Top

ಅತೀ ಹೆಚ್ಚು ತೆರಿಗೆ ಕಟ್ಟಿದ ಕ್ರಿಕೆಟಿಗ ಯಾರು ಗೊತ್ತಾ?

ಅತೀ ಹೆಚ್ಚು ತೆರಿಗೆ ಕಟ್ಟಿದ ಕ್ರಿಕೆಟಿಗ ಯಾರು ಗೊತ್ತಾ?
X

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್‌.ಧೋನಿ 2017-18ರ ಆರ್ಥಿಕ ವರ್ಷದಲ್ಲಿ ಜಾರ್ಖಂಡ್ ನಲ್ಲಿ ಅತಿ ಹೆಚ್ಚಿನ ಮೊತ್ತದ ಆದಾಯ ತೆರಿಗೆ ಪಾವತಿಸಿದ್ದಾರೆ.

ಈ ಬಾರಿ ಎಂಎಸ್ ಧೋನಿ 12. 17 ಕೋಟಿ ರೂ. ಆದಾಯ ತೆರಿಗೆ ಪಾವತಿಸಿದ್ದು, ಬಿಹಾರ ಮತ್ತು ಜಾರ್ಖಂಡ್ ವಲಯದಲ್ಲಿ ಅತಿ ಹೆಚ್ಚಿನ ಮೊತ್ತದ ತೆರಿಗೆ ಸಲ್ಲಿಸಿದ್ದಾರೆ. 2016-17 ನೇ ಸಾಲಿನಲ್ಲಿ ಪಾವತಿಸಿದ್ದ ಮೊತ್ತಕ್ಕಿಂತಲೂ 1.24 ಕೋಟಿ ಹೆಚ್ಚಿನ ಮೊತ್ತವನ್ನು 2017ರ ಸಾಲಿನಲ್ಲಿ ಪಾವತಿಸಿದ್ದಾರೆ .

ಎಂ.ಎಸ್.ಧೋನಿ 2016-17ರಲ್ಲಿ 10.93 ಆದಾಯ ತೆರಿಗೆ ಪಾವತಿಸಿದ್ದರು. ಆದರೆ ಆ ವರ್ಷದಲ್ಲಿ ಅತಿ ಹೆಚ್ಚು ತೆರಿಗೆ ಪಾವತಿದಾರ ಆಗಿರಲಿಲ್ಲ ಎಂದು ಜಾರ್ಖಂಡ್ ವಲಯದ ಆದಾಯ ತೆರಿಗೆ ಇಲಾಖೆ ಮುಖ್ಯ ಆಯುಕ್ತ ವಿ. ಮಹಾಲಿಂಗಂ ತಿಳಿಸಿದ್ದಾರೆ.

Next Story

RELATED STORIES