Top

ಬೇಸಾಯಕ್ಕೆ ಸಿಗದ ಎತ್ತು : ರೈತ ಮಾಡಿದ್ದೇನು ಗೊತ್ತಾ.?

ಬೇಸಾಯಕ್ಕೆ ಸಿಗದ ಎತ್ತು : ರೈತ ಮಾಡಿದ್ದೇನು ಗೊತ್ತಾ.?
X

ದಾವಣಗೆರೆ : ಕಳೆದ ಮೂರು ವರ್ಷಗಳಿಂದ ದಾವಣಗೆರೆ ಜಿಲ್ಲೆ ಬೀಕರ ಬರಗಾಲಕ್ಕೆ ತುತ್ತಾಗಿದ್ದು ಹನಿ ನೀರಿಗೂ ತತ್ವಾರ ಎದುರಾಗಿತ್ತು. ಜನ ಜಾನುವಾರುಗಳಿಗೆ ಕುಡಿಯಲು ನೀರು ಸಿಗದೆ ರೈತರು ಎತ್ತುಗಳನ್ನು ಮಾರಾಟ ಮಾಡಿದ್ದರು. ಇದರಿಂದಾಗಿ ಬೇಸಾಯ ಮಾಡಲು ಎತ್ತುಗಳು ಸಿಗದಂತಹ ಪರಿಸ್ಥಿತಿ ರೈತರಿಗೆ ಬಂದೋದಗಿದೆ.

ಈ ಬಾರೀ ಚೆನ್ನಾಗಿ ಮಳೆ ಸುರಿಯುತ್ತಿದ್ದು ರೈತರು ಬಿತ್ತಿದ ಮೆಕ್ಕೆಜೋಳ ಬೆಳೆಯೂ ಚೆನ್ನಾಗಿ ಮೂಡಿದೆ. ಆದರೇ ಕಳೆ ತೆಗೆಯಲು ಎಡೆಕುಂಟೆ ಒಡೆಯ ಬೇಕಾಗಿದ್ದು ಎತ್ತುಗಳು ಸಿಗುತ್ತಿಲ್ಲ. ಇದರಿಂದಾಗಿ ದಾವಣಗೆರೆ ತಾಲ್ಲೂಕಿನ ಅತ್ತಿಗೆರೆ ಗ್ರಾಮದ ರೈತರು ಟ್ಯಾಕ್ಟರ್ ಗೆ ಎಡೆಕುಂಟೆ ಕಟ್ಟಿಕೊಂಡು ಹೊಲ ಉಳುಮೆ ಮಾಡುತ್ತಿದ್ದಾರೆ.

ಹೊಲ ಕುಂಟೆ ಒಡೆಯಲು ಊರೆಲ್ಲ ಹುಡುಕಿದರೂ ಒಂದು ಜೊತೆ ಎತ್ತು ಸಿಗುವುದು ಕಷ್ಟವಾಗಿದೆ. ಎತ್ತುಗಳಿಗೆ ಸಾಕಷ್ಟು ಡಿಮ್ಯಾಂಡ್ ಇದ್ದು 1500 ರಿಂದ 1800 ರೂಪಾಯಿ ನೀಡುತ್ತೇವೆ ಎಂದರೂ ಬೇಸಾಯ ಮಾಡಲು ಎತ್ತುಗಳು ಸಿಗುತ್ತಿಲ್ಲ. ಕೆಲ ರೈತರು ದುಬಾರಿ ಬಾಡಿಗೆ ಕೊಡಲಾಗಿದೆ ತಾವೇ ಎತ್ತುಗಳಾಗಿ ನೊಗಕ್ಕೆ ಎಗಲು ಕೊಟ್ಟರೇ, ಇನ್ನು ಕೆಲ ರೈತರು ಆಧುನೀಕತೆಗೆ ಮಾರು ಹೋಗಿ ತಮ್ಮಲ್ಲಿನ ಟ್ಯಾಕ್ಟರ್ ಗಳಿಗೆ ಎಡೆಕುಂಟೆಗಳನ್ನು ಕಟ್ಟಿಕೊಂಡು ಬೇಸಾಯ ಮಾಡುತ್ತಿದ್ದಾರೆ.

ಬರಗಾಲದಿಂದ ಬೇಸತ್ತ ರೈತರು ಜಾನುವಾರುಗಳನ್ನು ಸಿಕ್ಕಸಿಕ್ಕ ಬೆಲೆಗೆ ಮಾರಿದ್ದರು. ಆದರೇ ಇದೀಗ ಹೊಲ ಉಳಿಮೆ ಮಾಡಲು ಎತ್ತುಗಳು ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ರೈತರು ಬೇಸಾಯಕ್ಕೆ ಆಧುನೀಕತೆಯ ಟಚ್ ನೀಡಿದ್ದಾರೆ. ಈ ಮೂಲಕ ತಮ್ಮ ಅನುಕೂಲಕ್ಕೆ ತಕ್ಕಂತೆ ಬೇಸಾಯ ಮಾಡುತ್ತಿರುವುದು, ಇತರೆ ರೈತರಿಗೆ ಸ್ಪೂರ್ತಿಯಾಗುವಂತದ್ದಾಗಿದೆ.

ವರದಿ : ಪ್ರವೀಣ್ ಬಾಡ, ಟಿವಿ5 ದಾವಣಗೆರೆ

Next Story

RELATED STORIES