Top

ರಾಕಿಂಗ್‌ ಸ್ಟಾರ್‌ ಯಶ್‌ "ಅಪ್ಪ" ಆಗ್ತಿದ್ದಾರೆ..!!

ರಾಕಿಂಗ್‌ ಸ್ಟಾರ್‌ ಯಶ್‌ ಅಪ್ಪ ಆಗ್ತಿದ್ದಾರೆ..!!
X

ಸ್ಯಾಂಡಲ್‌ವುಡ್‌ ರಾಕಿಂಗ್‌ ಸ್ಟಾರ್‌ ಅಭಿಮಾನಿಗಳಿಗೆ ಗುಡ್‌ ನ್ಯೂಸ್ ಕೊಟ್ಟಿದ್ದಾರೆ. ಮದುವೆಯಾಗಿ ವರ್ಷಗಳೇ ಕಳೆದಿದ್ರೂ, ಸ್ಟಾರ್‌ ದಂಪತಿಯಿಂದ ಸ್ವೀಟ್‌ ನ್ಯೂಸ್‌ ಬಂದಿಲ್ಲ ಅಂತ ಅನೇಕರು ಕಾಯ್ತಾ ಇದ್ರು. ಇಂತಹ ಅಭಿಮಾನಿಗಳಿಗೆ ರಾಕಿಂಗ್‌ ಸ್ಟಾರ್‌ ಇದೀಗ ಗುಡ್‌ ನ್ಯೂಸ್‌ ಕೊಟ್ಟಿದ್ದಾರೆ. ಅದೇ ಸ್ಟಾರ್‌ ದಂಪತಿಗಳು ಅಪ್ಪ-ಅಮ್ಮ ಆಗ್ತಾ ಇದ್ದಾರಂತೆ.

ಈ ವಿಷಯ ಕನ್ನಡದ ಕೋಟ್ಯಾಧಿಪತಿಯಲ್ಲಿ ರಮೇಶ್‌ ಅರವಿಂದ್ ರಿವೀಲ್‌ ಮಾಡಿದ್ದಾರೆ. ಅಮ್ಮ ಕೇಳಿದ ಪ್ರಶ್ನೆಗೆ ವಿಧಿ ಇಲ್ಲದೇ ಕಾರ್ಯಕ್ರಮದಲ್ಲಿ ಉತ್ತರಿಸಿರುವ ಯಶ್, ಅಮ್ಮ ನೀನು ಇಲ್ಲಿ ಕೇಳಿ ಬಚಾವ್‌ ಆಗ್ತಾ ಇದ್ದೀಯಾ. ಡಿಸೆಂಬರ್‌ ತನಕ ತಾಳು ಎಂದು ನಕ್ಕು ಉತ್ತರಿಸಿದ್ದರು.

https://www.facebook.com/TheOfficialYash/videos/2367904610103603/

ಇದೇ ವಿಷಯವನ್ನು ತಮ್ಮ ಫೇಸ್‌ಬುಕ್‌ ಪೇಜ್‌ನಲ್ಲಿ https://www.facebook.com/TheOfficialYash/ ಸ್ಪಷ್ಟಪಡಿಸಿರುವ ಯಶ್, ನನ್ನ ಅಮ್ಮ ಅಜ್ಜಿಯಾಗುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಈ ಮೂಲಕ ಯಶ್-ರಾಧಿಕ ದಂಪತಿಗಳು ತಂದೆ-ತಾಯಿ ಆಗುತ್ತಿರುವ ಗುಟ್ಟನ್ನು ಅಫಿಷಿಯಲ್‌ ಆಗೇ ತೆರೆದಿಟ್ಟಿದ್ದಾರೆ.

ಅಂದಹಾಗೇ ರಾಧಿಕಾ ಪಂಡಿತ್‌ ಈಗ 4 ತಿಂಗಳ ಗರ್ಭಿಣಿಯೆಂದು ತಿಳಿದು ಬಂದಿದೆ. ಸ್ವತಹ ಯಶ್‌ ಇದನ್ನು ತಮ್ಮ ಫೇಸ್‌ಬುಕ್‌ ಅಕೌಂಟ್‌ನಲ್ಲಿ ತಾನು ತಂದೆಯಾಗುತ್ತಿದ್ದಾಗೆ ಬರೆದುಕೊಂಡಿದ್ದಾರೆ. ಜೊತೆಗೆ ಒಂದು ವೀಡಿಯೋ ಕೂಡ ಹಾಕಿದ್ದು, ಅದಕ್ಕೆ YGF ಎಂದು ಕರೆದಿದ್ದಾರೆ. ಹೀಗೆಂದ್ರೇ ಡಿಸೆಂಬರ್‌ನಲ್ಲಿ Yash Going to be a Father ಎಂಬುದಾಗಿ ಕೂಡ ಬರೆದುಕೊಂಡಿದ್ದಾರೆ.

Next Story

RELATED STORIES