ಕೊಹ್ಲಿ ಪಡೆಗೆ ಕೌಂಟರ್ ಕೊಡಲು ಆಂಗ್ಲರ ಬಳಿ ಸ್ಪಿನ್ ವೆಪನ್

ಲಂಡನ್: ಆ.1ರಿಂದ ಆಂಗ್ಲರ ವಿರುದ್ಧ ಆರಂಭವಾಗಲಿರುವ ಟೆಸ್ಟ್ ಸರಣಿಯಲ್ಲಿ ಭಾರೀ ಎಚ್ಚರಿಕೆಯಿಂದ ಆಡಬೇಕಿದೆ. ಯಾಕಂದ್ರೆ ಆಂಗ್ಲರಿಗೆ ಹೊಸ ಸ್ಪಿನ್ನರ್ ಒಬ್ಬ ಸಿಕ್ಕಿದ್ದಾನೆ.
ಇತ್ತೀಚೆಗೆ ಇಂಡೋ- ಆಂಗ್ಲೊ ಟಿ20 ಮತ್ತು ಏಕದಿನ ಸರಣಿಯಲ್ಲಿ ಆಂಗ್ಲರನ್ನ ಕಾಡಿದ್ದು ಚೈನಾಮನ್ ಸ್ಪಿನ್ನರ್ ಕುಲ್ದೀಪ್ ಯಾದವ್. ಆದರೆ ಎರಡನೇ ಮತ್ತು ಮೂರನೇ ಏಕದಿನ ಪಂದ್ಯಗಳಲ್ಲಿ ನಾಯಕ ಇಯಾನ್ ಮಾರ್ಗನ್ ಕುಲ್ದೀಪ್ನ್ನ ಚೆನ್ನಾಗಿ ಬ್ಯಾಟಿಂಗ್ ಮಾಡಿದ್ರು. ಅದರಲ್ಲೂ ಜೋ ರೂಟ್ ಮೂರನೇ ಏಕದಿನ ಪಂದ್ಯದಲ್ಲಿ ಕುಲ್ದೀಪ್ ಬೌಲಿಂಗ್ ದಾಳಿಯನ್ನ ಸಮರ್ಥವಾಗಿ ಎದುರಿಸಿ ತಂಡಕ್ಕೆ ಏಕದಿನ ಸರಣಿ ಗೆಲ್ಲಿಸಿಕೊಟ್ಟರು.
ಇಂಗ್ಲೆಂಡ್ ಕ್ರಿಕೆಟ್ ಟೆಸ್ಟ್ ತಂಡದ ನಾಯಕನಾಗಿರುವ ಜೋ ರೂಟ್ ಸದ್ಯ ಕೌಂಟಿ ಚಾಂಪಿಯನ್ಶಿಪ್ನಲ್ಲಿ ಆಡುತ್ತಿದ್ದಾರೆ. ಯಾರ್ಕ್ಶೈರ್ ಪರ ಆಡುತ್ತಿರುವ ಜೋ ರೂಟ್ ಲಾಂಕಶೈರ್ ವಿರುದ್ಧ ಬೊಂಬಾಟ್ ಬೌಲಿಂಗ್ ಮಾಡಿ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ನಿರ್ಣಾಯಕ ಪಾತ್ರವಹಿಸಿದ್ದಾರೆ.
ಲಾಂಕಶೈಯರ್ ವಿರುದ್ಧ ಎರಡನೇ ಇನ್ನಿಂಗ್ಸ್ನಲ್ಲಿ ಪಾರ್ಟ್ ಟೈಮ್ ಬೌಲರ್ ಜೋ ರೂಟ್, ಜೇಮ್ಸ್ ಆಂಡರ್ಸನ್, ಜೋಸ್ ಬಟ್ಲರ್ ಮತ್ತು ಮ್ಯಾಥೀವ್ ಪಾರಿಕ್ಸನ್ ಅವರನ್ನ ಔಟ್ ಮಾಡಿದ್ದಾರೆ. 7.4 ಓವರ್ಗಳಲ್ಲಿ ಜೋ ರೂಟ್ 4 ವಿಕೆಟ್ ಪಡೆದು 5 ವಿಕೆಟ್ ಪಡೆದು ಮಿಂಚಿದ್ದಾರೆ. ಇದರಲ್ಲಿ 5 ಮೇಡನ್ ಮಾಡಿದ್ದಾರೆ.