿಕ್ಕಿರುವ ಡಿವಿಆರ್ ಶೀರೂರು ಮಠಕ್ಕೆ ಸೇರಿದ್ದೇ ಎಂಬ ಕುತೂಹಲವಾಗೇ ಉಳಿದಿದೆ. ಹಾಗಾದರೇ ಸ್ವರ್ಣಾ ನದಿಗೆ ಡಿವಿಆರ್ ಎಸೆದಿದ್ದು ಯಾರು ಅನ್ನುವುದು ಇನ್ನೂ ತನಿಖೆಯಿಂದ ತಿಳಿಯ ಬೇಕಾಗಿದೆ.

https://www.youtube.com/watch?v=0Wb2A1HBRrc&list=PLmylWU4EY3N9w4lXMMtgANRMmH8JCLze3&index=37

ಇದೆಲ್ಲದ್ರ ಮಧ್ಯೆ ಶೀರೂರು ಶ್ರೀ ಧರಿಸುತ್ತಿದ್ದ ಹಲುವು ಆಭರಣಗಳು ಕಾಣೆ ಆಗಿರುವ ಬಗ್ಗೆಯೂ ವರದಿಯಾಗಿದೆ. ಸುಮಾರು 15 ಲಕ್ಷ ಮೌಲ್ಯದ ಚಿನ್ನಾಭರಣ ಹೊಂದಿದ್ದ ಶೀರೂರು ಶ್ರೀ ಪ್ರತಿದಿನ 3 ರಿಂದ 4 ಲಕ್ಷರೂ ಮೌಲ್ಯದ ಆಭರಣ ಧರಿಸುತ್ತಿದ್ದರು. ಶೀರೂರು ಶ್ರೀ ಅನಾರೋಗ್ಯದಿಂದ ದಿಢೀರ್ ಅಸ್ಪತ್ರೆ ಸೇರಿದ ಕೆಲವೇ ಕ್ಷಣಗಳಲ್ಲಿ, ಅಭರಣಗಳು ಕಳ್ಳತನವಾಗಿರುವ ಶಂಕೆ ವ್ಯಕ್ತವಾಗುತ್ತಿದೆ.

ಅಲ್ಲದೇ ಶಿರೂರು ಶ್ರೀಗಳ ಆಭರಣಗಳು ಸಹ, ರಮ್ಯ ಶೆಟ್ಟಿ ತೆಗೆಸಿಕೊಂಡಿರುವ ಕೆಲ ಪೋಟೋಗಳಲ್ಲಿ ಕಂಡುಬಂದಿದೆ. ಹೀಗಾಗಿ ಮೊದಲ ವಿಚಾರಣೆಯಿಂದ ಬಚಾವ್ ಆಗಿದ್ದ ರಮ್ಯಾ ಶೆಟ್ಟಿ ಅವರನ್ನು, ಪೊಲೀಸರು ಎರಡನೇಯ ಬಾರಿಗೆ ವಿಚಾರಣೆಗೆ ಚಿಂತನೆ ನಡೆಸುತ್ತಿದ್ದರು. ಇದರ ಬೆನ್ನಲ್ಲೇ, ರಮ್ಯಾ ಶೆಟ್ಟಿ ಪರಾರಿಯಾಗಲು ಯತ್ನಿಸಿ, ಆಪ್ತ ಇಕ್ಬಾಲ್‌ ಸಮೇತ ಸಿಕ್ಕಿಬಿದ್ದು ಪೊಲೀಸರ ವಶದಲ್ಲಿದ್ದಾರೆ.

ಒಟ್ಟಾರೆ ಈ ಪ್ರಕರಣ ಎಲ್ಲಿಗೆ ಬಂದು ನಿಲ್ಲುತ್ತದೆ. ಶಿರೂರು ಶ್ರೀಗಳ ಸಾವಿನ ಹಿಂದಿನ ರಹಸ್ಯ ಏನು.? ಡಿವಿಆರ್‌ನಲ್ಲಿ ಶಿರೂರು ಶ್ರೀಗಳ ಸಾವಿನ ಸುಳಿವು ಸಿಗಬಹುದಾ ಎಂಬುದನ್ನು ಕಾದು ನೋಡಬೇಕಿದೆ.

ವರದಿ : ನಾಗರಾಜ್ ವರ್ಕಾಡಿ, ಟಿವಿ5 ಉಡುಪಿ

Next Story

RELATED STORIES