ಖಾಸಗಿ ಶಾಲೆಯ ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್.?
ಚಿತ್ರದುರ್ಗ : ಖಾಸಗಿ ಶಾಲೆಯ ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್ ನೀಡುವ ಕುರಿತು ಸಮಾಲೋಚನೆ ನಡೆಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಬೆಳಗೆರೆಯ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ಸಧ್ಯಕ್ಕೆ ಸರ್ಕಾರಿ ಶಾಲೆಗಳಿಗೆ ಮಾತ್ರ ಉಚಿತ ಬಸ್ ಪಾಸ್ ವ್ಯವಸ್ಥೆ ಮಾಡಲಾಗಿದೆ. ಇದೊಂದು ಆರಂಭ ಮಾತ್ರ. ಇದರ ಸಾಧಕ-ಬಾದಕ ಪರಿಶೀಲಿಸಿ, ಆರ್ಥಿಕ ಪರಿಸ್ಥಿತಿ ನೋಡಿಕೊಂಡು ನಿರ್ಧಾರ ತೆಗೆದುಕೊಳ್ಳಲಾಗುವುದು' ಎಂದರು. ಕಾಂಗ್ರೆಸ್-ಜೆಡಿಎಸ್ ಸರ್ಕಾರದ ಬಗ್ಗೆ ಅನೇಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಸಮ್ಮಿಶ್ರ ಸರ್ಕಾರ ಐದು ವರ್ಷ ಪೂರೈಸುತ್ತೆ. ಇದರಲ್ಲಿ ಯಾವ ಅನುಮಾನವೂ ಬೇಡ' ಎಂದು ಲೋಕಸಭಾ ಚುನಾವಣೆ ಬಳಿಕ ಈ ಸರ್ಕಾರ ಉರುಳುತ್ತೆ ಎಂಬ ಕೆ.ಎನ್.ರಾಜಣ್ಣ ಅವರ ಹೇಳಿಕೆಗೆ ತಿರಿಗೇಟು ನೀಡಿದರು.
ಇನ್ನೂ ಇದೆ ವೇಳೆ ಮಾತಾನಾಡಿದ ಅವರು ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಅನಿರೀಕ್ಷಿತವಾಗಿ ಸೋಲು ಕಂಡಿರುವ ಕುರಿತು ಇನ್ನೂ ಆಳವಾದ ವಿಶ್ಲೇಷಣೆ ನಡೆದಿಲ್ಲ. ಆಗಸ್ಟ್ ಮೊದಲವಾರ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಚುನಾವಣೋತ್ತರ ವಿಮರ್ಶೆ ಅವರ ಸಮ್ಮುಖದಲ್ಲಿ ನಡೆಯಲಿದೆ ಎಂದರು.
ಛಲವಾದಿ ಕಾರ್ಯಕ್ರಮವಾದ ಹಿನ್ನೆಲೆಯಲ್ಲಿ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ಬೆಟರ್ ದಲಿತರು ಆರ್ಥಿಕವಾಗಿ ನಾವು ಸಬಲರಾಗಬೇಕಿದೆ ಒಂದು ರೀತಿಯಲ್ಲಿ ಇತಿಹಾಸ ಸೃಷ್ಟಿ ಮಾಡಿದ್ದೇನೆ ಕಾರಣ ಇಷ್ಟೇ ಎಲ್ಲರೂ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಹೋಗ್ತಾರೆ ಇದು ಅವಶ್ಯಕತೆ ಇದೆ ನಿಮ್ಮ ಮಕ್ಕಳನ್ನು ಒಂದು ಹೊತ್ತು ಊಟ ಬಿಟ್ಟಾದರೂ ವಿದ್ಯಾವಂತರನ್ನಾಗಿ ಮಾಡಿ ಎಡಗೈ ಮತ್ತು ಬಲಗೈ ಇರುವುದು ಕಾಂಗ್ರೆಸ್ ಪಕ್ಷಕ್ಕಾಗಿ ಕಾಂಗ್ರೆಸ್ ಪಕ್ಷ ಅವರ ರಕ್ಷಣೆಗೆ ಇದೆ ಎಂಬ ದೃಷ್ಟಿಯಿಂದ ನಾವು ಜೊತೆಗಿದ್ದೇವೆ ನಾನು ಹೋರಾಟ ಮಾಡುವವನು ಆದರೆ ಕತ್ತಿ ಗುರಾಣಿ ಹಿಡಿದು ಹೋರಾಟ ಮಾಡುವವನು ಅಲ್ಲ ಎಂದು ಹೇಳಿದರು.