ಹರಪನಹಳ್ಳಿ ತಾಲ್ಲೂಕು ಬಳ್ಳಾರಿ ಜಿಲ್ಲೆಗೆ ಸೇರ್ಪಡೆ

ದಾವಣಗೆರೆ : ಜಿಲ್ಲೆಗೆ ಸೇರ್ಪಡೆಯಾಗಿದ್ದ, ಹರಪನಹಳ್ಳಿ ತಾಲ್ಲೂಕನ್ನು ಪುನಃ ಬಳ್ಳಾರಿ ಜಿಲ್ಲೆಗೆ ಸೇರ್ಪಡೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಈ ಕುರಿತು ಅಧಿಕೃತವಾಗಿ ಆದೇಶ ಹೊರಡಿಸಿರುವ ರಾಜ್ಯಸರ್ಕಾರ, ದಾವಣಗೆರೆ ಜಿಲ್ಲೆಯಲ್ಲಿ
- ದಾವಣಗೆರೆ
- ರಪ್ಪನಹಳ್ಳಿ
- ಹರಿಹರ
- ಚೆನ್ನಗಿರಿ
- ಹೊನ್ನಾಳ್ಳಿ
- ನ್ಯಾಮತಿ
- ಜಗಳೂರು
ಸೇರಿದಂತೆ ಒಟ್ಟು 7 ತಾಲ್ಲೂಕುಗಳಿದ್ದವು.
ಈ ತಾಲ್ಲೂಕುಗಳಲ್ಲಿ ಹರಪನಹಳ್ಳಿ ತಾಲ್ಲೂಕನ್ನು ಬಳ್ಳಾರಿ ಜಿಲ್ಲೆಗೆ ಸೇರ್ಪಡೆ ಮಾಡುವ ಮೂಲಕ ದಾವಣಗೆರೆ ಜಿಲ್ಲೆಯನ್ನು 6 ತಾಲ್ಲೂಕುಗಳಿಗೆ ಇಳಿಸಿದೆ. ಈ ಬಗ್ಗೆ ಕರ್ನಾಟಕ ರಾಜ್ಯಪತ್ರದ ಮೂಲಕ ಸರ್ಕಾರದಿಂದ ಅಧಿಕೃತ ಆದೇಶ ಸೋಮವಾರದಂದು ಹೊರ ಬಿದ್ದಿದೆ.
ದಾವಣಗೆರೆ ಜಿಲ್ಲೆಯಲ್ಲಿದ್ದ ಹರಪ್ಪನಹಳ್ಳಿ ತಾಲ್ಲೂಕು ಬಳ್ಳಾರಿ ಜಿಲ್ಲೆಗೆ ಸೇರ್ವಡೆಯಾಗುವ ಮೂಲಕ, ಬಳ್ಳಾರಿ ಜಿಲ್ಲೆಯಲ್ಲಿನ ತಾಲ್ಲೂಕುಗಳ ಸಂಖ್ಯೆ, 11ಕ್ಕೆ ಏರಿಕೆಯಾಗಿದೆ. ಇದುವರೆಗೆ
- ಬಳ್ಳಾರಿ
- ಹಗರಿಬೊಮ್ಮನಹಳ್ಳಿ
- ಶಿರಗುಪ್ಪ
- ಸಂಡೂರು
- ಕುರುಗೋಡು
- ಹೊಸಪೇಟೆ
- ಕೂಡ್ಲಿಗಿ
- ಕಂಪ್ಲಿ
- ಹೂವಿನಹಡಗಲಿ
- ಕೊಟ್ಟೂರು
ಸೇರಿ 10 ತಾಲ್ಲೂಕುಗಳಿದ್ದವು. ಈ ತಾಲ್ಲೂಕುಗಳ ಜೊತೆಗೆ, ಇದೀಗ ಹರಪ್ಪನಹಳ್ಳಿ ಕೂಡ ಸೇರ್ಪಡೆಯಾಗುವ ಮೂಲಕ 11 ತಾಲ್ಲೂಕುಗಳು ಬಳ್ಳಾರಿ ಜಿಲ್ಲೆಯಲ್ಲಿವೆ.
ಅಂದಹಾಗೇ, ದಾವಣಗೆರೆ ಜಿಲ್ಲೆಗೆ ಹರಪ್ಪನಹಳ್ಳಿ ಸೇರ್ಪಡೆಯಾಗಿದ್ದರಿಂದ ಕಲಂ 371ಜೆ ಮೀಸಲಾಯಿಂದ ವಂಚಿತವಾಗಿತ್ತು. ಈ ಬಗ್ಗೆ ಕಳೆದ ಕಾಂಗ್ರೆಸ್ ಸರ್ಕಾರದಲ್ಲಿ ಬಳ್ಳಾರಿ ಜಿಲ್ಲೆಗೆ ಹರಪ್ಪನಹಳ್ಳಿ ಸೇರ್ಪಡಿಸುವ ಬಗ್ಗೆ ವಿಚಾರ ಎತ್ತಲಾಗಿತ್ತು. ಇದು ಈ ತಾಲ್ಲೂಕಿನ ಜನರ ಬಹುದಿನದ ಕನಸು ಕೂಡ ಆಗಿತ್ತು. ಇಂತಹ ಕನಸನ್ನು ಇದೀಗ ಸಮ್ಮಿಶ್ರ ಸರ್ಕಾರ ನನಸು ಮಾಡಿದೆ.