Top

ಲೋಕಸಭಾ 28 ಕ್ಷೇತ್ರಗಳಲ್ಲಿ ಗೆಲ್ಲೋಕೆ ಮಾಸ್ಟರ್‌ ಪ್ಲಾನ್‌.!?

ಲೋಕಸಭಾ 28 ಕ್ಷೇತ್ರಗಳಲ್ಲಿ ಗೆಲ್ಲೋಕೆ ಮಾಸ್ಟರ್‌ ಪ್ಲಾನ್‌.!?
X

ಬೆಂಗಳೂರು : ಈಗ ಎಲ್ಲರ ರಾಜಕೀಯ ನಾಯಕರ ಚಿತ್ತ, ಲೋಕಸಭಾ ಚುನಾವಣೆಯತ್ತ.! ಹೀಗಾಗಿ ಲೋಕಸಭಾ ಸಮರಕ್ಕೆ ಬಿಎಸ್‌ವೈ ಕಮಲಾಧಿಪತಿ ಯಾದರೇ, ಕಾಂಗ್ರೆಸ್ ಪಕ್ಷಕ್ಕೆ ಸಿದ್ದರಾಮಯ್ಯ ಅಧಿಕೃತ ಸಾರಥಿಯೆಂದು ಘೋಷಣೆಯಾಗಿದೆ. ಈ ಇಬ್ಬರ ನಡುವೆ ಉತ್ತಮವಾಗುತ್ತಾ ಜೆಡಿಎಸ್‌ ಸ್ಥಿತಿಗತಿ ಎಂಬ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಇವುಗಳ ನಡುವೆ 28 ಕ್ಷೇತ್ರಗಳಲ್ಲಿ ಯಾರು ಎಷ್ಟು ಸ್ಥಾನಗಳನ್ನ ಗೆಲ್ತಾರೆ..? ರಾಜಕೀಯ ಪಕ್ಷಗಳ ನಾಯಕರ ಮಾಸ್ಟರ್‌ ಪ್ಲಾನ್‌ ರೆಡಿ ಮಾಡ್ತಾ ಇದ್ದಾರಂತೆ.

ರಾಹುಲ್ ಪ್ರಧಾನಿ ಮಾಡಲು ಮಾಜಿ ಸಿಎಂ ಶಪಥ..!

ಕುಮಾರಸ್ವಾಮಿ ಸಿಎಂ ಆದ್ಮೇಲೆ ಹಲವು ವಿಚಾರಗಳಲ್ಲಿ ಸಿದ್ದರಾಮಯ್ಯರನ್ನ ಕಡೆಗಣಿಸಲಾಗಿತ್ತು.. ಒಂದು ಹಂತಕ್ಕೆ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಪತ್ರ ಸಮರ ಶುರುಮಾಡಿಕೊಂಡಿದ್ರು.. ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಸೋಲು, ಪಕ್ಷದ ಹೀನಾಯ ಪ್ರದರ್ಶನದ ನಂತರ ಕಾಂಗ್ರೆಸ್​​ನಲ್ಲಿ ಸಿದ್ದು ಯುಗಾಂತ್ಯ ಅಂತಾನೇ ಮಾತನಾಡಲಾಗ್ತಿತ್ತು.

ಆದ್ರೆ, ಕಳೆದ 3 ದಿನಗಳಿಂದ ಸಿದ್ದರಾಮಯ್ಯ ತುಂಬಾ ಸ್ಟ್ರಾಂಗು ಗುರು ಅನ್ನೋ ಸಂದೇಶ ಹೈಕಮಾಂಡ್ ರವಾನಿಸಿದೆ.. ಕರ್ನಾಟಕದಲ್ಲಿ ಖರ್ಗೆ ಬಿಟ್ಟರೇ ಮೋದಿಗೆ ತೊಡೆತಟ್ಟು ಕಾದಾಡೋ ಧೈರ್ಯವಿರೋ ವ್ಯಕ್ತಿ ಅಂದ್ರೆ ಅದು ಸಿದ್ದರಾಮಯ್ಯ ಅನ್ನೋದು ಹೈಕಮಾಂಡ್ ಗಮನಕ್ಕೆ ಬರ್ತಿದ್ದ ಹಾಗೆಯೇ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ ಕಂಪ್ಲೀಟ್ ಉಸ್ತುವಾರಿಯನ್ನ ಸಿದ್ದರಾಮಯ್ಯಗೆ ನೀಡಿದ್ದಾರೆ.

ಚುನಾವಣೆಗೆ ನಿಲ್ಲಲ್ಲ, ಅಭ್ಯರ್ಥಿಗಳ ಪರ ಕೆಲಸ ಮಾಡ್ತೇನೆ ಅಂದ್ರಂತೆ ಸಿದ್ದು

ಇನ್ನು ಲೋಕಸಭೆಯಲ್ಲಿ ನರೇಂದ್ರ ಮೋದಿಯನ್ನ ಮಾತಿನ ಮೂಲಕ ಕಟ್ಟಿಹಾಕಬಲ್ಲ ಶಕ್ತಿ ಇರೋದು ಕೇವಲ ಮಲ್ಲಿಕಾರ್ಜುನ ಖರ್ಗೆಗೆ ಮಾತ್ರ.. 2014ರಿಂದ ಖರ್ಗೆ ಸಾಮರ್ಥ್ಯ ಗೊತ್ತಾದ ಮೇಲೆ ಸೋನಿಯಾ ಗಾಂಧಿ ಕ್ಯಾಂಪ್‌ನಲ್ಲಿ ಖರ್ಗೆ ಭದ್ರ ಸ್ಥಾನವನ್ನ ಪಡೆದುಕೊಂಡಿದ್ದಾರೆ.. ಆದ್ರೆ, ಖರ್ಗೆ ಇಡೀ ರಾಜ್ಯದ ತುಂಬಾ ವರ್ಚಸ್ಸನ್ನ ಬೆಳೆಸಿಕೊಂಡಿಲ್ಲ.. ಹೀಗಾಗಿ ಸಿದ್ದರಾಮಯ್ಯ ಖರ್ಗೆಗಿಂತ ಸ್ಟ್ರಾಂಗು ಅನ್ನೋದು ಹೈಕಮಾಂಡ್​ಗೆ ಗೊತ್ತಾಗಿದೆ.. ಇದಕ್ಕಾಗಿ ರಾಹುಲ್ ಗಾಂಧಿ ಸಿದ್ದರಾಮಯ್ಯರನ್ನ ಲೋಕಸಭೆಗೆ ಸ್ಪರ್ಧೆ ಮಾಡುವಂತೆ ಹೇಳಿದ್ದಾರೆ.

[story-lines]

ಆದ್ರೆ ಸಿದ್ದರಾಮಯ್ಯ ನಯವಾಗಿ ತಿರಸ್ಕರಿಸಿ.. ನಾನು ಜನರಿಗೆ ಮುಂದೆ ಚುನಾವಣೆಗೆ ನಿಲ್ಲೋದಿಲ್ಲ ಅಂತ ಹೇಳಿದ್ದಾರೆ.. ಹೀಗಾಗಿ ಜನರ ನಂಬಿಕೆ ಉಳಿಸಿಕೊಳ್ಳುವ ದೃಷ್ಠಿಯಿಂದ ನಾನು ಚುನಾವಣೆಗೆ ಸ್ಪರ್ಧೇ ಮಾಡೋದಿಲ್ಲ, ಆದ್ರೆ, 28 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುತ್ತೇನೆ ಅಂತ ಹೇಳಿದ್ದಾರೆ.. ಆದ್ರೆ, ಜೆಡಿಎಸ್​ ಜೊತೆ ಮೈತ್ರಿಯಿಂದ ಕಾಂಗ್ರೆಸ್​​ಗೆ ನಷ್ಟವಾಗಲಿದೆ, ಕಾಂಗ್ರೆಸ್​ಗೆ ಯಾವುದೇ ಕಾರಣಕ್ಕೂ ಲಾಭವಾಗಲ್ಲ ಅಂತ ರಾಹುಲ್​ಗೆ ಹೇಳಿಬಂದಿದ್ದಾರೆ.

ಟಾರ್ಗೆಟ್​ 25 ರೀಚ್ ಮಾಡಲು ಅಮಿತ್ ಶಾ ಕಟ್ಟಪ್ಪಣೆ

ಇನ್ನು ವಿಧಾನಸಭಾ ಚುನಾವಣೆಯಲ್ಲಿ ಸ್ವಲ್ಪದರನ್ನ ಮುಗ್ಗರಿಸಿದ ಬಿಎಸ್​ವೈಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ.. ಅಲ್ಲದೇ 28 ಕ್ಷೇತ್ರಗಳಲ್ಲಿ 25 ಸಂಸದರನ್ನ ಆಯ್ಕೆ ಮಾಡಿಕೊಂಡು ಬರುವಂತೆ ಅಮಿತ್ ಶಾ ಯಡಿಯೂರಪ್ಪಗೆ ಸೂಚನೆ ನೀಡಿದ್ದಾರಂತೆ. ಹೀಗಾಗಿಯೇ ಕಾಲಿಗೆ ಚಕ್ರಕಟ್ಟಿಕೊಂಡವರಂತೆ ಬಿಎಸ್​ವೈ ರಾಜ್ಯಪ್ರವಾಸ ಮಾಡಲು ಮುಂದಾಗಿದ್ದಾರೆ.

ಜೆಡಿಎಸ್​ಗೆ ಈ ಬಾರಿ ಭರ್ಜರಿ ಲಾಭ..?

ಜೆಡಿಎಸ್​ ನಾಯಕರು ಏನೇ ಮಾತನಾಡಿದ್ರು ಲೋಕಸಭೆಯ ವಿಚಾರದಲ್ಲಿ ದೊಡ್ಡ ಸಾಧನೆ ಮಾಡಿದ ಇತಿಹಾಸವಿಲ್ಲ. ಜನತಾಪರಿವಾರ ಹರಿದುಹಂಚಿಹೋದ ನಂತರ ಹಳೆ ಮೈಸೂರಿಗಷ್ಟೆ ಜೆಡಿಎಸ್​ ಸೀಮಿತವಾಗಿದೆ. ಲೋಕಸಭೆಯ ವಿಚಾರಕ್ಕೆ ಬಂದ್ರೆ ಮಂಡ್ಯ-ಹಾಸನ ಮಾತ್ರ ಜೆಡಿಎಸ್​ ಭದ್ರಕೋಟೆ.. ಆದ್ರೆ, ಈ ಬಾರಿ ಕಾಂಗ್ರೆಸ್​-ಜೆಡಿಎಸ್​ ಮೈತ್ರಿಯ ಕಾರಣದಿಂದ 4-5 ಸ್ಥಾನಗಳು ಜೆಡಿಎಸ್​ ಪಾಲಾಗುತ್ವೆ ಅಂತ ಹೇಳಲಾಗ್ತಿದೆ. ಒಂದು ವೇಳೆ ಲೋಕಸಭಾ ಚುನಾವಣೆಗೆ ಕಾಂಗ್ರೆಸ್​-ಜೆಡಿಎಸ್ ಮೈತ್ರಿ ಮುರಿದುಬಿದ್ದರೇ ಜೆಡಿಎಸ್​ ಹಳೆ ನಂಬರ್ ಉಳಿಸಿಕೊಂಡ್ರೆ ಸಾಧನೆ.

ಈ ಬಾರಿ ಮಾತ್ರ ಮೋದಿ ವಿರೋಧಿ ಒಕ್ಕೂಟವನ್ನ ಬಲಪಡಿಸ್ತೀನಿ ಅಂತ ದೇವೇಗೌಡರು ಹೇಳಿಕೊಂಡು ಹೋಡಾಡ್ತಿದ್ದಾರಂತೆ.. ಏನೇ ಆಗಲಿ.. ಹಳೆ ಮೈಸೂರಿನ 4-5 ಸ್ಥಾನಗಳನ್ನ ಹೊರತುಪಡಿಸಿದ್ರೆ 20ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿ- ಕಾಂಗ್ರೆಸ್​ ಕಾಳಗ ನಡೆಯೋದು ಗ್ಯಾರಂಟಿ.. ಈ ಕದನ ಬಿಜೆಪಿ-ಕಾಂಗ್ರೆಸ್​ ಅನ್ನೋದಕ್ಕಿಂತ ಸಿದ್ದರಾಮಯ್ಯ+ಕುಮಾರಸ್ವಾಮಿ ವರ್ಸಸ್ ಯಡಿಯೂರಪ್ಪ ಅಂತಾನೇ ಹೇಳುವುದು ಸೂಕ್ತ.

Next Story

RELATED STORIES