Top

ಈ ರೈತ ಓದಿದ್ದು ಹತ್ತನೆ ತರಗತಿ : ಸಾಧನೆ ಮಾತ್ರ ಇತರೆ ರೈತರಿಗೆ ಸ್ಪೂರ್ತಿ.!!

ಈ ರೈತ ಓದಿದ್ದು ಹತ್ತನೆ ತರಗತಿ : ಸಾಧನೆ ಮಾತ್ರ ಇತರೆ ರೈತರಿಗೆ ಸ್ಪೂರ್ತಿ.!!
X

ಬೀದರ್ : ಬರಡು ಭೂಮಿಯಲ್ಲಿ ಬಂಗಾರದ ಬೆಳೆ ಬೆಳೆದ ಔರಾದ್‌ನ ಯುವ ರೈತ. ಹುಲ್ಲುಕೂಡ ಬೆಳೆಯದ ಬರಡು ಭೂಮಿಯಲ್ಲಿ ಕೃಷಿಯಲ್ಲಿ ಮಾಡಿದ್ದಾನೆ ಹೊಸ ಕ್ರಾಂತಿ. ವೈಜ್ಷಾನಿಕ ಪದ್ದತಿ ಮೂಲಕ ಬದನೆ ಬೆಳೆದು ತಿಂಗಳಿಗೆ ಎಣಿಸುತ್ತಿದ್ದಾನೆ ಲಕ್ಷ ಲಕ್ಷ ಹಣ.

ಹೌದು.. ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ತೆಗಂಪೂರ ಗ್ರಾಮದ ರೈತ ವೈಜಿನಾಥ್ ಕೃಷಿಯಲ್ಲಿ ಹೊಸ ಹೊಸ ಪ್ರಯೋಗಗಳನ್ನ ಮಾಡುವುದರ ಮೂಲಕ ಜಿಲ್ಲೆಯ ರೈತರು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದ್ದಾನೆ. ತನ್ನ 13 ಎಕರೆ ಜಮೀನಿನ ಪೈಕಿ, 10 ಗುಂಟೆಯಲ್ಲಿ ಬದನೆ ಗಿಡಗಳನ್ನ ನೆಟ್ಟು ವಾರಕ್ಕೆ ಎನಿಲ್ಲವೆಂದರು 20 ಸಾವಿರ ರೂಪಾಯಿ ಘಳಿಕೆ ಮಾಡುತ್ತಿದ್ದಾನೆ.

ಅಂದಾಹಗೇ, ರೈತ ವೈಜಿನಾಥ್ ಓದಿದ್ದು ಮಾತ್ರ ಹತ್ತನೆ ತರಗತಿ. ಮುಂದೆ ವಿದ್ಯಾಭ್ಯಾಸ ಮಾಡೋಕೆ ಆಗದೆ ಗ್ರಾಮವನ್ನ ಬಿಟ್ಟು ಹೈದ್ರಾಬಾದ್, ಬೆಂಗಳೂರು ಸೇರಿದಂತೆ ಇತರೆ ಕಡೆ ಕೂಲಿ ಕೆಲಸ ಮಾಡಿ ಜೀವನ ಮಾಡೋಕೆ ಹೋಗಿ ಬೆಸತ್ತು ವಾಪಾಸ್ ಆಗಿದ್ದಾರೆ. ತನ್ನ ಗ್ರಾಮದಲ್ಲಿರುವ ಬರಡು ಭೂಮಿಯಲ್ಲೇ ವ್ಯವಸಾಯಕ್ಕೆ ಮುಂದಾಗಿದ್ದಾರೆ. ಕೃಷಿ ಬಗ್ಗೆ ಎನು ಗೊತ್ತಿಲ್ಲದ ವೈಜಿನಾಥ್ ಆರಂಭದಲ್ಲಿ 10 ಗುಂಟೆ ಜಾಗದಲ್ಲಿ ಬದನೆ ಬೆಳೆ ಬೆಳೆಯಲು ಆರಂಭಿಸಿದ್ದಾರೆ. ತಾನು ಬಳೆದ ಬದನೆ ಬೆಳೆಯಲ್ಲಿ ಉತ್ತಮ ಇಳುವರಿ ಬಂದಿದ್ದರಿಂದ ಬದನೆ ಬೆಳೆಯನ್ನೇ ಬಂಗಾರದ ಬೆಳೆಯನ್ನಾಗಿ ಮಾಡಿಕೊಂಡಿದ್ದಾನೆ.

ತನ್ನ 12 ಎಕರೆ ಬರಡೂ ಜಮೀನಿನಲ್ಲಿ ಪ್ರಾರಂಭಲ್ಲೇ 10 ಗುಂಟೆ ಬದನೆ ಬೆಳೆ ಬೆಳೆದು ತಿಂಗಳಲ್ಲಿ ಬರೋಬ್ಬರಿ 1.75 ಲಕ್ಷದಷ್ಟು ಬಂಪರ್ ಬೆಳೆ ತೆಗೆದು, ಲಾಭ ಗಳಿಸಿದ್ದಾರೆ. ಇದನ್ನೇ ಮುಂದುವರೆಸಿದ್ದ ವೈಜಿನಾಥ್ ನಾಲ್ಕು ದಿಕ್ಕೊಮ್ಮೆ 5 ಕ್ವಿಂಟಾಲ್ ಗೂ ಅಧಿಕ ಬದನೆ ಕಾಯಿ ಮಾರಾಟ ಮಾಡುತ್ತಿದ್ದಾನೆ. ಪಕ್ಕದ ಜಹಿರಾಬದ್ ಹಾಗೂ ತಾಲೂರ್ ಗೆ ಹೋಗಿ ಮಾರಾಟ ಮಾಡಿಕೊಂಡು ಬರುತ್ತಿದ್ದಾರೆ. ಇವರ ಕೃಷಿಗೆ ಮನೆಯವರು ಕೂಡಾ ಬೆಂಬಲ ನೀಡಿರುವ ಕಾರಣ, ದಿನೇ ದಿನೇ ಅಧಿಕ ಲಾಭ ಪಡೆಯುತ್ತಿದ್ದಾರಂತೆ.

ಆಳಿನ ಸಮಸ್ಯೆಯನ್ನ ತಮ್ಮ ಮನೆಯವರೆ ನಿಗಿಸಿದ್ದು ಅವರಿಗೆ ಕೊಡುವ ಕೂಲಿಯ ಹಣವೂ ಕೂಡಾ ಈತನಿಗೆ ಉಳಿಯುತ್ತಿದೆ. ಜೊತೆ ಪಕ್ಕದ ಕೆರೆಯಿಂದ ಪೈಪ್ ಲೈನ ಹಾಕಿಸಿರುವ ವೈಜಿನಾಥ್, ಗಿಡಗಳಿಗೆ ನೀರಿನ ಸಮಸ್ಯೆಯಾದಾಗ ಕೆರೆಯ ನೀರನ್ನೇ ಬಳಸಿಕೊಂಡು, ಉತ್ತಮ ಫಸಲನ್ನ ಪಡೆದುಕೊಳ್ಳುತ್ತಿದ್ದಾರೆ.

ಇದರ ಜೊತೆಗೆ ಕೃಷಿಯಲ್ಲಿ ಜ್ಜಾನ ಹೊಂದಿರುವ ಗೆಳೆಯರು ಹಾಗೂ ಇಂಟರ್ ನೆಟ್ ನಿಂದ ಯಾವ ರುತುಮಾನಕ್ಕೆ ಯಾವ ಬೆಳೆ ಬೆಳೆದರೇ ಸೂಕ್ತ ಅಂತಾ ತಿಳಿದು ಬೆಳೆ ಬೆಳೆಯುವುದರಿಂದ ಕೃಷಿಯಲ್ಲಿ ಹೆಚ್ಚಿನ ಲಾಭ ಗಳಿಸಲು ಸಹಾಯಕವಾಗಿದೆ.

ಇಂದಿನ ಯುಗದಲ್ಲಿ ಕೃಷಿಯಂದ್ರೆ ಮೂಗು ಮುರಿಯೂ ಜನರೆ ಹೆಚ್ಚು. ಅಂತಹದರಲ್ಲಿ ಈ ಯುವ ರೈತ ವೈಜಿನಾಥ್‌ ಬರಡು ಭೂಮಿಯಲ್ಲಿ ಬಂಗಾರದ ಬೆಳೆ ತೆಗೆದು, ತಿಂಗಳಿಗೆ ಲಕ್ಷಾಂತರ ರೂಪಾಯಿ ಆದಾಯ ಗಳಿಸುವ ಕೃಷಿ ಮಾಡಿ, ಈತರ ರೈತರಿಗೆ ಮಾದರಿಯಾಗಿ ನಿಂತಿದ್ದಾರೆ.

ವರದಿ: ವಿಶ್ವ ಕುಮಾರ್, ಟಿವಿ5 ಬೀದರ್

Next Story

RELATED STORIES