Top

50 ರೂ ಲಾಕರ್ ಶುಲ್ಕ ಕಟ್ಟಲಾಗದೇ, 800 ಕೋಟಿ ರೂ ಕಳೆದುಕೊಂಡ ಉದ್ಯಮಿ.!!

50 ರೂ ಲಾಕರ್ ಶುಲ್ಕ ಕಟ್ಟಲಾಗದೇ, 800 ಕೋಟಿ ರೂ ಕಳೆದುಕೊಂಡ ಉದ್ಯಮಿ.!!
X

ಬೆಂಗಳೂರು : ಬೌರಿಂಗ್‌ ಇನ್ಸ್‌ಟಿಟ್ಯೂಟ್ ಕ್ಲಬ್‌ನ ಲಾಕರ್‌ನಲ್ಲಿ ಪತ್ತೆಯಾದ ಅಪಾರ ಪ್ರಮಾಣದ ನಗದು, ಚಿನ್ನಾಭರಣೆ ಮತ್ತು ಆಸ್ತಿ ಪತ್ರ ಪತ್ತೆ ಪ್ರಕರಣಕ್ಕೆ ಇದೀಗ ಹೊಸ ಟ್ವಿಸ್ಟ್‌ ದೊರೆತಿದೆ. ಈ ಪ್ರಕರಣದ ಹಿಂದ ರಾಜ್ಯದ ಪ್ರಭಾವಿ ರಾಜಕಾರಣಿಗಳ ಹೆಸರುಗಳು ಸಹ ಕೇಳಿ ಬಂದಿದ್ದು, ಹಿರಿಯ ರಾಜಕೀಯ ನಾಯಕರೇ ಅವಿನಾಶ್ ಅಮರ್ ಲಾಲ್ ಬೆನ್ನಿಗೆ ನಿಂತಿದ್ದಾರೆ ಎನ್ನಲಾಗುತ್ತಿದೆ.

ಪ್ರಕರಣಕ್ಕೆ ಹಿರಿಯ ರಾಜಕಾರಣಿಗಳಿಂದ ಒತ್ತಡ.?

ಈ ಪ್ರಕರಣವನ್ನು ಹಳ್ಳ ಹಿಡಿಸಲು, ತನಿಖೆಗೆ ಅಡ್ಡಿಪಡಿಸಲು ಒತ್ತಡ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ. ಉದ್ಯಮಿ ಅವಿನಾಶ್ ಅಮರ್‌ ಲಾಲ್‌ ಪ್ರಕರಣದಲ್ಲಿ ಅನುಮಾನದ ಹುತ್ತಗಳು ಗಿರಕಿಹೊಡೆಯುತ್ತಿದ್ದು, ತನಿಖೆಯನ್ನು ಹಳ್ಳ ಹಿಡಿಸಲು ಎಲ್ಲಿಲ್ಲದ ತಯಾರಿ ನಡೆಸಲಾಗುತ್ತಿದೆ ಎನ್ನಲಾಗಿದೆ. ಯಾಕೆಂದ್ರೆ, ಪ್ರಕರಣದ ಬಗ್ಗೆ ತನಿಖೆ ನಡೆಸಲು ಸ್ವತಹ ಐಟಿ ಅಧಿಕಾರಿಗಳೇ ಹಿಂದೇಟು ಹಾಕುತ್ತಿದ್ದಾರೆ.

ಅಲ್ಲದೇ ವಿದೇಶಿ ಕರೆನ್ಸಿ ಪತ್ತೆಯಾದರೂ ಕೂಡ ಲಿಮಿಟ್ಸ್ ಬಗ್ಗೆ ತನಿಖೆಯನ್ನು ಐಟಿ ಅಧಿಕಾರಿಗಳು ಚರ್ಚೆ ನಡೆಸುತ್ತಿದ್ದಾರೆ. ಹೀಗಾಗಿ ಪ್ರಕರಣ ಸಂಬಂಧ ಇಡಿಯಿಂದಲೂ ಎಫ್‌ಐಆರ್ ದಾಖಲಿಸಲು ಮೀನಾಮೇಷ ಎಣಿಸಲಾಗುತ್ತಿದೆ. ಈ ಎಲ್ಲಾ ಬೆಳವಣಿಗೆಯ ನಡುವೆಯೂ, ಅವಿನಾಶ್‌ ಅಮರ್ ಲಾಲ್‌ಗೆ ನೋಟೀಸ್ ನೀಡಿರುವ ಆದಾಯ ತೆರಿಗೆ ಇಲಾಖೆ, ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದೆ.

ಲಾಕರ್‌ನ 50 ರೂ ಶುಲ್ಕ ಕಟ್ಟಲಾಗದೇ 800 ಕೋಟಿ ಮೌಲ್ಯದ ಆಸ್ತೆ ಕಳೆದುಕೊಂಡ್ರು

ಈ ರಾಜಕೀಯ ಕೈಗೊಂಬೆಯಾಟದ ಕತೆ ಒಂದು ಕಡೆಯಾದ್ರೇ, ರಾಜಕೀಯ ಒತ್ತಡದಲ್ಲಿ ಅವಿನಾಶ್‌ ಅಮರ್ ಲಾಲ್‌ ಪ್ರಕರಣದ ಹಿಂದಿನ ಮತ್ತಷ್ಟು ಕತೆ ಬಿಚ್ಚಿಕೊಳ್ಳುತ್ತಾ ಹೋಗುತ್ತಿವೆ. ಅದರಲ್ಲೂ ಈ ಪ್ರಕರಣ ಬೆಳಕಿಗೆ ಬರೋದಕ್ಕೆ ಕಾರಣ, 50 ರೂಪಾಯಿ ವಾರ್ಷಿಕ ಲಾಕರ್‌ ಬಳೆಕೆ ಶುಲ್ಕ ಕಟ್ಟದ್ದೇ ಕಾರಣವಂತೆ.

ಅವಿನಾಶ್‌ ಅಮರ್‌ ಲಾಲ್‌, ಕಳೆದ ನಾಲ್ಕೈದು ವರ್ಷಗಳಿಂದ ಬೌರಿಂಗ್‌ ಇನ್ಸಿಟ್ಯೂಟ್‌ನ ಲಾಕರ್ ಬಳಸ್ತಾ ಇದ್ದರಂತೆ. ಈ ಲಾಕರ್ ಬಳಕೆ ಶುಲ್ಕ ಮೊದಲು ರೂ 5 ಇತ್ತಂತೆ. ಇಂತಹ ಶುಲ್ಕವನ್ನು ಈ ಹಿಂದೆ ರೂ 50ಕ್ಕೆ ಏರಿಕೆ ಮಾಡಲಾಗಿದೆ. ಈ ಶುಲ್ಕವನ್ನು ಕಟ್ಟದೇ ಲಾಕರ್ ಬಳಲುತ್ತಿದ್ದ ಅನೇಕರಿಗೆ ಸಂಸ್ಥೆ ನೋಟೀಸ್‌ ನೀಡಿದೆ.

ಲಾಕರ್ ಕೊರತೆ, ಅವಿನಾಶ್‌ ಅಮರ್‌ ಲಾಲ್‌ 800 ಕೋಟಿ ಪತ್ತೆ..!

ನೋಟೀಸ್‌ ನೀಡಿದರೂ ಪ್ರತ್ಯುತ್ತರವಾಗಲೀ, ಲಾಕರ್ ಶುಲ್ಕವಾಗಲೀ ಅವಿನಾಶ್ ಅಮರ್‌ ಲಾಲ್‌ ಅವರಿಂದ ಬಾರದ ಕಾರಣ, ಸಂಸ್ಥೆಗೆ ಏನ್‌ ಮಾಡೋದು ಎಂಬ ಚಿಂತೆ ಕಾಡಿದೆ. ಅಲ್ಲದೇ ಸಂಸ್ಥೆಗೆ ಬ್ಯಾಡ್ಮಿಂಟನ್‌ ಆಟವಾಡಲು ಬರುತ್ತಿದ್ದ ಇತರೆ ವ್ಯಕ್ತಿಗಳಿಗೆ ಲಾಕರ್ ಕೊರತೆ ಎದುರಾಗಿದೆ. ಹೀಗಾಗಿ ಸಂಸ್ಥೆಯಲ್ಲಿ ಸಕ್ರೀಯವಾಗಿರದೇ ಮತ್ತು ಅನಧಿಕೃತವಾಗಿರುವ ಲಾಕರ್‌ ಒಡೆಯುಲು ಮುಂದಾಗಿದೆ.

ಈ ಹಿನ್ನಲೆಯಲ್ಲಿ ಕಳೆದ ಜುಲೈ 16ರ ರಿಂದ ಒಟ್ಟು 126 ಲಾಕರ್‌ಗಳನ್ನು ಮುರಿಯಲಾಗಿದೆ. ಹೀಗೆ ಮುರಿಯುವಾಗ ದೊರೆತದ್ದೇ ಅವಿನಾಶ್‌ ಅಮರ್‌ ಲಾಲ್‌ ಬಳಸುತ್ತಿದ ಲಾಕರ್‌ನಲ್ಲಿ 800 ರೂ ಕೋಟಿ ಮೌಲ್ಯದ ಚಿನ್ನಾಭರಣ, ಹಣ ಮತ್ತು ಆಸ್ತಿ ದಾಖಲೆಗಳು.

ಒಂದು ವೇಳೆ ಅವಿನಾಶ್ ಅಮರ್‌ ಲಾಲ್ ಸಂಸ್ಥೆ ವಿಧಿಸಿದ್ದ ರೂ 50ರ ವಾರ್ಷಿಕ ಶುಲ್ಕ ಕಟ್ಟಿ, ಲಾಕರ್ ಬಳಕೆಯ ಶುಲ್ಕ ಮರುಪಾವತಿ ಮಾಡಿದ್ದರೇ, 800 ಕೋಟಿ ಪತ್ತೆಯಾಗುತ್ತಿರಲಿಲ್ಲ. ಕೇವಲ ರೂ 50 ಲಾಕರ್ ಬಳಕೆ ಶುಲ್ಕ ಕಟ್ಟದೇ ಇದ್ದ ಕಾರಣ, ಇದೀಗ ಅವಿನಾಶ್ ಅಮರ್‌ ಲಾಲ್‌ 800 ರೂ ಕೋಟಿಯ ಆಸ್ತಿಯು ಲಾಕರ್‌ ಮುರಿದಾಗ ಪತ್ತೆಯಾಗಿದೆ.

Next Story

RELATED STORIES