Top

ಸ್ಯಾಂಡಲ್‌ವುಡ್‌ನಲ್ಲಿ ಜೋರಾಗಿದೆ ಕುಸ್ತಿ ಕಸರತ್ತು..!

ಸ್ಯಾಂಡಲ್‌ವುಡ್‌ನಲ್ಲಿ ಜೋರಾಗಿದೆ ಕುಸ್ತಿ ಕಸರತ್ತು..!
X

ಸ್ಯಾಂಡಲ್​ವುಡ್​ ಬ್ಲಾಕ್​ ಕೋಬ್ರಾ ದುನಿಯಾ ವಿಜಿ ಅಭಿನಯದ ಕುಸ್ತಿ ಒಂದಲ್ಲ ಒಂದು ವಿಶೇಷತೆಗಳಿಂದ ಸುದ್ದಿ ಮಾಡ್ತಾನೇ ಇದೆ. ಸದ್ಯ ಕುಸ್ತಿ ಟೀಂಗೆ ರಾಜ್ಯಪ್ರಶಸ್ತಿ ವಿಜೇತೆ ನಟಿಯೊಬ್ರು ಸೇರ್ಪಡೆಯಾಗಿದ್ದಾರೆ.ಒಂದಷ್ಟು ವರ್ಷಗಳ ಗ್ಯಾಪ್​ ತೊಗೊಂಡು ಮತ್ತೆ ಕುಸ್ತಿಗಾಗಿ ಬಣ್ಣ ಹಚ್ತಿರೋ ಆ ನಟಿ ಯಾರು.? ಆ ಬಗ್ಗೆ ಮುಂದೆ ಓದಿ.

ಕುಸ್ತಿ ಅಖಾಡಕ್ಕೆ ಇಳಿದ ರಾಜ್ಯಪ್ರಶಸ್ತಿ ವಿಜೇತೆ ಕಲ್ಯಾಣಿ

ದುನಿಯಾ ವಿಜಿ ಪುತ್ರ ಸಾಮ್ರಾಟ್ ಕನ್ನಡ ಚಿತ್ರರಂಗಕ್ಕೆ ಎಂಟ್ರಿಯಾಗ್ತಿದ್ದಾರೆ ಅಂದಾಗ್ಲೇ ಇಂಡಸ್ಟ್ರಿಯಲ್ಲಿ ಒಂದಷ್ಟು ಕುತೂಹಲ ಮನೆಮಾಡಿತ್ತು.. ಕುಸ್ತಿಯ ಫಸ್ಟ್ ಲುಕ್,​ ​ಈ ಕ್ಯೂರಿಯಾಸಿಟಿಯನ್ನ ಹೆಚ್ಚಿಸಿತ್ತು. ಆ ನಂತ್ರ ಟೀಸರ್​ಗೆ ಸಿಕ್ಕ ಪಾಸಿಟಿವ್ ರೆಸ್ಪಾನ್ಸ್​ ಜೊತೆಗೆ ಕಾಂಟ್ರೋವರ್ಸಿ ಕೂಡ ಕುಸ್ತಿ ಮತ್ತಷ್ಟು ಸದ್ದು ಮಾಡೋಕ್ಕೆ ದಾರಿಯಾಯ್ತು.

ಇದೀಗ ವಿಜಿ ಮತ್ತು ಪುತ್ರ ಸಾಮ್ರಾಟ್​ ಜೊತೆ ಮತ್ತೊಬ್ಬ ನಟಿ ಕುಸ್ತಿ ಅಖಾಡಕ್ಕೆ ಇಳಿತಿದ್ದಾರೆ. ಈ ಹಿಂದೆ ದುನಿಯಾ ವಿಜಿ ಮೊದಲ ನಿರ್ಮಾಣದಲ್ಲಿ ತೆರೆಕಂಡ ಬ್ಲಾಕ್​ ಬಸ್ಟರ್ ಹಿಟ್ ಸಿನಿಮಾ, ಜಯಮ್ಮನ ಮಗ ಚಿತ್ರದಲ್ಲಿ ನಟಿಸಿದ್ದ ರಾಜ್ಯಪ್ರಶಸ್ತಿ ವಿಜೇತೆ ಕಲ್ಯಾಣಿ, ಮತ್ತೊಮ್ಮೆ ಕುಸ್ತಿ ಮೂಲಕ ಬಣ್ಣ ಹಚ್ತಿದ್ದಾರೆ.

5 ವರ್ಷಗಳ ನಂತ್ರ ಬಣ್ಣ ಹಚ್ಚಿದ ನಟಿ ಕಲ್ಯಾಣಿ

ಜಯಮ್ಮನ ಮಗ ಚಿತ್ರದಲ್ಲಿ ದುನಿಯಾ ವಿಜಿ ತಾಯಿಯಾಗಿ ಅಂದ್ರೆ ಜಯಮ್ಮನ ಪಾತ್ರದಲ್ಲಿ ಮಿಂಚಿದ್ದ ಕಲ್ಯಾಣಿ ಆ ನಂತ್ರ ಫ್ಯಾಮಿಲಿ ಕಡೆ ಹೆಚ್ಚು ಗಮನ ಹರಿಸ್ತಾ ಇದ್ದಿದ್ರಿಂದ, ಯಾವುದೇ ಸಿನಿಮಾಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಜಯಮ್ಮನ ಮಗ ಚಿತ್ರದ ನಂತ್ರ ಸುಮಾರು 5 ವರ್ಷಗಳ ನಂತ್ರ ಇದೀಗ ಮತ್ತೊಮ್ಮೆ ದುನಿಯಾ ವಿಜಿ ಸಿನಿಮಾ ಮೂಲಕವೇ ಬ್ಯುಸಿಯಾಗ್ತಿದ್ದಾರೆ.

ಅಂದ್ಹಾಗೇ ಜಯಮ್ಮನ ಮಗ ಚಿತ್ರದಲ್ಲಿ ತಾಯಿಯ ಪಾತ್ರಧಾರಿಯಾಗಿದ್ದ ನಟಿ ಕಲ್ಯಾಣಿ, ಕುಸ್ತಿ ಚಿತ್ರದಲ್ಲಿಯೂ ಸಾಮ್ರಾಟ್​ ಮತ್ತು ದುನಿಯಾ ವಿಜಿ ತಾಯಿಯ ಪಾತ್ರದಲ್ಲಿ ಮಿಂಚ್ತಿದ್ದಾರೆ. ವಯಸ್ಸಿಗೂ ಮೀರಿದಂತ ಪಾತ್ರದಲ್ಲಿ ಲುಕ್​ನಲ್ಲಿ ಮಿಂಚಿ, ಜಯಮ್ಮನ ಮಗ ಚಿತ್ರದ ಮೂಲಕ ಹೆಚ್ಚು ಗಮನ ಸೆಳೆದಿದ್ದ ಕಲ್ಯಾಣಿ, ಕುಸ್ತಿ ಚಿತ್ರದಲ್ಲಿ ಯಾವ ರೀತಿ ಕಾಣಿಸಿಕೊಳ್ತಾರೆ ಅನ್ನೋ ಕ್ಯೂರಿಯಾಸಿಟಿ ಅಂತೂ ಇದ್ದೇ ಇದೆ.

ಅರ್ಚನಾಶರ್ಮಾ, ಎಂಟರ್​ಟೈನ್ಮೆಂಟ್​ ಬ್ಯುರೋ, ಟಿವಿ5

Next Story

RELATED STORIES