Top

ಸರ್ಕಾರಿ ಆದೇಶ, ಸರ್ಕಾರವೇ ಉಲ್ಲಂಘನೆ

ಸರ್ಕಾರಿ ಆದೇಶ, ಸರ್ಕಾರವೇ ಉಲ್ಲಂಘನೆ
X

ಬೆಂಗಳೂರು : ರಾಜ್ಯ ಸರ್ಕಾರ ದೇಶದಲ್ಲಿ ಪರಿಸರ ಕಾಳಜಿಗಾಗಿ ಹೊರಡಿಸಿದ ಕಾನೂನನ್ನೇ, ತಾನೇ ಉಲ್ಲಂಘಿಸಿ, ಇದೀಗ ಪೇಚಿಗೆ ಸಿಲುಕಿದೆ. ಈ ಮೂಲಕ ಸಾರ್ವಜನಿಕರಿಗೆ ಒಂದು ನ್ಯಾಯ, ಸರ್ಕಾರಕ್ಕೆ ಒಂದು ನ್ಯಾಯವೇ ಎಂಬ ಪ್ರಶ್ನೆಯನ್ನು ಎತ್ತುವಂತೆ ಮಾಡಿದೆ.

ಹೌದು. ಇತ್ತೀಚೆಗೆ ರಾಜ್ಯ ಸರ್ಕಾರ ಪ್ಲಾಸ್ಟಿಕ್‌ ಬಾಟಲ್‌ಗಳಲ್ಲಿ ನೀರು ಬಳಕೆಯನ್ನು ನಿಷೇಧಿಸುವಂತೆ ಆದೇಶ ಹೊರಡಿಸಿದೆ. ಸರ್ಕಾರದ ವಿವಿಧ ಇಲಾಖೆಗಳು ಆಯೋಜಿಸುವ ಸಚಿವರ ಮತ್ತು ಅಧಿಕಾರಿಗಳ ಸಭೆಗಳಲ್ಲಿ ಪ್ಲಾಸ್ಟಿಕ್ ನೀರಿನ ಬಾಟಲ್‌ಗಳ ಬದಲಿಗೆ ಸ್ಟೀಲ್‌ ಗ್ಲಾಸ್‌ಗಳಲ್ಲಿ ನೀರು ಪೂರೈಕೆ ಮಾಡುವಂತೆ ಆದೇಶಿಸಿದೆ.

https://www.youtube.com/watch?v=70RZTm4mJAY&index=43&list=PLmylWU4EY3N9w4lXMMtgANRMmH8JCLze3

ಆದರೆ ಆದೇಶ ವಿಧಾನಸೌಧದಲ್ಲಿಯೇ ಜಾರಿಗೆ ಬಂದಿಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿದಂತೆ ಸಚಿವರು ಮತ್ತು ಶಾಸಕರು ಭಾಗವಹಿಸುವ ಕಾರ್ಯಕ್ರಮಗಳಲ್ಲಿಯೇ ಈ ನಿಯಮ ಉಲ್ಲಂಘನೆಯಾಗುತ್ತಿದೆ. ಆದೇಶ ಜಾರಿಯಾದಾಗಿನಿಂದ ಇಲ್ಲಿಯವರೆಗೆ ಒಂದು ಸಭೆಯಲ್ಲಿಯೂ ಸ್ಟೀಲ್ ಗ್ಲಾಸ್‌ಗಳಲ್ಲಿ ನೀರು ಪೂರೈಕೆ ಮಾಡಿಲ್ಲ. ಅದರ ಬದಲಿಗೆ ಎಲ್ಲ ಸಭೆಗಳಲ್ಲಿ ಬಳಕೆ ಮಾಡಿ ಬೀಸಾಡುವ ಪ್ಲಾಸ್ಟಿಕ್‌ ನೀರಿನ ಬಾಟಲ್‌ಗಳನ್ನೇ ಬಳಕೆ ಮಾಡಲಾಗುತ್ತಿದೆ.

ಹೀಗಾಗಿ ಸರ್ಕಾರ ಹೊರಡಿಸಿದ ಆದೇಶವನ್ನು, ಸರ್ಕಾರವೇ ಪಾಲಿಸುತ್ತಿಲ್ಲ ಎಂಬಂತಾಗಿದೆ. ಕಾನೂನು ಕಾಪಾಡಬೇಕಾದವರೇ ಕಾನೂನು ಉಲ್ಲಂಘಿಸಿದಂತ ಘಟನೆಗಳಿಗೆ ಸರ್ಕಾರವೇ ಸಾಕ್ಷಿಯಾಗಿ ನಿಂತಿದೆ. ಹಾಗಾದರೇ, ಸರ್ಕಾರದ ಆದೇಶಗಳನ್ನು ಸರ್ಕಾರವೇ ಪರಿಣಾಮಕಾರಿಯಾಗಿ ಜಾರಿಗೊಳಿಸದಿದ್ದರೆ ಇನ್ನು ಜನ ಸಾಮಾನ್ಯರು ಆ ಆದೇಶಗಳನ್ನು ಪಾಲಿಸಬೇಕೆಂದು ಹೇಳುವ ನೈತಿಕತೆ ಸರ್ಕಾರಕ್ಕೆ ಇರುತ್ತಾ? ಇದಕ್ಕೆ ಸರ್ಕಾರವೇ ಉತ್ತರಿಸಬೇಕು.

Next Story

RELATED STORIES