Top

'ನನಗೆ ಮಕ್ಕಳಿರೋದು ಸಾಬೀತುಪಡಿಸಿದ್ರೆ ಪೀಠತ್ಯಾಗ ಮಾಡುವೆ'..!

ನನಗೆ ಮಕ್ಕಳಿರೋದು ಸಾಬೀತುಪಡಿಸಿದ್ರೆ ಪೀಠತ್ಯಾಗ ಮಾಡುವೆ..!
X

ಉಡುಪಿ: ನನಗೆ ಮಕ್ಕಳಿರೋದು ಸಿದ್ದವಾದ್ರೆ ಪೀಠತ್ಯಾಗ ಮಾಡುವೆ ಎಂದು ಪೇಜಾವರ ಶ್ರೀ ಹೇಳಿಕೆ ನೀಡಿದ್ದಾರೆ. ಚೆನ್ನೈನಲ್ಲಿ ಮಾತನಾಡಿದ ಪೇಜಾವರ ಶ್ರೀ, ತಾರುಣ್ಯದಲ್ಲಿ ಸ್ತ್ರೀ ಸಂಗವಿತ್ತು ಅನ್ನೋದು ಸುಳ್ಳು. ತಮಿಳುನಾಡಿನಲ್ಲಿ ನನಗೆ ಮಗಳಿದ್ದಾಳೆ ಅನ್ನೋದು ಶುದ್ಧ ಸುಳ್ಳು. ಈ ಹಿಂದೆ ಇದೇ ಅಭಿಪ್ರಾಯ ಹೇಳಿ ಕೆಲವರು ಪತ್ರ ಬರೆದಿದ್ದರು. ಅದರಲ್ಲಿ ನನಗೆ ಗಂಡುಮಗು ಇದೆ ಎಂದು ಬರೆಯಲಾಗಿತ್ತು. ಇವೆಲ್ಲಾ ಕೇವಲ ಕಲ್ಪನೆ, ದೇಶದ ಯಾರೂ ನಂಬಲ್ಲ. ಯಾವುದೇ ಪರೀಕ್ಷೆ, ವಿಚಾರಣೆ ಎದುರಿಸಲು ನಾನು ಸಿದ್ಧ ಎಂದಿದ್ದಾರೆ.

ಅಲ್ಲದೇ ಇದನ್ನು ಸಿದ್ದಪಡಿಸಲು ಸಾಧ್ಯವೇ ಇಲ್ಲ. ಇದು ಸಿದ್ದವಾದರೆ ನಾನು ಪೀಠತ್ಯಾಗ ಮಾಡುವೆ ಎಂದು ಪೇಜಾವರ ಶ್ರೀಗಳು ಚೆನ್ನೈನಿಂದ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಶೀರೂರು ಬಗ್ಗೆ ನನ್ನ ಹೇಳಿಕೆಯನ್ನು ಕೆಲವರು ಆಕ್ಷೇಪಿಸಿದ್ದಾರೆ. ಮಾಧ್ಯಮದವರ ಪ್ರಶ್ನೆಗೆ ನಾನು ಉತ್ತರ ನೀಡಿದ್ದಷ್ಟೇ. ರಘುವಲ್ಲಭ ತೀರ್ಥ, ಮನೋಜ್ಞ ತೀರ್ಥ, ಸುಬ್ರಹ್ಮಣ್ಯದ ಸ್ವಾಮೀಜಿಗಳ ಪೀಠತ್ಯಾಗದಲ್ಲಿ ನನ್ನ ಪಾತ್ರವಿಲ್ಲ. ವಿಶ್ವವಿಜಯರನ್ನು ನಾನು ಕಳುಹಿಸಿಯೇ ಇಲ್ಲ. ಅವರಾಗಿಯೇ ಹೋದರು, ನನಗೆ ತಿಳಿಸದೇ ಪೀಠತ್ಯಾಗ ಮಾಡಿದ್ದರು. ಎಲ್ಲದಕ್ಕೂ ನನ್ನನ್ನು ದೂಷಿಸುವುದು ಸರಿಯಲ್ಲ ಎಂದಿದ್ದಾರೆ. ಅಲ್ಲದೇ ಶೀರೂರು ಸ್ವಾಮೀಜಿಯಿಂದ ನಾನು ಯಾವುದೇ ಹಣ ಅಪೇಕ್ಷಿಸಿಲ್ಲ. ಬಹಿರಂಗ ವಿಚಾರಣೆಗೆ ನಾನು ಸದಾ ಸಿದ್ದ ಎಂದಿದ್ದಾರೆ.

ಶಿರೂರು ಶ್ರೀಗಳ ಸಾವಿರೂ ಮುನ್ನ ಅವರು ಮಾತನಾಡಿದ ಆಡಿಯೋದಲ್ಲಿ, ಪೇಜಾವರ ಶ್ರೀಗಳಿಗೂ ಮಕ್ಕಳಿದ್ದಾರೆ. ತಾರುಣ್ಯದಲ್ಲಿ ಅವರಿಗೆ ಹೆಣ್ಣಿನ ಸಂಪರ್ಕವಿತ್ತು ಎಂದು ಆರೋಪ ಮಾಡಲಾಗಿತ್ತು. ಈ ಕಾರಣಕ್ಕಾಗಿ ಪೇಜಾವರ ಶ್ರೀಗಳು ಪತ್ರಿಕಾ ಹೇಳಿಕೆ ನೀಡಿದ್ದಾರೆ.

Next Story

RELATED STORIES