ಇದು ಚಾಲೆಂಜಿಂಗ್ ಸ್ಟಾರ್ ನಟನೆಯ 53ನೇ ಸಿನಿ ಲೆಕ್ಕ..!!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಒಂದು ಸಿನಿಮಾ ಆಗೋವರೆಗೂ ತಮ್ಮ ಮುಂದಿನ ಸಿನಿಮಾದ ಬಗ್ಗೆ ತುಟಿಕ್ ಪಿಟಿಕ್ ಅನ್ನೋದಿಲ್ಲ.. ಆದ್ರೆ ಅವ್ರು ಅಭಿಮಾನಿಗಳು ಮಾತ್ರ ಒಂದು ಒಂದು ಸಿನಿಮಾ ಸೆಟ್ಟೇರುತ್ತಿದಂಗೆ ಮುಂದಿನ ಸಿನ್ಮಾದ ಪೋಸ್ಟರ್​ಗಳನ್ನು ತಮ್ಮ ಎದೆ ಮೇಲೆ ಅಚ್ಚೆ ಹಾಕಿಸಿಕೊಂಡು ಬಿಡ್ತಾರೆ.. ಅಷ್ಟರ ಮಟ್ಟಿಗೆ ಪವರ್​​ಫುಲ್ ಡಿ ಫ್ಯಾನ್ಸ್​ ಕ್ಲಬ್​​..

ಸದ್ಯ ಆಫ್ ಸೆಂಚುರಿ ಸನ್ನಿಯದಲ್ಲಿದ್ದಾರೆ ದಾಸ ದರ್ಶನ್.. ಮುನಿರತ್ನ ಕುರುಕ್ಷೇತ್ರ ಧುರ್ಯೋದನ ಪೋಷಾಕು ಹಾಕಿಕೊಂಡಿರುವ ದಚ್ಚುರವರನ್ನು ಕಣ್ಣುತುಂಬಿಕೊಳ್ಳಲು ದಾಸನ ಭಕ್ತ ಗಣ ತುದಿಗಾಲಲ್ಲಿ ನಿಂತಿದೆ.. ಇದ್ರ ನಡುವೆ ಯಜಮಾನ ಗೆಟಪ್​ನಲ್ಲಿ ದರ್ಶನ್ ಕ್ಯಾಮೆರಾಗೆ ಕಣ್ಣು ಹೊಡೆದ್ದಿದ್ದಾರೆ. 

ಮುನಿರತ್ನ ಕುರುಕ್ಷೇತ್ರ 50ನೇ ಸಿನಿಮಾ, ಯಜಮಾನ 51ನೇ ಚಿತ್ರವಾದ್ರೆ 52ನೇ ಸಿನಿಮಾವಾಗಿ ಸಂದೇಶ್ ನಾಗರಾಜ್ ನಿರ್ಮಾಣದ ಒಡೆಯರ್ ಆಗುವ ಸಾಧ್ಯತೆ ಇದೆ.. ಆದ್ರೆ ಇದು ಇನ್ನೂ ಪಕ್ಕಾ ಆಗಿಲ್ಲ.. ಈ ವಿಚಾರ ಅಧಿಕೃತವಾಗುವ ಮೊದಲೇ ದರ್ಶನ್​ ಮುಂದಿನ ಸಿನಿಮಾದ ಬಗ್ಗೆ ಹೊಸ ಸಮಾಚಾರ ಹೊರಬಿದ್ದಿದೆ..

ಜಗ್ಗು-ಕುಂಬಿ ಕಾಂಬೋ ಪ್ರಾಜೆಕ್ಟ್ ಸೆಟ್ಟೇರೊದು ಪಕ್ಕಾ..!

ಚೌಕ ಖ್ಯಾತಿಯ ನಿರ್ದೇಶಕ ತರುಣ್ ಸುಧೀರ್ ದರ್ಶನ್​ಗಾಗಿ ಹೊಸ ಖಡಕ್ ಕಥೆಯನ್ನು ಹೇಣೆದಿದ್ದಾರೆ ಎಂದು ನಾವೇ ನಿಮ್ಗೇ ಈ ಮೊದಲೇ ಹೇಳಿದ್ವಿ.. ಆದ್ರೆ ಈಗ ಆ ಸ್ವೀಟ್ ಸಮಾಚಾರಕ್ಕೆ ಜೇನುತುಪ್ಪ ಬಂದು ಬಿದ್ದಿದೆ. ತರುಣ್ ಸುಧೀರ್ ಕಲ್ಪನೆಯ ಆ ಹೊಸ ಸಿನಿಮಾವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡುವವರು ಯಾರು ಅನ್ನೊದಕ್ಕೆ ಸರಿ ಉತ್ತರ ಸಿಕ್ಕಿದೆ. ತರುಣ್ ಸುಧೀರ್​​​ ಕಲ್ಪನೆಯ ಹೊಸ ಸಿನಿಮಾವನ್ನು ನಿರ್ಮಾಣ ಮಾಡುತ್ತಿರುವುದು ಅವರ ಅಭಿಮಾನಿಯೇ. ಅಷ್ಟಕ್ಕೂ ದರ್ಶನ್ ಕಾಲ್ ಶೀಟ್ ಪಡೆದ ಆ ಭಾಗ್ಯಶಾಲಿ ನಿರ್ಮಾಪಕನೇ ಉಮಾಪತಿ.

ಉಮಾಪತಿ ನಿರ್ಮಾಣದಲ್ಲಿ ದಚ್ಚು- ತರುಣ್​ ಕಾಂಬೋ

ಚೌಕ ಚಿತ್ರದಲ್ಲಿ ರಾಬರ್ಟ್ ಅನ್ನೋ ಗೆಸ್ಟ್ ರೋಲ್ ಮಾಡಿದ್ರು ದರ್ಶನ್.. ರಾಬರ್ಟ್​ ಅನ್ನೊ ಪಾತ್ರ ಅಭಿಮಾನಿಗಳಲ್ಲಿ ಮನಸೂರೆ ಗೊಂಡಿದೆ.. ಈ ಕಾರಣಕ್ಕೆ ತರುಣ್ ಸುಧೀರ್ ನಿರ್ದೇಶನದ ಹೊಸ ಸಿನಿಮಾಕ್ಕೆ ರಾಬರ್ಟ್​ ಎಂದು ಹೆಸರಿಟ್ಟರು ಅಚ್ಚರಿಯಿಲ್ಲ.. ಜೊತೆಗೆ ದರ್ಶನ್​ರವರಿಗೆ ಕಾಟೇರ ಹೆಸರಿನ ಮೇಲೆ ಆಸಕ್ತಿ ಇದೆಯಂತೆ.. ಇದೆಲ್ಲದರ ಮಧ್ಯೆ ಈ ಚಿತ್ರಕ್ಕೆ ನಟ ಭೈರವ ವಜ್ರಮುನಿ ಹೆಸ್ರು ಕೇಳಿಬರ್ತಿದೆ..

ನವೆಂಬರ್​ನಲ್ಲಿ ಉಮಾಪತಿ ಡ್ರೀಮ್ ಪ್ರಾಜೆಕ್ಟ್ ಸ್ಟಾರ್ಟ್​..!

ಕಿಚ್ಚ ಸುದೀಪ್ ನಟನೆಯ ಹೆಬ್ಬುಲಿ ಸಿನಿಮಾವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದ ಉಮಾಪತಿಯವರಿಗೆ ದರ್ಶನ್ ಹೊಸ ಸಿನಿಮಾವನ್ನು ಸಖತ್ ಗ್ರ್ಯಾಂಡ್​ ಆಗಿ ನಿರ್ಮಿಸುವ ಕನಸಿದೆ.. ಈಗಾಗಲೇ ‘ಒಂದಲ್ಲಾ ಎರಡಲ್ಲಾ’ ಹೆಸರಿನ ವಿಭಿನ್ನ ಚಿತ್ರವನ್ನು ನಿರ್ಮಾಣ ಮಾಡಿರುವ ಉಮಾಪತಿ ನವೆಂಬರ್​ ಹೊತ್ತಿಗೆ ದರ್ಶನ್, ತರುಣ್ ಕಿಶೋರ್ ಕಾಂಬೀನೆಷನ್ ಸಿನಿಮಾವನ್ನು ಶುರು ಮಾಡಲಿದ್ದಾರೆ.

ಉಮಾಪತಿಯವರಂತಹ ಉತ್ಸಾಹಿ, ಸಿನಿವ್ಯಾಮೋಹಿ ಸ್ಯಾಂಡಲ್​ವುಡ್​ಗೆ ಬರಬೇಕು.. ದೊಡ್ಡ ದೊಡ್ಡ ಸಿನಿಮಾಗಳನ್ನು ನಿರ್ಮಾಣ ಮಾಡಿ ಅಕ್ಕ ಪಕ್ಕದ ಇಂಡಸ್ಟ್ರಿಗಳನ್ನ ಮೀರಿಸುವಂತಹ ಸಿನಿಮಾಗಳನ್ನು ನಿರ್ಮಾಣ ಮಾಡಬೇಕು.. ಅನೇಕ ದೊಡ್ಡ ದೊಡ್ಡ ಕನಸುಗಳನ್ನು ಇಟ್ಟುಕೊಂಡಿರುವ ಉಮಾಪತಿಯವರಿಗೆ ಸಮಸ್ತ ಚಿತ್ರರಸಿಕರ ಪರವಾಗಿ ಆಲ್​ ಬೆಸ್ಟ್ ಹೇಳೋಣ..

ಶ್ರೀಧರ್ ಶಿವಮೊಗ್ಗ, ಎಂಟರ್​​ಟೈನ್ಮೆಂಟ್ ಬ್ಯೂರೋ TV5

Recommended For You

Leave a Reply

Your email address will not be published. Required fields are marked *