Top

ಸದ್ದಿಲ್ಲದೇ D/o ಪಾರ್ವತಮ್ಮ ಶೂಟಿಂಗ್ ಕಂಪ್ಲೀಟ್

ಸದ್ದಿಲ್ಲದೇ D/o ಪಾರ್ವತಮ್ಮ ಶೂಟಿಂಗ್ ಕಂಪ್ಲೀಟ್
X

ಸ್ಯಾಂಡಲ್​ವುಡ್​ನಲ್ಲಿ ಟೈಟಲ್​ ಮತ್ತು ಸಿಂಗಲ್ ಪೋಸ್ಟರ್​ ಮೂಲಕವೇ ಕ್ಯೂರಿಯಾಸಿಟಿ ಹುಟ್ಟಿಸಿದ್ದ ಚಿತ್ರ ಡಾಟರ್​ ಆಫ್​ ಪಾರ್ವತಮ್ಮ. ಸದ್ಯ ಸದ್ದಿಲ್ಲದೇ ಶೂಟಿಂಗ್​ ಮುಗಿಸಿ, ಕುಂಬಳಕಾಯಿ ಹೊಡೆದು, ಇದೀಗ ಚಿತ್ರದ ಮೇಕಿಂಗ್​ ಹೇಗಿದೆ ನೋಡಿ ? ಅಂತಿದೆ ಚಿತ್ರತಂಡ.

ಸುಮಲತಾ ಜೊತೆ ಕುಂಬಳಕಾಯಿ ಹೊಡೆದ ಹರಿಪ್ರಿಯಾ

ಉಗ್ರಂ ಸಿನಿಮಾ ಮೂಲಕ ಸೆಕೆಂಡ್​ ಇನ್ನಿಂಗ್ಸ್​ ಶುರುಮಾಡಿದ ಹರಿಪ್ರಿಯಾ ಬ್ಯಾಕ್​ ಟು ಬ್ಯಾಕ್​ ಭಿನ್ನ ವಿಭಿನ್ನ ಚಿತ್ರಗಳಲ್ಲಿ ಅಭಿನಯಿಸ್ತಾ ಬರ್ತಿದ್ದಾರೆ. ಇದೀಗ ಪಾರ್ವತಮ್ಮನ ಡಾಟರ್​ ಆಗಿ ತೆರೆಮೇಲೆ ಬರೋಕ್ಕೆ ರೆಡಿಯಾಗಿದ್ದಾರೆ. ಟೈಟಲ್​ ಮತ್ತು ಸಿಂಗಲ್​ ಪೋಸ್ಟರ್​ನಿಂದ ಸಿನಿಮಾ ಬಗ್ಗೆ ಕುತೂಹಲ ಮೂಡಿಸಿದ್ದ ಈ ಚಿತ್ರ ಸದ್ಯ ಸದ್ದಿಲ್ಲದೇ ಶೂಟಿಂಗ್ ಮುಗಿಸಿದೆ.

ಅಂದ್ಹಾಗೇ ಡಾಟರ್​ ಆಫ್​ ಪಾರ್ವತಮ್ಮ ಮೇಕಿಂಗ್​ ರಿಲೀಸ್ ಆಗಿದ್ದು, ಮನೆಯಲ್ಲಿ ಅಮ್ಮಮಗಳ ಒಡನಾಟ, ಪ್ರೀತಿ, ಮಾತುಕತೆಯ ಒಂದಷ್ಟು ದೃಶ್ಯಗಳನ್ನ ಮೇಕಿಂಗ್​ನಲ್ಲಿ ನೋಡ್ಬಹುದಾಗಿದೆ. ಜೊತೆಗೆ ಶೂಟಿಂಗ್​ ಸೆಟ್​ಗೆ ನಿರ್ದೇಶಕ ಪವನ್​ ಒಡೆಯರ್​ ಮತ್ತಿರರು ಭೇಟಿ ನೀಡಿ, ವಿಶ್​ ಮಾಡಿರೋದು ವಿಶೇಷ.

ಇನ್ನು ಪವನ್ ಒಡೆಯರ್ ಟೀಂನಲ್ಲಿ ಬೆಳೆದ ಶಂಕರ್ ಜೆ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಜೆಸ್ಸಿ, ನಟರಾಜ ಸರ್ವೀಸ್ ಸೇರಿದಂತೆ ಪವನ್ ಜೊತೆ ಕೆಲಸ ಮಾಡಿದ ಅನುಭವವಿದ್ದ ಶಂಕರ್ ತಮ್ಮ ಅಷ್ಟೂ ಎಕ್ಸ್​ಪೀರಿಯನ್ಸ್​ನ ಈ ಸಿನಿಮಾದಲ್ಲಿ ಪ್ರಯೋಗ ಮಾಡ್ತಿದ್ದಾರೆ.

ಸಣ್ಣ ಪುಟ್ಟ ಪಾತ್ರಗಳ ಮೂಲಕ ಹತ್ತಾರು ಸಿನಿಮಾಗಳಲ್ಲಿ ಗುರ್ತಿಸಿಕೊಂಡಿರೋ ಶಶಿಧರ್, ಈ ಸಿನಿಮಾಗೆ ಬಂಡವಾಳ ಹಾಕಿ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಅಷ್ಟೇ ಅಲ್ಲ, ಈ ಸಿನಿಮಾದ ವಿಶೇಷ ಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ.

ಸಿಲ್ವರ್ ಜೂಬಿಲಿ ಸಂಭ್ರಮದಲ್ಲಿ ನೀರ್​ದೋಸೆ ಚೆಲುವೆ ​

ಇನ್ನು ಡಾಟರ್​ ಆಫ್​ ಪಾರ್ವತಮ್ಮ ಚಿತ್ರಕ್ಕೂ, ನಿರ್ಮಾಪಕಿ ಪಾರ್ವತಮ್ಮ ರಾಜ್​ಕುಮಾರ್​ ಅವ್ರಿಗೂ ಯಾವುದೇ ಸಂಬಂಧವಿಲ್ಲ. ಕೇವಲ ಪಾರ್ವತಮ್ಮ ಹೆಸ್ರಿನ ಪಾತ್ರವನ್ನಷ್ಟೇ ಸುಮಲತಾ ಅಂಬರೀಶ್​ ನಿರ್ವಹಿಸ್ತಾ ಇದ್ದು, ಸಿನಿಮಾದಲ್ಲಿ ಎಲ್ಲರೂ ಹರಿಪ್ರಿಯಾರನ್ನ ಪಾರ್ವತಮ್ಮನ ಮಗಳು ಅಂತ ಗುರುತಿಸೋದ್ರಿಂದ ಈ ಟೈಟಲ್​ನ್ನ ಇಡಲಾಗಿದ್ಯಂತೆ.

ಡಾಟರ್​ ಆಫ್​ ಪಾರ್ವತಮ್ಮ ಸಿನಿಮಾ ನಟಿ ಹರಿಪ್ರಿಯಾಗೇ 25 ನೇ ಸಿನಿಮಾ ಆಗಿದ್ದು, ಸಂಪೂರ್ಣ ಮಹಿಳಾ ಪ್ರಧಾನ ಚಿತ್ರ ಇದಾಗಿದೆ.ಚಿತ್ರದಲ್ಲಿ ಹರಿಪ್ರಿಯಾರದ್ದು ಇನ್ವಸ್ಟಿಗೇಷನ್​ ಆಫೀಸರ್​ ಪಾತ್ರವಾಗಿದೆ.ಚಿತ್ರದ ಮೇಕಿಂಗ್​ ಮತ್ತು ಪೋಟೋಸ್​ ನೋಡ್ತಾ ಇದ್ರೆ, ಹರಿಪ್ರಿಯಾರ ಖಡಕ್​ ಲುಕ್​ ಅಂಡ್​ ಗೆಟಪ್​ ಹೇಗಿದೆ ಅನ್ನೋದು ಗೊತ್ತಾಗ್ತಿದೆ.

ಇನ್ನು ಚಿತ್ರಕ್ಕೆ ಜೆ .ಶಂಕರ್​ ಆ್ಯಕ್ಷನ್​ ಕಟ್​ ಹೇಳಿದ್ದಾರೆ.ಮಿಧುನ್​ ಮುಕುಂದನ್​ ಮ್ಯೂಸಿಕ್​ ಮತ್ತು ಅರುಳ್​ ಕ್ಯಾಮರ ವರ್ಕ್​ ಚಿತ್ರಕ್ಕಿದೆ.ಈಗಷ್ಟೇ ಶೂಟಿಂಗ್​ ಮುಗಿಸಿ, ಪೋಸ್ಟ್ ಪ್ರೊಡಕ್ಷನ್ ವರ್ಕ್​ನಲ್ಲಿ ಬ್ಯುಸಿಯಾಗಿರೋ ಚಿತ್ರತಂಡ ಸದ್ಯದಲ್ಲೇ ಚಿತ್ರದ ಅಫೀಶಿಯಲ್​ ಟೀಸರ್​ ರಿಲೀಸ್​ ಮಾಡಲಿದೆ.

ವರದಿ : ಅರ್ಚನಾಶರ್ಮಾ, ಎಂಟರ್​ಟೈನ್ಮೆಂಟ್​ ಬ್ಯುರೋ, ಟಿವಿ5

Next Story

RELATED STORIES