Top

ಮಾಜಿ ವಿಧಾನ ಪರಿಷತ್ ಸದಸ್ಯರಿಂದ ಗೂಂಡಾಗಿರಿ.?

ಮಾಜಿ ವಿಧಾನ ಪರಿಷತ್ ಸದಸ್ಯರಿಂದ ಗೂಂಡಾಗಿರಿ.?
X

ಆನೇಕಲ್ : ಅಪಾರ್ಟ್ಮೆಂಟ್ ನಿರ್ಮಿಸಿಕೊಟ್ಟ ಮೇಲೆ ಅದಕ್ಕೆ ತಕ್ಕಂತೆ ಮೂಲಭೂತ ಸೌಕರ್ಯ ಕಲ್ಪಿಸಿಕೊಡಬೇಕಾದ್ದು, ನಿರ್ಮಾಣ ಸಂಸ್ಥೆಯ ಕರ್ತವ್ಯ. ಮೂಲಭೂತ ಸೌಕರ್ಯವಿಲ್ಲದೇ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸೋಕೆ ನಿಜಕ್ಕೂ ಕಷ್ಟವೇ ಸರಿ. ಹೀಗಿದ್ದೂ ಮಾಜಿ ವಿಧಾನ ಪರಿಷತ್ ಸದಸ್ಯರೊಬ್ಬರು ಕಟ್ಟಿಸಿಕೊಟ್ಟ ಅಪಾರ್ಟ್‌ಮೆಂಟ್‌ನಲ್ಲಿ ಮೂಲಭೂತ ಸೌಕರ್ಯವನ್ನೇ ಕಲ್ವಿಸಿ ಕೊಟ್ಟಿಲ್ಲ. ಇದನ್ನು ಪ್ರಶ್ನಿಸಿದ್ದಕ್ಕೆ, ನಿವಾಸಿಗಳ ಮೇಲೆ ಗೂಂಡಾಗಿರಿ ಮೆರೆದಿದ್ದಾರೆ.

ಈ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಕಮ್ಮಸಂದ್ರ ಬಳಿ ಇರುವ ಇಟಿನಾ ನೀಲಾ ಅಪಾರ್ಟ್‌ಮೆಂಟ್ ನಲ್ಲಿ ನಡೆದಿದೆ. ಮಾಜಿ ವಿಧಾನಪರಿಷತ್ ಸದಸ್ಯರಾದ ದಯಾನಂದರೆಡ್ಡಿ, ಈ ಇಟಿನಾ ನೀಲಾ ಅಪಾರ್ಟ್‌ಮೆಂಟ್‌ ಕಟ್ಟಿಸಿಕೊಟ್ಟಿದ್ದಾರೆ. ಇಂತಹ ಅಪಾರ್ಟ್‌ಮೆಂಟ್‌ನಲ್ಲಿ ಕಳೆದ ಎರಡು ದಿನಗಳಿಂದ ನೀರು, ವಿದ್ಯುತ್ ಸೌಲಭ್ಯ ಬಂದ್‌ ಮಾಡಿದ್ದಾರೆ.

ಅಲ್ಲದೇ 1 ಸಾವಿರ ಚದರ ಅಡಿ ಮನೆಗೆ 3600 ನಿರ್ವಹಣಾ ವೆಚ್ಚ ಅಪಾರ್ಟ್‌ಮೆಂಟ್‌ ನಿವಾಸಿಗಳಿಂದ ಪಡೆಯುತ್ತಿದ್ದಾರಂತೆ. ಇದೀಗ ಮತ್ತೆ ನಿರ್ವಹಣಾ ವೆಚ್ಚ ಹೆಚ್ಚಳ ಮಾಡುತ್ತಿದ್ದಾರೆ. ಅಪಾರ್ಟ್‌ಮೆಂಟ್‌ನಲ್ಲಿ ಕಸ ತೆಗೆಯೋದು ಬಿಟ್ಟು ಬೇರೆ ಏನೂ ಮೂಲಭೂತ ಸೌಲಭ್ಯಗಳ ನಿರ್ವಹಣೆ ಇಲ್ಲ ಅಂತ ಕೇಳಿದ್ದಕ್ಕೆ, ಮಾಜಿ ವಿಧಾನಪರಿಷತ್‌ ಸದಸ್ಯರಾದ ದಯಾನಂದರೆಡ್ಡಿಯವರು ನಿವಾಸಿಗಳ ಮೇಲೆ ಗೂಂಡೂಗಿರಿ ನಡೆಸುತ್ತಿದ್ದಾರೆ ಎಂದು ನಿವಾಸಿಗಳು ಆರೋಪಿಸಿದ್ದಾರೆ.

ಈ ಸಂಬಂಧ ಇಂದು ಮಾಜಿ ವಿಧಾನಪರಿಷತ್‌ ಸದಸ್ಯರಾದ ದಯಾನಂದರೆಡ್ಡಿ ವಿರುದ್ಧ ಪ್ರತಿಭಟನೆಗೆ ಇಳಿದ ಅಪಾರ್ಟ್‌ಮೆಂಟ್‌ ನಿವಾಸಿಗಳು, ಸೂಕ್ತ ಕ್ರಮಕ್ಕಾಗಿ ಒತ್ತಾಯಿಸಿದರು. ಅಲ್ಲದೇ ಗೂಂಡಾಗಿರಿ ನಡೆಸುತ್ತಿರುವ ಮಾಜಿ ವಿಧಾನಪರಿಷತ್‌ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ನೀಡಿದ್ದಾರೆ.

Next Story

RELATED STORIES