Top

ರದ್ದಾಗುವುದೇ ಶಿರೂರು ಶ್ರೀಗಳು ಸಲ್ಲಿಸಿದ್ದ ಕೇವಿಯಟ್?

ಉಡುಪಿ: ಶಿರೂರು ಶ್ರೀಗಳ ಸಾವಿನಿಂದ ಅಷ್ಠಮಠಗಳಲ್ಲಿ ಒಂದಾದ ಶಿರೂರು ಮಠದಲ್ಲಿ ಸ್ಮಶಾನ ಮೌನ ಆವರಿಸಿದೆ. ಇಂದು ಶಿರೂರು ಮಠದಲ್ಲಿ ತಪ್ತಮುದ್ರಾ ಧಾರಣೆ ನಡೆಯಬೇಕಿತ್ತು. ಆದ್ರೆ ಶ್ರಿಗಳ ಅಸಹಜ ಸಾವಿನಿಂದ ತನಿಖೆಗೆ ಒಳಪಟ್ಟಿರುವ ಶಿರೂರು ಮಠದಲ್ಲಿ ಮುದ್ರಾಧಾರಣೆ ನಡೆಯುವುದಿಲ್ಲ.

ಶಿರೂರು ಶ್ರೀಗಳು ಇದ್ದಾಗ, ಭಕ್ತರಿಗೆ, ವಿದ್ಯಾರ್ಥಿಗಳಿಗೆ ಮುದ್ರಾಧಾರಣೆಗಾಗಿ ವಿಶೇಷ ವ್ಯವಸ್ಥೆ ಕಲ್ಪಿಸುತ್ತಿದ್ದರು. ಪ್ರತಿವರ್ಷ ಸ್ಥಳದಲ್ಲಿ ಭಕ್ತಸಾಗರ ಹರಿದು ಬರುತ್ತಿತ್ತು. ಆದ್ರೆ ಲಕ್ಷ್ಮಿವರ ಶ್ರೀಗಳ ನಿಧನದಿಂದ ಭಕ್ತರಲ್ಲಿ ದುಃಖ ಮಡುಗಟ್ಟಿದ್ದು, ಮಠದಲ್ಲಿ ಮೌನ ಆವರಿಸಿದೆ.

ಇನ್ನು ಪಟ್ಟದ ದೇವರಿಗಾಗಿ ಶಿರೂರು ಲಕ್ಷ್ಮೀವರ ತೀರ್ಥರು ಕೇವಿಯಟ್ ಸಲ್ಲಿಸಿದ್ದರು. ಪುತ್ತೂರು ಶ್ರೀಗಳನ್ನು ಹೊರತುಪಡಿಸಿ, ಇತರ ಮಠಾಧೀಶರ ವಿರುದ್ಧ ಕೇವಿಯಟ್ ಸಲ್ಲಿಸಲಾಗಿತ್ತು. ಆದ್ರೆ ಇದೀಗ ಅವರ ನಿಧನದಿಂದ ಕೇವಿಯಟ್ ರದ್ದಾಗುವ ಸಾಧ್ಯತೆ ಇದೆ.

ಪಟ್ಟದ ದೇವರ ವಿಗ್ರಹ ಕೃಷ್ಟಮಠದಲ್ಲಿದ್ದ ಕಾರಣ, ಪಲಿಮಾರು ಶ್ರೀಗಳ ವಿರುದ್ಧ ಕ್ರಿಮನಿನಲ್ ಕೇಸ್ ದಾಖಲಿಸಲು ಶಿರೂರು ಶ್ರೀಗಳು ಸಜ್ಜಾಗಿದ್ದರು.ಬುಧವಾರ ವಕೀಲ ರವಿಕಿರಣ್ ಮುರ್ಡೇಶ್ವರ ಅವರನ್ನು ಬರಹೇಳಿದ್ದರು. ಆದ್ರೆ ಅದೇ ದಿನ ಶಿರೂರು ಶ್ರೀಗಳು ಆಸ್ಪತ್ರೆಗೆ ದಾಖಲಾಗಿ, ಸಾವನ್ನಪ್ಪಿದ್ದರು.

ಇನ್ನೆರಡು ದಿನದಲ್ಲಿ ಶೀರೂರು ಶ್ರೀ ಮರಣೋತ್ತರ ಪರೀಕ್ಷೆಯ ತಾತ್ಕಾಲಿಕ ವರದಿ ಬರಲಿದೆ. ಅಲ್ಲದೇ ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಪ್ರತ್ಯೇಕವಾಗಿ ಬರಲಿದೆ.ಈ ಎಲ್ಲ ವರದಿಗಳಿಗಾಗಿ ಪೊಲೀಸರು ಕಾಯುತ್ತಿದ್ದು, ಶ್ರೀಗಳು ಸಲ್ಲಿಸಿದ್ದ ಕೇವಿಯಟ್ ರದ್ದಾಗುವ ಸಾಧ್ಯತೆ ಇದೆ.

Next Story

RELATED STORIES