Top

3 ಕೋಟಿಗೆ ಹಾರೋ ಅವಕಾಶ: ಇದು ಕುತೂಹಲಕಾರಿ ಸಂಗತಿ

3 ಕೋಟಿಗೆ ಹಾರೋ ಅವಕಾಶ: ಇದು ಕುತೂಹಲಕಾರಿ ಸಂಗತಿ
X

ಆಕಾಶದಲ್ಲಿ ಹಾರಾಡುವ ಆಸೆ ನಿಮ್ಮದಾದರೆ, ರಿಚರ್ಡ್ ಎಂಬಾತ ನಿಮಗೊಂದು ಸುವರ್ಣಾವಕಾಶ ಕಲ್ಪಿಸಿದ್ದಾನೆ. ಜಸ್ಟ್ 3ಕೋಟಿ ರೂಪಾಯಿ ನಿಮ್ಮಲ್ಲಿದ್ರೆ ನೀವು ಐರನ್ ಮ್ಯಾನ್ ಥರಾ ಹಾರಾಡಬಹುದು.

ರಿಚರ್ಡ್ ಬ್ರೋವಿಂಗ್ ಎಂಬಾತ ಹಾರಾಡುವ ಸೂಟ್‌ ಒಂದನ್ನ ಕಂಡುಹಿಡಿದಿದ್ದಾರೆ. ಈ ಸೂಟನ್ನ ನೀವು ಧರಿಸಿದ್ರೆ, ನೀವು ಸಹ ಹಾರಾಡಬಹುದು. ಇದಕ್ಕಾಗಿ ನೀವು ಬರೋಬ್ಬರಿ 3ಕೋಟಿ ರೂಪಾಯಿ ತೆರಬೇಕಾಗುತ್ತದೆ.

[video width="640" height="360" mp4="http://tv5kannada.com/wp-content/uploads/2018/07/BackPack_Video.mp4"][/video]

ಓರ್ವ ಪ್ರವರ್ತಕ ಆವಿಷ್ಕಾರಿಯಾದ ರಿಚರ್ಡ್ ಬ್ರೋವಿಂಗ್ ಆವಿಷ್ಕಾರ ಯಾವ ಪ್ಲೆನ್‌ಗೂ ಕಮ್ಮಿಯಿಲ್ಲ. ಈತ ಆವಿಷ್ಕರಿಸಿದ ಹಾರಾಡುವ ಸೂಟ್‌ಗೆ ಈತ, ಗ್ರ್ಯಾವಿಟಿ ಫ್ಲೈಯಿಂಗ್ ಜೆಟ್ ಸೂಟ್ ಎಂದು ನಾಮಕರಣ ಮಾಡಿದ್ದಾನೆ. ಈ ಸೂಟನ್ನ ಹಾಕಿಕೊಂಡರೆ ಮನುಷ್ಯ ಹಾರಾಡಲು ಶುರು ಮಾಡುತ್ತಾನೆ.ಸದ್ಯ ಈ ಸೂಟ್ ಮಾರಾಟಕ್ಕೆ ಇಡಲಾಗಿದ್ದು, ಮಾರಾಟಕ್ಕೂ ಮುನ್ನ ಇದು ಹಾರಾಟಕ್ಕೆ ಸಿದ್ಧವಾಗಿದೆಯೋ ಇಲ್ಲವೋ ಎನ್ನುವುದನ್ನ ಪರೀಕ್ಷಿಸಲಾಗಿದೆ. ಅಲ್ಲದೇ ಈ ಸೂಟ್ ಮಾರಾಟ ಮಾಡುವುದಕ್ಕೂ ಮುನ್ನ, ಮನುಷ್ಯ ಇದನ್ನು ಧರಿಸಿದಾಗ ಯಾವ ರೀತಿ ಹಾರುತ್ತಾನೆಂದು ಕೂಡ ತೋರಿಸಲಾಗಿದೆ.

ನಿಮಗೂ ಕೂಡ ಹಾರಾಡುವ ಆಸೆ ಇದ್ದರೆ ನೀವು ಕೂಡ 3ಕೋಟಿ ರೂಪಾಯಿ ಕೊಟ್ಟು ಈ ಫ್ಲೈಯಿಂಗ್ ಜೆಟ್ ಸೂಟನ್ನ ಕೊಂಡುಕೊಳ್ಳಬಹುದು.

Next Story

RELATED STORIES