Top

ಅಮಾನತಾದ ಶ್ರೀಲಂಕಾ ಕ್ರಿಕೆಟಿಗ

ಅಮಾನತಾದ ಶ್ರೀಲಂಕಾ ಕ್ರಿಕೆಟಿಗ
X

ಕೊಲೊಂಬೋ: ಶ್ರೀಲಂಕಾ ತಂಡದ ಕ್ರಿಕೆಟಿಗ ಧನುಷ್ಕಾ ಗುಣತಿಲಕ ಅವರನ್ನು ಎಲ್ಲಾ ಮಾದರಿಗಳ ಕ್ರಿಕೆಟ್ ನಿಂದ ಅಮಾನತುಗೊಳಿಸಲಾಗಿದೆ.

ದಕ್ಷಿಣ ಆಫ್ರಿಕಾ-ಶ್ರೀಲಂಕಾ ನಡುವಿನ ಟೆಸ್ಟ್ ಪಂದ್ಯ ನಡೆಯುತ್ತಿದ್ದು, ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಿದ್ದಕ್ಕಾಗಿ ಗುಣತಿಲಕರನ್ನು ಅಮಾನತುಗೊಳಿಸಲಾಗಿದೆ. ಅಷ್ಟೇ ಅಲ್ಲದೇ ಗುಣತಿಲಕ ಅವರ ಸಂಭಾವನೆಯನ್ನೂ ತಡೆ ಹಿಡಿಯಲಾಗಿದೆ.

ಶ್ರೀಲಂಕಾ ಕ್ರಿಕೆಟ್‌ನಿಂದ ಪ್ರಾಥಮಿಕ ಹಂತದ ವಿಚಾರಣೆಗೆ ಆದೇಶ ನೀಡಿದ ಬೆನ್ನಲ್ಲೇ ಅಮಾನತು ಮಾಡಲಾಗಿದೆ. ಈ ಹಿಂದೆಯೂ ಗುಣತಿಲಕ ಶಿಸ್ತುಕ್ರಮ ಎದುರಿಸಿದ್ದರು.

Next Story

RELATED STORIES