Top

ಪ್ರಾದೇಶಿಕ ಸೆನ್ಸಾರ್‌ ಮಂಡಳಿ ವಿರುದ್ಧ ಚಿತ್ರರಂಗ ಗರಂ

ಪ್ರಾದೇಶಿಕ ಸೆನ್ಸಾರ್‌ ಮಂಡಳಿ ವಿರುದ್ಧ ಚಿತ್ರರಂಗ ಗರಂ
X

ಸ್ಯಾಂಡಲ್​ವುಡ್​ನಲ್ಲಿ​ ಈ ವರ್ಷ ಹಿಟ್​ ಸಿನಿಮಾಗಳಿಗಿಂತ ಹೆಚ್ಚಾಗಿ ಸುದ್ದಿ ಮಾಡಿದ್ದು, ವಿವಾದಗಳು ಮತ್ತು ಪ್ರತಿಭಟನೆಗಳು. ಇಂದು ಕೂಡ ನಿರ್ಮಾಪಕರ ತಂಡವೊಂದು, ಪ್ರಾದೇಶಿಕ ಸೆನ್ಸಾರ್​ ಮಂಡಳಿಯ ವಿರುಧ್ಧ ಪ್ರತಿಭಟನೆ ನಡೆಸಿದ್ದು, ಸೆನ್ಸಾರ್​ ಮಂಡಳಿ ಅಧಿಕಾರಿಯನ್ನ ವರ್ಗಾವಣೆ ಮಾಡಬೇಕಾಗಿ, ಫಿಲ್ಮ್​ ಚೇಂಬರ್​ಗೆ ಮನವಿ ಮಾಡಿದ್ದಾರೆ.

[story-lines]

ಇಂದು ಕನಾರ್ಟಕ ವಾಣಿಜ್ಯ ಮಂಡಳಿ ಎದುರು, ನಿರ್ಮಾಪಕರ ತಂಡವೊಂದು ಪ್ರತಿಭಟನೆ ನಡೆಸಿದ್ರು. ಅಂದ್ಹಾಗೇ ಈ ಪ್ರತಿಭಟನೆ ಪ್ರಾದೇಶಿಕ ಸೆನ್ಸಾರ್ ಮಂಡಳಿ ಅಧಿಕಾರಿ ಶ್ರೀನಿವಾಸಪ್ಪನವ್ರ ವಿರುಧ್ಧವಾಗಿದ್ದು, ಈ ಕೂಡಲೇ ಶ್ರೀನಿವಾಸಪ್ಪನನ್ನ ಇಲ್ಲಿಂದ ವರ್ಗಾವಣೆ ಮಾಡಬೇಕು ಅನ್ನೋದು ನಿರ್ಮಾಪಕರ ಬೇಡಿಕೆಯಾಗಿದೆ.

ಸೆನ್ಸಾರ್​ ಆಫೀಸರ್​ ಶ್ರೀನಿವಾಸಪ್ಪ, ಹೊಸ ನಿರ್ಮಾಪಕರಿಗೆ ಕಿರುಕುಳ ಕೊಡ್ತಿದ್ದು, ಯಾವುದೇ ಬ್ಯಾನರ್​ನ ಸಿನಿಮಾ ಆದ್ರೂ ಆ ಚಿತ್ರಗಳಿಗೆ ಎ ಸರ್ಟಿಫಿಕೇಟ್​ ನೀಡ್ತಾ ಇದ್ದಾರೆ. ಎ ಸರ್ಟಿಫೀಕೇಟ್​ ನೀಡೋಕ್ಕೆ ಇರುವ ಮಾನದಂಡಗಳನ್ನ ಶ್ರೀನಿವಾಸಪ್ಪ ಬದಿಗೊತ್ತಿ, ಮನಸ್ಸಿಗೆ ಬಂದಂತೆ ಚಿತ್ರಗಳಿಗೆ ಸರ್ಟಿಪಿಕೇಟ್​ ನೀಡ್ತಿದ್ದಾರೆ ಎಂದು ನಿರ್ಮಾಪಕರು ಆರೋಪಿಸಿದ್ದಾರೆ.

https://www.youtube.com/watch?v=SJeGSC0nZdo&list=PLmylWU4EY3N9w4lXMMtgANRMmH8JCLze3&index=48

ಮಕ್ಕಳ ಸಿನಿಮಾವಾದ್ರೂ ಸಹ, ಚಿತ್ರದಲ್ಲಿ ರಕ್ತಪಾತ, ಅಶ್ಲೀಲ ದೃಶ್ಯವಿಲ್ಲದಿದ್ರೂ ಸಹ ಆಂತಹ ಸಿನಿಮಾಗಳಿಗೆ ಎ ಸರ್ಟಿಫಿಕೇಟ್​ ನೀಡ್ತಾ ಇದ್ದಾರೆ. ಇದರಿಂದ ಸಿನಿಮಾ ರಿಲೀಸ್​ ಮತ್ತು ಡಿಸ್ಟ್ರಿಬ್ಯೂಶನ್​, ಸಾಟಲೈಟ್ ಹಕ್ಕು ಮಾರಾಟಕ್ಕೂ ತೊಂದರೆಯಾಗ್ತಿದೆ ಅನ್ನೋದು ನಿರ್ಮಾಪಕರ ಅಳಲಾಗಿದೆ.

ಸದ್ಯ ನಿರ್ಮಾಪಕರ ತಂಡ ವಾಣಿಜ್ಯಮಂಡಳಿಗೆ ಮನವಿ ಮಾಡಿದ್ದು, ಮನವಿ ಪತ್ರವನ್ನ ಫಿಲ್ಮ್​ಚೇಂಬರ್​ ಕಾರ್ಯದರ್ಶಿ ಭಾ.ಮಾ ಹರೀಶ್ ಸ್ವೀಕರಿಸಿದ್ದು, ಸದ್ಯದಲ್ಲೇ ಈ ಬಗ್ಗೆ ಕ್ರಮ ಕೈಗೊಳ್ಳೋದಾಗಿ ಹೇಳಿದ್ದಾರೆ.

ಮುಂದಿನವಾರದಲ್ಲಿ ಈ ಸಮಸ್ಯೆ ಕುರಿತು ಚರ್ಚಿಸಿ, ಕ್ರಮ ಕೈಗೊಳ್ಳದಾಗಿ, ಫಿಲ್ಮ್​ ಚೇಂಬರ್​ನಿಂದ ಭರವಸೆ ಸಿಕ್ಕಿದ್ದು, ನಿರ್ಮಾಪಕರ ಸಮಸ್ಯೆಗೆ ಪರಿಹಾರ ಸಿಗುತ್ತಾ ಅನ್ನೋದನ್ನ ಕಾದುನೋಡ್ಬೇಕಿದೆ.

ಅರ್ಚನಾಶರ್ಮಾ, ಎಂಟರ್​​ಟೈನ್ಮೆಂಟ್ ಬ್ಯುರೋ, ಟಿವಿ5

Next Story

RELATED STORIES