Top

ಕಪಿಲಾ ನದಿಯಲ್ಲಿ ಮೋಕ್ಷಕ್ಕಾಗಿ ಮರಣ.?

ಕಪಿಲಾ ನದಿಯಲ್ಲಿ ಮೋಕ್ಷಕ್ಕಾಗಿ ಮರಣ.?
X

ಮೈಸೂರು : ದೆಹಲಿಯಲ್ಲಿ ಮೋಕ್ಷ ಸಿಗುತ್ತೆ ಅಂತ ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡ ಘಟನೆಯ ಬೆನ್ನಲ್ಲೇ, ಇಂತದ್ದೇ ಘಟನೆಯೊಂದು ರಾಜ್ಯದಲ್ಲೂ ಮುಂದುವರೆದಿದೆ. ರಾಜ್ಯದ ಸಾಂಸ್ಕೃತಿಕ ನಗರಿಯ ಕೂಗಳತೆ ದೂರದಲ್ಲಿರುವ ಕಪಿಲಾ ನದಿಯಲ್ಲಿ ಮೋಕ್ಷ ಸಿಗುತ್ತದೆ ಎಂದು ನಂಬಿದ ದಂಪತಿಗಳಿಬ್ಬರು, ನೀರಿಗೆ ಹಾರಿ ಆತ್ಮಹತ್ಯೆ ಯತ್ನಿಸಿ, ಪತಿ ಸಾವನ್ನಪ್ಪಿ, ಪತ್ನಿ ಬದುಕುಳಿದ ಘಟನೆ ನಡೆದಿದೆ.

ಮೂಡನಂಬಿಕೆ ನಿಷೇಧ. ಮೂಡನಂಬಿಕೆಯ ಬಗ್ಗೆ ಜಾಗೃತಿ ಮೂಡಿಸುವ ಈ ಹೊತ್ತಿನಲ್ಲೂ, ಮೂಡನಂಬಿಕೆಗೆ ಬಲಿಯಾಗುವವರ ಸಂಖ್ಯೆ ಏರುಗತಿಯಲ್ಲಿ ಸಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಮೈಸೂರಿನ ಕಪಿಲಾ ನದಿಯಲ್ಲಿ ನಡೆದ ಆತ್ಮಹತ್ಯೆ ಪ್ರಕರಣವೇ ನಿದರ್ಶನವಾಗಿದೆ.

ಅಂದಹಾಗೇ, ಬೆಂಗಳೂರಿನ ಹೆಬ್ಬಾಳ ನಿವಾಸಿಗಳಾದ ನಾಗರಾಜು ಮತ್ತು ಕಲಾವತಿ ಎಂಬ ದಂಪತಿಗಳದ್ದು ಸುಂದರ ಸಂಸಾರ. ಇಂತಹ ಸಂಸಾರಕ್ಕೆ ಮೂಡನಂಬಿಕೆಯ ಭೂತ ಮೆಟ್ಟಿ, ಮೂಡನಂಬಿಕೆಯ ಕೂಪಕ್ಕೆ ತಳ್ಳಲ್ಪಟ್ಟಿದ್ದಾರೆ. ಯಾರೋ ಹೇಳಿದ ಮಾತನ್ನು ಕೇಳಿರುವ ಈ ದಂಪತಿಗಳು ಕಪಿಲಾ ನದಿಗೆ ಹಾರಿ ಸಾವನ್ನಪ್ಪಿದರೇ ಮೋಕ್ಷ ದೊರೆಯಲಿದೆ ಎಂಬ ಮಾತನ್ನು ನಂಬಿದ್ದಾರೆ.

ಇದೇ ನಂಬಿಕೆಯಿಂದ ಇಂದು ಮೈಸೂರಿನ ಕಪಿಲಾ ನದಿಯ ಬಳಿಗೆ ತೆರಳಿದ್ದಾರೆ. ದಂಪತಿಗಳಿಬ್ಬರು ಕಪಿಲಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇದರಿಂದಾಗಿ ಪತಿ ನಾಗರಾಜು(70) ಸಾವನ್ನಪ್ಪಿದರೇ, ಪತ್ನಿ ಕಲಾವತಿ ಮಾತ್ರ ಬದುಕುಳಿದಿದ್ದಾರೆ. ಇದೀಗ ನಂಜನಗೂಡಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ನಂಜನಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Next Story

RELATED STORIES