Top

ಕುಮಾರಸ್ವಾಮಿ ಸಿಎಂ ಸ್ಥಾನ ಕಳೆದುಕೊಳ್ಳುತ್ತಾರೆ- ಕೋಡಿಶ್ರೀ ಭವಿಷ್ಯ..!

ಕುಮಾರಸ್ವಾಮಿ ಸಿಎಂ ಸ್ಥಾನ ಕಳೆದುಕೊಳ್ಳುತ್ತಾರೆ- ಕೋಡಿಶ್ರೀ ಭವಿಷ್ಯ..!
X

ಹಾಸನ: ಹಾಸನದಲ್ಲಿ ಕೋಡಿಮಠದ ಶ್ರೀಗಳು ಭವಿಷ್ಯ ನುಡಿದಿದ್ದಾರೆ. ಗ್ರಹಣದ ಬಗ್ಗೆ ಭವಿಷ್ಯ ನುಡಿದಿರುವ ಶ್ರೀಗಳು, ಸಹೋದರ ಮುಖ್ಯಮಂತ್ರಿಯಾಗುತ್ತಾರೆ ಎನ್ನವ ಮೂಲಕ,ಕುಮಾರಸ್ವಾಮಿ ಅಧಿಕಾರ ಕಳೆದುಕೊಂಡು, ಹೆಚ್.ಡಿ.ರೇವಣ್ಣ ಸಿಎಂ ಆಗುತ್ತಾರೆಂದು ಹೇಳಿದ್ದಾರೆ.

ರಾಜಕೀಯದ ಬಗ್ಗೆ ಹೇಳಿರುವ ಶ್ರೀಗಳು, ರಾಜಕೀಯ ವಿಪ್ಲವವಾಗಲಿದೆ, ಸಿಎಂ ಅಧಿಕಾರ ಕಳೆದುಕೊಳ್ಳುತ್ತಾರೆ, ಸಹೋದರ ಬೆಂಕಿ ಹಿಡಿಯಲಿದ್ದಾನೆ ಎಂದು ಒಗಟಿನ ಮೂಲಕ ಹೇಳಿದ್ದಾರೆ. ಅಂದರೆ ಮುಖ್ಯಮಂತ್ರಿ ಕುಮಾರಸ್ವಾಮಿ ಸಿಎಂ ಪಟ್ಟ ಕಳೆದುಕೊಳ್ಳಲಿದ್ದು, ಸಹೋದರ ಹೆಚ್.ಡಿ.ರೇವಣ್ಣ ಸಿಎಂ ಆಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.

ಇನ್ನುಳಿದ ವಿಷಯಗಳ ಬಗ್ಗೆಯೂ ಭವಿಷ್ಯ ಹೇಳಿದ ಶ್ರೀಗಳು, ಗ್ರಹಣಗಳು ಪ್ರಾಕೃತಿಕ ಸಂಪನ್ನಗಳಾಗಿವೆ. ವಿಶೇಷವಾಗಿ ಈ ಬಾರಿ ಸೂರ್ಯ ಮತ್ತು ಚಂದ್ರ ಗ್ರಹಣಗಳು ಒಟ್ಟಿಗೆ ಬಂದಿವೆ. ನೀರು ಮತ್ತು ಭೂಮಿ ಪ್ರಾಕೃತಿಕ ನಾಶವಾಗಲಿದೆ. ಪರಸಕ್ಕೆ ಭಂಗ, ಪ್ರಸಂಗಕ್ಕೆ ಹಾನಿಯಾಗಲಿದೆ. ಅಲ್ಲದೇ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಮಳೆಯಾಲಿದೆ, ಮುಂದಿನ ದಿನಗಳಲ್ಲಿ ಭೂಕಂಪವಾಗಲಿದೆ, ವಿಶೇಷವಾಗಿ ಬರುವ ದಿನಗಳು ಕಷ್ಟಕರವಾಗಲಿದೆ ಎಂದು ಹೇಳಿದ್ದಾರೆ.

ಕೋಡಿಶ್ರೀಗಳು ನೇರವಾಗಿ ಕುಮಾರಸ್ವಾಮಿ ಸಿಎಂ ಸ್ಥಾನ ಕಳೆದುಕೊಳ್ಳುತ್ತಾರೆ ಎನ್ನಲಿಲ್ಲವಾದರೂ, ಅರಸನ ಆಯಸ್ಸು ಉಸಿರಲಿ ನಿಂತಿತ್ತು, ಅರಸನಿಗೆ ಆಪತ್ತು ಎದುರಾಗಲಿದೆ ಎನ್ನುವ ಮೂಲಕ ಕುತೂಹಲ ಹುಟ್ಟಿಸಿದ್ದಾರೆ.

Next Story

RELATED STORIES